Sunday, February 20, 2011

ಗೊಂಚಲು - ಆರು...

"ಈ ಪ್ರೀತಿ ಒಂಥರಾ ....."


ಪ್ರತೀ ಜೀವಕ್ಕೂ, ಗಂಡು - ಹೆಣ್ಣೆಂಬ ಭೇದವೇ ಇಲ್ಲದೆ ಎಲ್ಲ ಜೀವಗಳಿಗೂ ಒಂದು ಕನಸು,ಕಲ್ಪನೆ, ಆಸೆ ಇರುತ್ತೇನೋ. ತಾನೂ ಯಾರನ್ನಾದ್ರೂ ಪ್ರೀತಿಸ್ಬೇಕು - ಯಾರಿಂದಲೋ ಪ್ರೀತಿಸಲ್ಪಡಬೇಕು - ಒಂದಿಡೀ ಬದುಕನ್ನು ಅವರ ಸಾಂಗತ್ಯದಲ್ಲಿ ಕಳೀಬೇಕು - ತನ್ನೆಲ್ಲ ಪ್ರೀತೀನ ಅವ್ರಿಗೆ ಧಾರೆ ಎರೀಬೇಕು - ಅವರೆಲ್ಲ ಪ್ರೀತಿ ಭಾವಗಳನ್ನ ತನ್ನದನ್ನಾಗಿಸ್ಕೋಬೇಕು - ಅವರ ಮನೋಪ್ರಪಂಚದ ಕೇಂದ್ರಬಿಂದು ತಾನೇ ಆಗ್ಬೇಕು. ಸಿನೆಮಾಗಳ ಹಾಡುಗಳಲ್ಲಿ ತೋರಿಸ್ತಾರಲ್ಲ ಹಾಗೇ, ತಾನೂ ಕೂಡ ಜಗತ್ತಿನೆಲ್ಲ ಸುಂದರ ತಾಣಗಳನ್ನು ನೋಡಿ ಸವೀಬೇಕು. ಬೆಸೆದ ತೆಕ್ಕೇನ ಸಡಿಲಿಸದೇ ಓಡಾಡ್ಬೇಕು,ಓಲಾಡ್ಬೇಕು. ಮುತ್ತೇ ಮಾತಾಗ್ಬೇಕು, ಮತ್ತಲ್ಲಿ ತೇಲಾಡ್ಬೇಕು. ಹೀಗೇ ಏನೇನೋ ಕನಸುಗಳು - ಕಲ್ಪನೆಗಳು. ತನ್ನ ಜೀವ ತನ್ನಂತದೇ ಮತ್ತೊಂದು ಜೀವಾನ ಸೃಷ್ಠಿಸೋ ವಯಸ್ಸು ಮೂಡಿದ್ದು ತನಗೇ ತಿಳಿದಾಗಿನಿಂದ ಈ ಆಸೆ, ಕನಸು ಹೃದಯದ ಬಡಿತದೊಂದಿಗೇ ಮಿಳಿತವಾಗಿ ಬಿಡತ್ತೇನೋ. ಆದ್ರೆ ವಿಪರ್ಯಾಸ ಗೊತ್ತಾ.! 99.9% ಜನರ ಈ ಕನಸು ಕನಸಾಗಿಯೇ ಉಳಿದು ಹೋಗತ್ತೆ. ಬದುಕಿನ ಘನ ವಾಸ್ತವಗಳು "ಪ್ರೀತಿ"ಯಂಥ ತೀವ್ರತರ ಭಾವಗಳನ್ನೂ ಸಾಯಿಸಿ ಸಮಾಧಿ ಮಾಡಿಬಿಡುತ್ವೆ. ಕನಸಿನ ಗುಂಗಲ್ಲಿ ಕಣ್ತೆರೆದರೆ - ಕಣ್ಣೆದುರಿನ ವಾಸ್ತವ ರಾಚುತ್ತೆ. ಆದ್ರೂ ಈ ಕನಸುಗಳೇನೇನೋ ಬದುಕನ್ನು ಇಷ್ಟಾದರೂ ಸಹನೀಯವಾಗಿರಿಸೋದು. ಅಲ್ವಾ.? ಅದಕ್ಕೇ ಇರಬೇಕು ಕವಿ ಪ್ರೀತೀನ ಮಧುರ ಯಾತನೆ ಅಂತಂದದ್ದು. ಕೆಲವರು ಪ್ರೀತಿಸಲಾರದೇ - ಪ್ರೀತಿ ಸಿಗದೇ ಒದ್ದಾಡ್ತಾರೆ. ಇನ್ಕೆಲವರು ಪ್ರೀತಿಸಿ - ಪ್ರೀತೀನ ಉಳ್ಸ್ಕೊಳ್ಳೋಕಾಗ್ದೇ ಒದ್ದಾಡ್ತಾರೆ. 



ಒಟ್ನಲ್ಲಿ ಈ ಪ್ರೀತಿ ಒಂಥರಾ.....
                                    
               Yes, ಈ ಪ್ರೀತಿ ಒಂಥರಾsssss.....




5 comments:

  1. ಮನಸ್ಸಿನ ಮಾತುಗಳನ್ನು ಅದ್ಬುತವಾಗಿ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿರುವುದಕ್ಕೆ ಧನ್ಯವಾದಗಳು,
    ಬರಹದ ಶೈಲಿ ಮತ್ತು ಸಾಹಿತ್ಯ ಚೆನ್ನಾಗಿದ್ದು, keep going................

    ReplyDelete
  2. ಬಹುಶಃ ಪ್ರೇಮ ಹಳತಾದ ದಿನ ಜಗತ್ತಿನಲ್ಲಿ ಶೂನ್ಯ ಆವರಿಸಬಹುದೇನೋ..?
    ನಿಜವಾದ ಪ್ರೇಮ ಸರ್ವಕಾಲಿಕ ಸತ್ಯ..!

    ReplyDelete
  3. ಬಹುಶಃ ಪ್ರೇಮ ಹಳತಾದ ದಿನ ಜಗತ್ತಿನಲ್ಲಿ ಶೂನ್ಯ ಆವರಿಸಬಹುದೇನೋ..?
    ನಿಜವಾದ ಪ್ರೇಮ ಸರ್ವಕಾಲಿಕ ಸತ್ಯ..!

    ReplyDelete
  4. ಚಂದದ ಬರಹ ಭಾವ ಶ್ರೀ...

    ReplyDelete