ನನ್ನ ಸ್ವಾರ್ಥ.....
ಎಂಥ ದುರಾಸೆ
ಬಯಸುತ್ತೇನೆ -
ಎನ್ನೆಲ್ಲ ದೌರ್ಬಲ್ಯಗಳ ಸಹಿಸಿ
ಎನ್ನ ನೋವುಗಳನೆಲ್ಲ ಹೀರಿ
ಎನ್ನ ಹಿಂದೆ ನೆರಳಂತೆ ಉಳಿದು
ಖುಷಿಯ ಮೇರೆ ಮೀರುವಂತೆ ಮಾಡಿ
ಜೀವಿಸಲು ಸ್ಫೂರ್ತಿ ಮೂಡುವಂತೆ
ಅವಳೆನ್ನ ಪ್ರೀತಿಸಲೆಂದು...
ಆದರೆ
ಒಂದು ಕ್ಷಣ ಕೂಡ ಯೋಚಿಸಲೊಲ್ಲೆ
ಹಾಗೆಲ್ಲ ನಾನೂ ಅವಳ ಪ್ರೀತಿಸಬಹುದೆಂದು...
ಎಂಥ ಕ್ರೌರ್ಯ
ಬಯಕೆ ದೇಹಕೆ -
ಬಿಗಿದ ತೆಕ್ಕೆ ಸಡಿಲದಂತೆ
ಅವಳಂಗಾಂಗಗಳ ಅಂದವನೆಲ್ಲ ಒಂದೇಟಿಗೇ ಹೀರಬೇಕೆಂದು
ಹೀರುತ್ತಲೇ ಇರಬೇಕೆಂದು...
ಆದರೆ
ಚಿಂತಿಸಲೊಲ್ಲೆ ಒಮ್ಮೆಯೂ
ಅವಳ ಕಣ್ತಣಿಸಲು ನನ್ನಲೇನಿದೆ ಅಂದವೆಂದು...
ಕೇಳಲೊಲ್ಲೆ
ಅವಳ ಸುಖದ ಕಲ್ಪನೆ ಏನೆಂದು...
ಎಂಥ ದುರಾಸೆ
ಬಯಸುತ್ತೇನೆ -
ಎನ್ನೆಲ್ಲ ದೌರ್ಬಲ್ಯಗಳ ಸಹಿಸಿ
ಎನ್ನ ನೋವುಗಳನೆಲ್ಲ ಹೀರಿ
ಎನ್ನ ಹಿಂದೆ ನೆರಳಂತೆ ಉಳಿದು
ಖುಷಿಯ ಮೇರೆ ಮೀರುವಂತೆ ಮಾಡಿ
ಜೀವಿಸಲು ಸ್ಫೂರ್ತಿ ಮೂಡುವಂತೆ
ಅವಳೆನ್ನ ಪ್ರೀತಿಸಲೆಂದು...
ಆದರೆ
ಒಂದು ಕ್ಷಣ ಕೂಡ ಯೋಚಿಸಲೊಲ್ಲೆ
ಹಾಗೆಲ್ಲ ನಾನೂ ಅವಳ ಪ್ರೀತಿಸಬಹುದೆಂದು...
ಪ್ರೀತಿಸಬಲ್ಲ ಮನಸಿಲ್ಲ
ಪ್ರೀತಿಸಲ್ಪಡುವ ಬಯಕೆ ಬೆಟ್ಟದಷ್ಟು...
ಬಯಕೆ ದೇಹಕೆ -
ಬಿಗಿದ ತೆಕ್ಕೆ ಸಡಿಲದಂತೆ
ಅವಳಂಗಾಂಗಗಳ ಅಂದವನೆಲ್ಲ ಒಂದೇಟಿಗೇ ಹೀರಬೇಕೆಂದು
ಹೀರುತ್ತಲೇ ಇರಬೇಕೆಂದು...
ಆದರೆ
ಚಿಂತಿಸಲೊಲ್ಲೆ ಒಮ್ಮೆಯೂ
ಅವಳ ಕಣ್ತಣಿಸಲು ನನ್ನಲೇನಿದೆ ಅಂದವೆಂದು...
ಕೇಳಲೊಲ್ಲೆ
ಅವಳ ಸುಖದ ಕಲ್ಪನೆ ಏನೆಂದು...
ಸುಖ ಕೊಡುವ ತೋಳ ಬಲ
ವೀರ್ಯವಂತ ಸ್ಖಲನ ಶಕ್ತಿ
ಮೈಯಲ್ಲಿದೆಯಾ ಎಂಬ ಅರಿವಿಲ್ಲ...
ನಾಭಿಯಾಳದಲ್ಲಿ ಮಾತ್ರ
ಎಂದೂ ಹಿಂಗದ ಸದಾ ವ್ಯಗ್ರ ನಿರ್ಲಜ್ಜ ಕಾಮ...
ಕಾಮಕ್ಕೂ ನಿಜ ಪ್ರೀತಿಗೂ ಅಜಗಜಾಂತರ.
ReplyDeleteಒಂದು ಮನೋ ಚಿಕಿತ್ಸಕ ಕವನ.
ಯಾವಾಗಲೂ ಭಾವನೆ ವಯಕ್ತಿಕ, ಸ್ಪಂದನೆ ಸಾರ್ವತ್ರಿಕ. ಭಾವವನ್ನ ಭಾಷೆಯನ್ನಾಗಿಸಿದ ನಿರೂಪಣೆ ನಾಜೂಕಾಗಿದೆ.
ReplyDeleteಯಾವುದನ್ನೇ ಆದರೂ ನಾವು ನೋಡುವುದು ನಮ್ಮೊಳಗಿಂದ ಮಾತ್ರ
ReplyDeleteನಮ್ಮನ್ನ ನಾವು ಪ್ರೇಮಿಸಕೊಂಡಷ್ಟು ಉಳಿದವರನ್ನ ಪ್ರೇಮಿಸಲಾರೆವಲ್ಲ
ಹೀಗಿರುವಾಗ ಮತ್ತೊಬ್ಬರ ಸುಖದ ಕಲ್ಪನೆ ನಮಗಿರುವುದು ಸಾಧ್ಯವೂ ಇಲ್ಲ,
ಇದ್ದರೂ ಅದು ನಮ್ಮೊಳಗಿನ ಊಹೆ ಮಾತ್ರ...
ಪ್ರೇಮವಾಗಲಿ ಕಾಮವಾಗಲಿ ಚೌಕಟ್ಟಿನೊಳಗಿನ ಭಾವಗಳು
ಇವುಗಳಲ್ಲಿ ನೈಜತೆಗಿಂತ ತೋರಿಕೆಗಳೇ ಜಾಸ್ತಿ...
ಮನಸ್ಸು ಮೆಚ್ಚುವ ಅಕ್ಷರ ಸಾಲುಗಳ ಓದಿಗೂ ತೋರಿಕೆಗಾಗಿ ಬೆಚ್ಚುವುದು ನಮ್ಮ ವ್ಯಾಪ್ತಿ..
ನಮ್ಮ ಸುಖದೊಳೆಲ್ಲ ಸುಖ ಎನ್ನುವುದು ನಮ್ಮ ಪಾಲಿನ ಸತ್ಯ..
ಪುಟ್ಟ ಸುಂದರ ಬರಹ...
ಎಷ್ಟೋ ಕೆಲವು ಬಾರಿಗಳು ಹೀಗೂ ಆಗುತ್ವೆ.....
ReplyDeleteನಿಜವಾದ ಪ್ರೇಮ ಅವಳಿಗೆ ಅರ್ಥವಾಗೋದೇ ಇಲ್ಲ.....
ತೋರಿಕೆಗೆ ಪ್ರೀತಿ ಮಾಡೋಕೆ ಅವನಿಗೆ ಬರೋಲ್ಲಾ....
ಆದರೂ ನೂರಕ್ಕೆ 80 ಪಾಲು ತನ್ನನ್ನು ಯೋಚಿಸುವವನೇ....
ಸತ್ಯ ಒಪ್ಪಿಕೊಳ್ಳೋಕೂ ಏನೋ ಅಡ್ಡ ಬರುತ್ತೆ....
ನಿನ್ನ ಹಾಗೆ ಎಷ್ಟು ಜನ ಇದ್ದಾರು....???
ಜಾಣ ಬರಹ.....