Wednesday, January 26, 2011

ಗೊಂಚಲು - ಒಂದು...

"ಭೂತಕಾಲದ ನೋವು ವರ್ತಮಾನದ ನಗುವಾಗುತ್ತೆ. ಎದುರಾಗುವ ಪ್ರತಿ ನೋವನ್ನೂ ನಗುವಾಗಿಸಿಕೊಳ್ಳಬಲ್ಲವರಾದರೆ ಕೊನೆಗೆ ಬದುಕೆಲ್ಲ ನಗುವೇ ಆಗಿಬಿಡುತ್ತೆ."


ಸವಿನೆನಪುಗಳ ನಡುವೆ ಇಣುಕಿ ನೋಡುವ ಒಂದ್ಯಾವುದೋ ಕಹಿ ನೆನಪಿಗೆ ತನ್ನ ಕಣ್ಣಂಚ ನಗುವನ್ನು ಕೊಲ್ಲುವ ತಾಕತ್ತಿಲ್ಲದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ವ್ಯಕ್ತಿಗೆ ಬದುಕೊಂದು ಸ್ವರ್ಗವೇ ಆಗುತ್ತದೆ..


ಒಂದು ಭವ್ಯ ಭವಿಷ್ಯತ್ತಿನ ಪುಟ್ಟ ಪ್ರಣತಿ ಸದಾ ಮನದಲ್ಲಿ ಉರಿಯುತ್ತಲೇ ಇರಲಿ. ಬದುಕಿನ ಯಾವುದೋ ಒಂದು ತಿರುವಿನಲ್ಲಿ ಗೆಲುವೆಂಬುದು ಅನಿರೀಕ್ಷಿತವಾಗಿ ಫಕ್ಕನೇ ಎದುರಾಗಿ ಕೈಯ ಹಿಡಿಯುತ್ತೆ ಎಂಬ ಭರವಸೆ ಬದುಕಿಗೆ ಬೆನ್ನು ತಿರುಗಿಸದೇ ಮುನ್ನಡೆಯಲು ಪ್ರೇರೇಪಿಸುತ್ತಿರಲಿ. ಅದು ಸುಳ್ಳೇ ಭರವಸೆಯಾದರೂ ಸರಿ. ಅದು ನಮ್ಮೊಳಗೆ ನಾವು ಸದಾ ನಗುತಿರಬಲ್ಲ ಆತ್ಮ ಶಕ್ತಿಯನ್ನು ಹೊಂದಿಸಿಕೊಟ್ಟರೆ ಅಷ್ಟೇ ಸಾಕು.


ನಗೆಯು ಸಾಂಕ್ರಾಮಿಕವಾಗಲಿ....

2 comments:

  1. ಹೌದು ಶ್ರೀ..
    ಸುಳ್ಳೇ ಸುಳ್ಳು ಭರವಸೆಯಾದರೂ ನಮ್ಮ ಬದುಕಿನ ಜ್ಯೋತಿಯನ್ನು ಅದಕ್ಕೆ ಹಚ್ಚಬಲ್ಲ ತಾಕತ್ತು ಅದಕ್ಕೆ ಇದೆಯಾದರೆ ಅದಕ್ಕಿಂತ ಹೆಚ್ಚಿಗೆ ಏನು ಬೇಕು??

    ನೀವೇ ಹೇಳಿದಂತೆ ನಗೆಯು ಸಂಕ್ರಾಮಿಕವಾಗಲಿ

    ReplyDelete
  2. ನೀನು ಹೇಳಿದಂತೆ ಭೂತ ಕಾಲದ ನೋವನ್ನು ನಗುವಾಗಿಸೋಣ.. ಅದರ ಜಾಡು ಹಿಡಿದು ಮತ್ತೆ ಮತ್ತೆ ನೊವನ್ನನುಭವಿಸುವುದರಲ್ಲಿ ಅರ್ಥವಾದರೂ ಏನು ...? ನಾಳೆಯ ಭರವಸೆಯ ನಿರೀಕ್ಷೆಯಲ್ಲಿ ಸುಂದರವಾದ ಇಂದನ್ನು ಕಟ್ಟೋಣ ..

    ReplyDelete