ಆಗಾಗ ಹಾಡುವ ಮನಸು.....
(ಹಾಡೆಂದರೆ ನಲಿವು - ಹಾಡೆಂದರೆ ನೋವು - ಹಾಡೆಂದರೆ ಉನ್ಮಾದದುಯ್ಯಾಲೆ...)
ಭಾಷೆ - ಭಾಷ್ಯಗಳ ಮೀರಿದ ಭಾವ ಪ್ರೀತಿ...
ಅಂಥ ಪ್ರೀತಿಯನ್ನೂ ಮೀರಿದ್ದು ಬದುಕು...
ಆ ಬದುಕನ್ನೇ ಪ್ರೀತಿಯಾಗಿಸಿಕೊಳ್ಳಬಲ್ಲೆನಾದರೆ ಅದಕಿಂತ ಧನ್ಯತೆ ಇನ್ನೇನಿದೆ...
ಆ ದಿಕ್ಕಿನೆಡೆಗೆ ಇರಲಿ ನನ್ನಯ ನಡಿಗೆ...
***
ಯಾವುದೋ ಅವ್ಯಕ್ತ ಖುಷಿಯೊಂದು ಕರುಳ ತಾಕಿ ಬದುಕ ತಬ್ಬಿದ ಮಧುರ ಭಾವ ನನ್ನನಾಳುವಾಗ...
ನಲಿವಿನಲೆಗಳಲಿ ತೇಲುತಿರುವಾಗ...
ಈ ಬದುಕೆನಿತು ಸುಂದರ ಎನುತ ನಗೆಯ ಹಾಡ ಗುನುಗುತಿದೆ ಮನಸು...

ಪ್ರತಿ ಕ್ಷಣ
ಕೊಲ್ಲುವ ಅಸಹಾಯಕತೆಗೆ ಮಾತಿನ ರೂಪ ಕೊಡುವಾಗಲೆಲ್ಲಾ ಮನಸು ವಿಚಿತ್ರ ಹಿಂಸೆಯಲ್ಲಿ ಒದ್ದಾಡುತ್ತೆ...
ಮೊಗದಲ್ಲಿ
ಜೀವ ಇಲ್ಲದ ದೊಡ್ಡ ನಗು...
ನಂಗೆ ನಾನೇ
ಅಪರಿಚಿತನಂತೆ ಕಂಡು ಮತ್ತಷ್ಟು ಕಂಗಾಲಾಗ್ತೇನೆ...
***
ಸಾವಿನ ಮನೆಯಲ್ಲೂ
ಅಳದ ಮನಸು...
ಚಂದದ ಕನಸೊಂದ
ಚಿಗುರೊಡೆಸಬಹುದಾದ ಹಾಡ ಕೇಳುತ್ತಲೂ ಒಮ್ಮೊಮ್ಮೆ ಅಳುತ್ತಿರುತ್ತದೆ..
ಈ ಮನದ ವಿಚಿತ್ರ
ವ್ಯಾಪಾರಕ್ಕೇನೆನ್ನಲಿ...
***
***
ಸದಾ ಕಾಡುವ
ಭಾವ ಇದು -
ನನ್ನ ನೋವ
ಆಸ್ತೆಯಿಂದ ಆಲಿಸೋ ನೀವ್ಯಾರೂ ನಿಮ್ಮ ನೋವ ನಂಗೆ ಕೇಳಿಸಿಲ್ಲ...
ನಿಮ್ಮ ನೋವ ದನಿಯ ಕೊಂದು, ಪರರ ನೋವಿಗೆ ಕಿವಿ ಮತ್ತು ಕಣ್ಣೀರಿಗೆ ಸಾಂತ್ವನವಾಗೋ ಹಿರಿದು ಮನಸಿನ ನಿಮ್ಮಂತಾಗಲು ನಾನು ಇನ್ನೆಷ್ಟು ಜನ್ಮ ಉರುಳಬೇಕಾದೀತೇನೋ...:(

ಒಂದು ಮುಗುಳ್ನಗು - ಒಂದೇ ಒಂದು ನಿಷ್ಕಾರಣ ಪ್ರೀತಿಯ ಮಾತು - ಆಗೊಂದು ಆತ್ಮೀಯ ಆಲಿಂಗನ - ಖಾಲಿ ಹಣೆಗೊಂದು ಸ್ನೇಹಪೂರ್ವಕ ಪಪ್ಪಿ....
ಸಾಕು...
ಬದುಕುವಾಸೆಗೆ ನೂರಾನೆ ಬಲದ ಭರವಸೇನ ದಯಪಾಲಿಸಿಬಿಡುತ್ತವೆ...
ಸಾವಿರ ನೋವುಗಳ ಸೈನಿಕರ ದಂಡಿಗೆದುರಾಗಿಯೂ ಎದೆಕೊಟ್ಟು ಯುದ್ಧ ಸಾರಬಲ್ಲ ಸ್ಥೈರ್ಯ ದಕ್ಕಿಬಿಡುತ್ತೆ...
ಅಂಥ ಪರಿ ಪ್ರೀತೀನ ಹಂಚೋರ ಸನ್ನಿಧಿಯಲ್ಲಿ ಕಣ್ಣ ಹನಿ ಕೂಡ ಸಹನೀಯವೇ...
ಸ್ನೇಹದೊಡಲುಗಳ ಪ್ರೀತಿಗೆ ಶರಣು...
***
ಆ ಒನಪು, ವೈಯಾರ - ಭಾನ ಮಳೆ ಮುತ್ತಲಿ ಮಿಂದ ಭುವಿಯೊಡಲ ಸಿಂಗಾರವ ಸವಿಯುತ್ತಾ - ಹೊಸ ಬೆಳಕ ಬೆರಳ ಹಿಡಿದು - ಹೊಸ ಕನಸುಗಳ ಸಂತೆಯಲಿ - ಹೊಸ ನಲಿವನರಸುತಲಿ - ಅಲೆವ ತುಡಿತದ ಮನಸ ಹೊತ್ತು ನಗುತಿರೋ ಒಂದು ಮುಂಜಾನೆಗೆ ಸಾವಿರ ಕಾಮನಬಿಲ್ಲಿನ ರಂಗಿದೆ....:)
***
ಅವಳು ಕೂತಿದ್ದ ಸೀಟಿನ ಹಿಂದಿನ ಸೀಟಲ್ಲಿ ಕೂತಿರೋ ನನ್ನ ಕಣ್ಣಲ್ಲಿ ಅವಳ ಕಿವಿಯ ಝುಮಕಿಯ ರೋಮಾಂಚಕ ಓಲಾಟ...;)
ಅಂದಕೆ ಬೆರಗಾಗಿ ಬೆಚ್ಚಗಾದ ಮನಸಿಗೆ ಸಂಜೆ ಸೂರ್ಯನ ರಂಗು...:)
ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟರೆ ಅವಳು; ಅವಳ ಹೆಣ್ಣಾಸೆಗೂ ರಂಗು ಬಂದು ಬದುಕು ಒಲವ ಇಬ್ಬನಿಯಲಿ ಮಿಂದೀತೆಂಬುದು ಈಗಷ್ಟೆ ಇಷ್ಟಿಷ್ಟೇ ಹಾಳಾಗ್ತಾ ಇರೋ ಹುಚ್ಚು ಮನಸಿನ ದುರಾಸೆ...:)
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Chanda....
ReplyDeleteನೀ ಏನು ಬರೆದರೂ ಚಂದ ಮತ್ತು ಚಂದ ಮಾತ್ರವೇ..
ReplyDeleteಭಾವಗಳಲ್ಲೇ ತುಳುಕುವ ಗೊಂಚಲು ಆ ಭಾವಗಳ ಕಾರಣದಿಂದಲೇ ಇಷ್ಟವಾಗುತ್ತದೆ... ಬರೀತಿರು...
ಭಾವಗಳು ಕಾಡುವುದು ಸಹಜ....ಎಲ್ಲರಿಗೂ...
ReplyDeleteಕಾಡಿಸಿಕೊಳ್ಳಬೇಕಷ್ಟೇ......
ಆದರೆ ನಿನಗೆ ಕಾಡಿದ ಭಾವವನ್ನು ನಮಗೂ ಕಾಡುವಂತೆ
ಹೇಳೋದಿದ್ಯಲ್ಲಾ....
ಅದು... ಅದು ಎಲ್ಲರಿಂದಾಗೋ ಕೆಲಸವಲ್ಲಾ....
ಚಂದಾನಪ್ಪಾ......
ಆಹಾ.. ಭಾವನೆಗಳ ಮಿಡಿತ ಜೋರಾಗಿದೆ.. ಚೆಂದದ ಸಾಲುಗಳು
ReplyDelete