ಆಯಿ ಅಂದರೆ ಆಯಿ ಅಷ್ಟೇ.....
(ಹುಡುಗಿಯ ಹೊಗಳಿ ಪದಗಳ ಪೋಣಿಸಿದಂತಲ್ಲ ಅಮ್ಮನೊಲವ ಬಣ್ಣಿಸುವುದು...)
ಬದುಕು ಅವಳಿಗೆಂದು ಕೈಯೆತ್ತಿ ಒಂದಾದರೂ ನಗುವ ಕೊಟ್ಟಿದ್ದ ಕಂಡಿಲ್ಲ...
ಹಾಗಂತ ಅವಳೆಂದೂ ಕಣ್ತುಂಬಿಕೊಂಡು ಕೂತಿದ್ದನ್ನೂ ಕಂಡಿಲ್ಲ...
ಕೇವಲ ತನಗೆ ಅಂತ ಏನನ್ನೂ ಮಾಡಿಕೊಂಡದ್ದಿಲ್ಲ...
ಇಲ್ಲಿ ನಾ ನಗುವುದಕ್ಕಾಗಿ ಅಲ್ಲಿ ಅವಳು ಹಲ್ಲು ಕಚ್ಚಿ ಬದುಕ ಸೈರಿಸಿಕೊಳ್ಳುತ್ತಾಳೆ - ಆಗೀಗ ಸೆರಗಿನಂಚು ಒದ್ದೆಯಾದದ್ದೂ ನನ್ನ ಕಣ್ಣಳತೆಯಿಂದಾಚೆಯೇ ಉಳಿವಂತೆ ನೋಡಿಕೊಳ್ಳುತ್ತಾಳೆ...
ಅಕ್ಷರ ಗೊತ್ತಿಲ್ಲ – ಮಾತಿಗೆ ಬಣ್ಣ ಬಳಿಯುವ ಚಾತುರ್ಯದ ಅರಿವಿಲ್ಲ...
ಬದುಕನ್ನು ಹಳಿಯದೇ, ಎಂಥ ಸಮಸ್ಯೆಯ ಎದುರೂ ತಲೆ ಬಾಗದೇ, ಅವುಡುಗಚ್ಚಿ ನಡೆದುಬಿಡುವ ಅವಳ ಬದುಕ ರೀತಿ ತುಂಬಾನೇ ಕಲಿಸಿದೆ ನನಗೆ...
ಬದುಕು ಬಂಧಗಳೆಲ್ಲ ಸೇರಿ ದಯಪಾಲಿಸಿದ ನೋವುಗಳನೆಲ್ಲ ತನ್ನ ಗೆಲುವಿನ ನಗೆಯ ಬೆಳೆಯ ಗೊಬ್ಬರವಾಗಿಸಿಕೊಂಡ ಅವಳ ಆತ್ಮ ಶಕ್ತಿಯ ಪರಿಯನ್ನು ದಂಗಾಗಿ ನೋಡುತ್ತೇನೆ...
ಇಂದಿಗೂ – ಎಂದಿಗೂ ಅವಳ ಜೀವನ ಪ್ರೀತಿಯೇ ನನ್ನ ಬದುಕ ಸ್ಫೂರ್ತಿ...
ನಂಗೆ ಉಸಿರು ನೀಡಿದ ನನ್ನ ಮೊದಲ ಆಪ್ತ ಗೆಳತಿ ಆಕೆ...
ನಾನೇ ದೂರವಿಟ್ಟ ನನ್ನ ನಾಳೆಗಳ ಕನಸುಗಳನ್ನು ಅವಳು ಕಾಣುತ್ತಾಳೆ ನನಗಾಗಿ...
ಅವಳೆದೆಯ ಬೆಂಕಿಯಲಿ ಚಳಿ ಕಾಯಿಸಿಕೊಂಡು ಬೆಚ್ಚಗಿರುವ ಮಹಾ ಪುರುಷ ಮಗರಾಯ ನಾನು...
ಬದುಕಿನೊಂದಿಗೆ ಜಿದ್ದಿಗೆ ಬಿದ್ದ ಮಹಾ ಜಿಗುಟಿನ ಹೆಣ್ಣು ಜೀವ ಅವಳು - ಅವಳಿಗಿಂದು ಅರವತ್ತೇಳು ವಸಂತಗಳು ತುಂಬಿದವು – ಇಂದಿಗೂ ಅವಳಲ್ಲಿರುವ ಕುಂದದ ಜೀವನೋತ್ಸಾಹ ನನ್ನ ಅಚ್ಚರಿ...
ಉಹುಂ – ಅವಳಿಗದರ ಅರಿವಿಲ್ಲ...
ಹೇಳೋಣವೆಂದರೆ ಅವಳೂರಲ್ಲಿ ಜಂಗಮವಾಣಿ ಕೂಡ ಸದ್ದು ಮಾಡೋಲ್ಲ...
ಇಲ್ಲೇ ಹೇಳುತ್ತೇನೆ – ಪ್ರತ್ಯಕ್ಷವಾಗಿ ಅದು ಅವಳ ತಲುಪಲಾರದೆಂದು ಗೊತ್ತಿದ್ದೂ....
ಹೇಯ್ – ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಕಣೇ “ಸಾವಿತ್ರೀ...” ❤❤
ನನ್ನೆಲ್ಲ ಶಬ್ಧ ಬಂಢಾರದ ನಿಲುಕಿನಾಚೆಯ ಅಮೂರ್ತ ಭಾವಸೆಲೆ ನಿನ್ನ ಮಮತೆ...
ನೀನೆಂದರೆ ಎಂಥ- ಗ್ರೀಷ್ಮದ ದಾಳಿಗೂ ಒಂದೇ ಒಂದು ಹನಿ ಕೂಡಾ ಬತ್ತದ ಒಲವ ಸರಿತೆ...
ಎನ್ನ ಕಾಯುವ ಮಮತೆಯೊಡಲೇ ಲವ್ ಯೂ ಕಣೇ... ❤ ❤ ❤
(ಹುಡುಗಿಯ ಹೊಗಳಿ ಪದಗಳ ಪೋಣಿಸಿದಂತಲ್ಲ ಅಮ್ಮನೊಲವ ಬಣ್ಣಿಸುವುದು...)
ಅವಳ ಮಡಿಲ ನಗು ನಾನು...:) |

ಪುಟ್ಟ most effective ಬರಹ.
ReplyDeleteಹೌದು ನೀ ಹೇಳೋದು.
ReplyDeleteಆಯಿ ಅಂದರೆ ಆಯಿ ಮಾತ್ರ.ಅಲ್ಲವಳ ಫೋನು ರಿಂಗಣಿಸದಿದ್ದರೂ ತಲುಪೀತು ಅವಳಿಗೆ ನಿನ್ನೀ ಪ್ರೀತಿಯ ಶುಭಾಶಯ.
ಭಾವ ಎಂದಿನಂತೆ ಮನ ತಟ್ತು.
ಆಯಿಯ ಇವತ್ತಿನ ಖುಷಿಗೆ ನಂಗೂ ಒಂದು ಚಿಕ್ಕ ಪಾಲು ಬೇಕೇ ಬೇಕು :)
happy happy birth day ಆಯಿ
<3 <3
ReplyDelete<3 <3
ReplyDeleteಇಷ್ಟವಾಗುವಿಕೆ ಅನ್ನುವುದು ಕನಿಷ್ಠ ಪದವಾದೀತೇನೋ ಅನ್ನುವ ಅಂಜಿಕೆಯಿದೆ ನನ್ನಲ್ಲಿ..
ReplyDeleteನಿನ್ನಂಥಹ ಗೆಳೆಯನನ್ನು ಬದುಕಿಗೆ ದಯಪಾಲಿಸಿದ ಆಯಿಗೆ ನನ್ನ ಕಡೆಯಿಂದಲೂ ಹ್ಯಾಪ್ಪಿ ಬರ್ತಡೇ..
ಇಷ್ಟವಾಯಿತು ತುಂಬಾ... <3 :*