ಮೌನ ಕನವರಿಕೆ.....
ಮನಸುಗಳ ಅರಳಿಸುವಂಥ ಕನಸುಗಳ ಹೊತ್ತು ತರುವ ಚಂದಿರ -
ಬಾನ ತುಂಬೆಲ್ಲ ಹಾಲು ಚೆಲ್ಲಿ ನಗುತಲಿರುವ...
ಯಾವ ಮಧುರ ನೆನಪಿನ ಕಚಗುಳಿಯೋ ಅವನ ಮನದಾಳದಲ್ಲಿ...
ಪಾಪಿ -
ನನ್ನ ನಿದ್ದೆ ಕೊಲ್ಲುವ...
ರಾತ್ರಿ ಇಳಿಯುವ ಹೊತ್ತಲ್ಲಿ -
ಚಂದ್ರ ಮುಗುಳ್ನಗುವಾಗ -
ತಾರೆಗಳು ಕಣ್ ಮಿಟುಕಿಸುವಾಗ -
ತುಂಟ ತಂಗಾಳಿ ನನ್ನ ಹೆರಳ ಮುದ್ದಿಸುವಾಗ -
ಇಬ್ಬನಿ ಇಳೆಯ ತಬ್ಬುವಾಗ -
ಯಾರದೋ ತೊಟ್ಟಿಲ ಕಂದ ನಿದ್ದೇಲಿ ನಕ್ಕದ್ದು ಕಂಡಾಗ -
ಅಮ್ಮನ ಕೈಬಳೆಯ ಸದ್ದು, ತಂಗಿಯ ಕಾಲ್ಗೆಜ್ಜೆಯ ನಾದ, ತಮ್ಮನ ತುಂಟಾಟದ ಗದ್ದಲ, ಅಪ್ಪನ ಓಂಕಾರದ ಝೇಂಕಾರ ಕಿವಿಯ ಸೋಕಿದಾಗ -
ರಾತ್ರಿ ರಾಣಿ ಪಾರಿಜಾತದೊಂದಿಗೆ ಅರಳಿ ಗಂಧ ಚೆಲ್ಲುವ ಸ್ಪರ್ಧೆಗೆ ಬಿದ್ದ ಹೊತ್ತಲ್ಲಿ...
ಗೆಳೆಯಾ -
ಅಂದುಕೊಳ್ಳುತ್ತೇನೆ ನಿನ್ನೆದುರು ಮಾತಾಗಬೇಕೆಂದು...
ನಿನ್ನೆಡೆಗಿನ ನನ್ನ ಕನಸುಗಳಿಗೆ ದನಿ ನೀಡಬೇಕೆಂದು...
ಆದರೇನು ಮಾಡಲಿ -
ಮೊದಲ ಮಳೆಗೆ ನೆನೆದ ಗಂಧವತೀ ವಸುಂಧರೆಯ ನಾಚಿಕೆಯಂಥ ಮೌನ ನನ್ನನಾವರಿಸುತ್ತದೆ ನಿನ್ನ ಸನ್ನಿಧಿಯಲ್ಲಿ...

***&^&***
ಮಧುರ ಭಾವನೆಗಳ ಮಿಲನವಾಗಿದೆ ಈ ಮಧುರ ಸಾಲುಗಳಲ್ಲಿ.
ReplyDeleteಧನ್ಯವಾದಗಳು...
Deletei like it..... da.
ReplyDeleteಧನ್ಯೋಸ್ಮಿ...
Deleteಇದು ಅದೇ ಚಂದ್ರನ ಬಗ್ಗೆ ಬರೆದ ಕವಿತೆ ಅಂತ ಗೊತ್ತಾದಾಗ ಮತ್ತೊಮ್ಮೆ ನಿಮ್ಮ ಬ್ಲಾಗ್ ಲೋಕಕ್ಕೆ ಚಂದ್ರ ವಿಳಾಸ ತೋರಿಸಿದ್ದಾನೆ. ತುಂಬಾ ಚೆಂದದ ಭಾವ.
ReplyDeleteಧನ್ಯವಾದಗಳು ಸರ್..
Deleteಹಾಗೆ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ...
ReplyDeleteಸೂಪರ್..
ಧನ್ಯವಾದಗಳು...
Delete