Wednesday, March 2, 2011

ಗೊಂಚಲು - ಏಳು...

"ಜನಿಸಿದ  ಘಳಿಗೆಯ  ನಂತರದ  ಪ್ರತಿ  ಕ್ಷಣವೂ  ಸಾವಿನದಾಗಬಹುದಾದರೆ - ಈ  ಕ್ಷಣ  ನಾವು  ಬದುಕಿದ್ದೇವೆ  ಎನ್ನುವುದಕ್ಕಿಂತ  ದೊಡ್ಡ  ಕಾರಣ  ಇನ್ಯಾವುದು  ಬೇಕು  ಈ  ಬದುಕನ್ನು  ಪ್ರೀತಿಸಲು, ಆಸ್ವಾದಿಸಲು.  ಈ  ಜೀವನವ  ಆರಾಧಿಸಲು."

"ಸಾವು - ಅಂತಿಮ  ವಾಸ್ತವವಾದರೆ,  ಬದುಕು - ನಿತ್ಯ  ಸತ್ಯ..."

ಬದುಕನ್ನು  ಪ್ರೀತಿಸುವವರಿಗೆ  ಈ  ಬದುಕಿನ  ಬಗ್ಗೆ,  ಅದು  ಕೊಡಮಾಡಿದ  ಸುಖ - ದುಃಖಗಳ  ಬಗ್ಗೆ,  ಆಸೆ - ನಿರಾಸೆಗಳ  ಕಡೆಗೆ  ಯಾವೊಂದೂ  ತಕರಾರುಗಳಿರುವುದಿಲ್ಲ.  ಬದುಕನ್ನು  ಯಾವುದೇ  ಪೂರ್ವಾಗ್ರಹಗಳಿಲ್ಲದೆಯೇ ಪ್ರಾಮಾಣಿಕವಾಗಿ  ಪ್ರೀತಿಸಬಲ್ಲವನು  ಸಾವನ್ನು  ಕೂಡ  ಸಮಚಿತ್ತದಿಂದ  ನೋಡಬಲ್ಲವನಾಗುತ್ತಾನೆ.

ಬದುಕಿರುವ  ಪ್ರತಿ  ಘಳಿಗೆಯನ್ನೂ  ಅದಮ್ಯವಾಗಿ  ಪ್ರೀತಿಸುತ್ತಾ - ಸಾವನ್ನೂ  ಗೌರವದಿಂದ  ನಗುತ್ತ  ಸ್ವಾಗತಿಸಬಲ್ಲವನಾಗುವುದರೆಡೆಗೆ  ನನ್ನ  "ಪಯಣ..."

ಸಾವು - ಒಂದು  ನಿಲ್ದಾಣ ?????


3 comments:

  1. ಸಾವು - ಅಂತಿಮ ವಾಸ್ತವವಾದರೆ, ಬದುಕು - ನಿತ್ಯ ಸತ್ಯ

    channagi barediddeeri

    ReplyDelete
  2. ಈ ಕ್ಷಣ ನಾವು ಬದುಕಿದ್ದೇವೆ ಎನ್ನುವುದಕ್ಕಿಂತ ದೊಡ್ಡ ಕಾರಣ ಬೇರೊಂದು ಬೇಕಿಲ್ಲಾ ನಮ್ಮ ಸಂತೋಷಕ್ಕೆ ನಿಜ..... ಆದರೆ ಅದೊಂದು ಕಾರಣಕ್ಕೆ ಮಾತ್ರ ಸಂತೋಷ ಪಡುವವರು ಯಾರಿದ್ದಾರೆ ಹೇಳು....(ತೀರಾ ಕೆಲವರನ್ನು ಹೊರತು ಪಡಿಸಿ)
    ಎಲ್ಲರಿಗೂ ಪಕ್ಕ ವಾದ್ಯಗಳೆಂದರೇನೇ ಖುಷಿ....

    ReplyDelete
  3. ಕ್ಷಣ ಕ್ಷಣಗಳಲ್ಲಿ ಬದುಕನ್ನು ಅನುಭವಿಸುತ್ತಿದ್ದರೆ ಬದಕು ನಿತ್ಯ ಸತ್ಯವೇ.. ನಿತ್ಯ ನೂತನವೇ..

    ReplyDelete