ಅಲ್ಲಿ ಮಿಂದು - ಇಲ್ಲಿ ಮತ್ತೆ ನೆನೆದು.....
ಖುಷಿಗಳ ಎಲ್ಲೆಲ್ಲಿಂದಲೋ ಹೆಕ್ಕಿ ತಂದು ನಾ ನಡೆವ ದಾರಿಯುದ್ದಕೂ ಸುರಿದಿಟ್ಟು ನಗುವ ಬದುಕ ಕರುಣೆಗೆ ಶರಣು...
ಕಣ್ಣು ಹಾಯದ ತೀರದವರೆಗೂ ಉದ್ದಕೂ ಮೈಚಾಚಿ ಬಿದ್ದಿದೆ ಖುಷಿ ಖುಷಿ ಹಸುರಿನ ದಾರಿ...
ನಾ ನಡೆದಷ್ಟೂ - ನಾ ತುಂಬಿಕೊಂಡಷ್ಟೂ ನನ್ನದೇ...
ಕಾವೇರಮ್ಮನ ತವರೂರಲ್ಲಿ ಅವಳ ಪಾದಕ್ಕೆ ಹಣೆಯ ತಾಕಿಸಿ - ಅವಳ ಮಡಿಲ ಕಂಪಿಗೆ ಮೂಗರಳಿಸಿ - ತುಂತುರು ಮಳೆಯ ತಂಪಿಗೆ ಮೈಯೊಡ್ಡಿ - ಜಲಲ ಧಾರೆಯ ಗಾನದ ಇಂಪಿಗೆ ಕಿವಿಯಾಗಿ - ಹಸಿರ ಸೊಂಪಿಗೆ ಕಣ್ಣರಳಿಸಿ - ಮಂಜು ಹನಿಗಳಲಿ ಮಿಂದು - ಮೋಡಕೆ ಮುತ್ತಿಕ್ಕಿ ಬಂದ ಮನಸೀಗ ಹಗುರ ಹಗುರ...
ತಾಯಿ ಕಾವೇರಿಯ ತವರು - ಕಾಫಿ ನಾಡು - ಕೊಡವ ಸೀಮೆಯಲ್ಲಿ ಒಂದಿಡೀ ದಿನ ಅಲೆದು ಬಂದ ಖುಷಿ ನನ್ನದು...
ನನ್ನ ಖುಷಿಯ ನಿಮಗೂ ಹಂಚುವ ಬಯಕೆ ಕೂಡ ನನ್ನದೇ...
ನನ್ನ ಪುಟ್ಟ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ನಗುತಿರುವ ಆ ಊರ ಸೊಬಗ ಇಲ್ಲಿಷ್ಟು ನೀಡಿದ್ದೇನೆ...
ನೋಡಿ ಸವಿಯುವ ಖುಷಿ ನಿಮ್ಮದಾಗಲಿ... :)

ಫೊಟೋ ತೆಗೀತೀರಾ.... |
ದಾರಿಯ ಸೊಬಗು... |
ನಮ್ಮೊಳಗು ಬೆಳಗಲಿ... |
ಚಿಗುರು... |
ಇರ್ಪು ಜಲಪಾತದ ಸೊಬಗು... |
ನನ್ನೊಂದಿಗೆ ಈ ಬಂಡೆ ಪಿಸುನುಡಿದ ಸಾಲುಗಳ ನಾನಿಲ್ಲಿ ಹೇಳಲಾರೆ... |
ಏನ ಹೇಳಲಿ.... |
ಹಾಲ ಹೊಳೆಯಾ... |
ಇರ್ಪು... |
ಇರ್ಪು ಜಲಧಾರೆಯ ಸೊಬಗು... |
ನೆನೆದ ತಿರುವು... |
ಮಂಜು ಮಂಜು ದಾರಿ... |
ಮರವ ತಬ್ಬಿದ ಹೂವ ಚೆಲುವು... |
ಮೋಡಕು - ವಸುಧೆಗೂ ಒಲವು... |
ಮೋಡವ ಚುಂಬಿಸುವಾಸೆ... |
ನಾವು ಮೋಡಕಿಂತ ಎತ್ತರ - ಸ್ವಲ್ಪ ಕೆಳಗಿಳಿಯೋಣ ಕೈಗೇ ತಾಕೀತು... |
ಬ್ರಹ್ಮಗಿರಿಯ ನೆತ್ತಿಯಿಂದ ಕಂಡ ಕಾವೇರಮ್ಮನ ತವರು ಮನೆ... |
ಕಾವೇರಮ್ಮನಿಗೆ ಮಳೆಯ ಅಭ್ಯಂಜನ... |
ಖಾಲಿ ಖಾಲಿ - ನಿನ್ನ ನೆನಪಾದ ನನ್ನ ಮನದಂತೆ... |
ಅಬ್ಬೆಯ ಸೊಬಗು... |
ಧುಮ್ಮಿಕ್ಕೋ ಅಬ್ಬೆ... |
ಅವನ ತೆಕ್ಕೆಯ ಕಡೆಗೆ ಜೋರು ಜೋರು ನಡಿಗೆ... |
ಹಾಗೆ ಸುಮ್ಮನೆ... |
ಮತ್ತೆ ಅಬ್ಬೆ... |
ಮರಗಳ ಮರೆಯಿಂದ ಅಬ್ಬೆ... |
ಮುಚ್ಚಿದ ಬಾಗಿಲ ಹಿಂದೆ ಬುದ್ದನಿರುವನಂತೆ... ದರ್ಶನವಾಗಲು - ತೆರೆಯಬೇಕು ನೀ ನಿನ್ನೊಳಗಣ ಬಾಗಿಲು... |
ಬಾರಿಸಬೇಕು ಅರಿವಿನ ಘಂಟೆಯ... |
ಚಿತ್ರಗಳು ಮತ್ತು ಬರಹಕ್ಕೆ ವಂದನೆಗಳು. ನಾವೇ ಅಲ್ಲಿ ಅಲೆದು ಬಂದಹಾಗಿದೆ....
ReplyDeletenoorentu talebisgala naduve nerigegattida haneyalli swalpa bigu kaledu niraala naguvannu bimbisuva intha prakratiyeduru summane sharanagati..
ReplyDelete:)
ಒಳಗ ತೊಳೆದು ಬೆಳಗಿ ಬಾಗಿಲ ತೆರೆದು ದರ್ಶನವಿತ್ತ ನಿಸರ್ಗದ ಮಡಿಲಲ್ಲಿ ಕಳೆದ ಕ್ಷಣಗಳ ತುಂತುರು...
ReplyDeleteNice pictures... Shri.... :-)
ReplyDeleteಅದ್ಭುತವಾದ ಫೋಟೋಗಳು ಶ್ರೀವತ್ಸ... ಇ೦ತಹ ಅದ್ಭುತ ಚಿತ್ರಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು..
ReplyDeleteವಾವ್ !!
ReplyDeleteಪ್ರಕೃತಿಯ ಮಡಿಲಲ್ಲಿ ಮಗುವಾಗಿ ದಿನವೊಂದ ಕಳೆದ ಖುಷಿ :)
ಆ ಖುಷಿಯ ಸೊಬಗನ್ನ ನಮ್ಮಗಳಿಗೂ ತೋರಿಸಿದ್ದು ಮತ್ತಷ್ಟು ಖುಷಿ :)
ಖಾಲಿ ಬೆಂಚಿನ ಆ ಚಿತ್ರವ್ಯಾಕೋ ತುಂಬಾ ಇಷ್ಟ ಆಯ್ತು .
Niceeeeeeee......
ReplyDeleteSooper... Kaveri madilu tampu tampu...
ReplyDeletegood captions...:)
Superb.. ನಾವು ಹೋಗಿದ್ಯ ಕೊಡಗಿಗೆ.. ಆದ್ರೆ ಅದ್ರ ಬಗ್ಗೆ ಬರೆಯಕ್ಕಾಗಿರ್ಲೆ.. ಚೆನ್ನಾಗಿದೆ ಬರದ್ದಿ.. ನಾವು ಹೋದಾಗ ಇರ್ಪು ಜಲಪಾತಕ್ಕೆ ಹೋಗಿರ್ಲೆ.. ಆದ್ರೆ ಅದ್ರ ಬದ್ಲು ದಬಾರೆ, ಚಕ್ಲಿ ಹೊಳೆ ಡ್ಯಾಂ.. ಹೀಗೆ ಬೇರೆ ಜಾಗಕ್ಕೆ ಹೋಗಿದ್ಯ.. :-)
ReplyDeleteವಾಹ್..ಸುಂದರ ದೃಶ್ಯಾವಳಿ ಅದಕ್ಕೆ ತಕ್ಕ ಅಕ್ಷರದ ಸಾಲುಗಳು.
ReplyDelete