ಸಂಜೆ ಮಳೆ - ಒದ್ದೆ ಭಾವ.....
ಕಿಟಕಿ ಮೂಲೆ - ನಾನು ಮತ್ತು ನನ್ನ ಏಕಾಂತ - ಹೊರಗೆ ಸುರಿವ ಸಂಜೆ ಸೋನೆ...
ಒಳಹೊರಗಾಡುವ ಅವಳ ನೆನಹು...
ನಾಭಿಸ್ಥಾನದಲೆಲ್ಲೋ ಬಯಕೆ ಹೊರಳುವ ಸದ್ದು...
ಕಣ್ಣ ಮೊನೆಯಲಿ ಸಿಂಗಾರ ಮಂಚ...
ಅವಳಿಗಲ್ಲಿ ಗರ್ಭ ಕಟ್ಟಿದ ಕನಸಂತೆ ನಿನ್ನೆ ...
ಬರೆದಿಡಬೇಕಿದೆ ಲಾಲಿ ಹಾಡೊಂದನು ಅವಳಾಸೆಯಂತೆ - ಬೇಕಂತೆ ಉಡುಗೊರೆ ಬೆತ್ತಲಿರುಳ ಮೊದಲ ಜಾವಕೆ...
ಹಹಹಾ...!!!
ಹುಚ್ಚು ಹುಡುಗಿ ಆಕೆ ಸೊನಗಾರನ ಕಾಣುವ ಮೊದಲೇ ಬಡಗಿಯ ಹುಡುಕುತ್ತಿದ್ದಾಳೆ ತೊಟ್ಟಿಲ ಕನಸಿಗೆ ಕಾವು ಕೊಡಲು...
ಕುಲಾವಿ, ಗಿಲಕಿಗಳೆಲ್ಲ ಅದಾಗಲೇ ಅವಳ ಅಂತಃಪುರ ಸಂಗಾತಿಗಳು...
ಮಲ್ಲಿಗೆ ನಲುಗದ ಹೊರತು ಮಗು ಹೊರಳಲಾರದು ಕಣೇ ಮಳ್ಳೀ ಹೂ ಅರಳೋ ಮುನ್ನವೇ ಕಾಯ ಹಂಬಲವೇಕೆ - ಮನದ ಮದುವೆಗೆ ಜಗದ ಬೆಂಬಲವಿಲ್ಲವೇ ಹುಡುಗೀ ಅಂತಂದರೆ;
ಮೋಡ ಕಾಣುವ ಮೊದಲೇ ನೆಲವ ಹದಗೊಳಿಸಿ ಬೀಜ ಎತ್ತಿಡದವನು ರೈತನಾದಾನೆಯೇ - ಮಳ್ಳ ನೀನು - ಕಂದನ ಕನಸೆಂದರೆ ನನಗೆ ನಾಳೆಯ ಎದುರ್ಗೊಳ್ಳಲೊಂದು ಭರವಸೆ, ಶಕ್ತಿ ಕಣೋ - ನಿನ್ನೆಡೆಗೆ ನನ್ನದು ಚೌಕಟ್ಟುಗಳನೆಲ್ಲ ಮೀರಿದ ಆತ್ಮದ ಮೋಹ, ನಿನ್ನೆಡೆಗಿನ ತುಡಿತದಲ್ಲಿ ನನ್ನ ಮನಸಿದು ಜಗದೆಲ್ಲ ಬೇಲಿಗಳನೂ ಮುರಿದು ಮುನ್ನುಗ್ಗಿ ಕಾಲವೆಷ್ಟೋ ಸಂದುಹೋಯಿತು ಅಂತಾಳೆ...
ಅವಳಿಗೆ ನಾನೆಂದರೆ ಸ್ವಾರ್ಥಗಳ ಹಂಗಿಲ್ಲದ ಸ್ವಚ್ಛ ನಗು...
ಕಪ್ಪು ಹುಡುಗಿ ಅವಳು - ಆತ್ಮ ಅವಳದು ಶುದ್ಧ ಹಂಸೆ...
ಮಳೆ ನಿಂತೇ ಹೋಯ್ತು...
ಇರುಳ ಮೊದಲ ಜಾವದಲಿ ನನ್ನೊಳಗಿನ ಕನಸು ಕಳಚಿ ವಾಸ್ತವದರಿವಲ್ಲಿ ಕಣ್ತೆರೆದರೆ;
"ಎನ್ನೆದೆಯ ಮುಂಬಾಗಿಲಲೇ ಹೊಂಚಿ ಕೂತಿದೆ ನಸುನಗುತ ಬಂಗಾರ ಬಣ್ಣದ ಜಿಂಕೆ - ಅಪಹರಿಸಲು ಎನ್ನ ಉಸಿರ ದೀಪವ..."
ಕಿವಿಯ ಹಾಲೆಯ ಕಚ್ಚಿ ಆಸೆ ಕೆರಳಿಸಿದಷ್ಟು ಸುಲಭವಿಲ್ಲ ಮನಸ ಹಾಳೆಯ ಮೇಲೆ ನಗೆಯ ಕಾವ್ಯ ರಚಿಸುವುದು...
ಬದುಕು ಕಲ್ಪನೆಯಲಿನ ತಿಳಿ ಬೆಚ್ಚನೆ ಇರುಳಲ್ಲ - ಅದು ವಾಸ್ತವದ ಮಡಿಲ ಕೆಂಡ...
ಜಿಂಕೆಯ ಗೆಲುವು ಅವಳ ಕನಸುಗಳ ರಕ್ತ ಹೀರಬಾರದು - ನನ್ನ ತಬ್ಬಿದ ಒಂದೇ ತಪ್ಪಿಗೆ...
ಉಹುಂ ಅವಳ ಕನಸು ನನ್ನಲೂ ನಕ್ಕ ಈ ಘಳಿಗೆ ಅವಳರಿವನು ತಲುಪಲೇಬಾರದು...
ನಾನಿಲ್ಲದ ದಾರೀಲಿ ನಡೆದೂ ಕನಸ ಬೇಟೆಯಾಡೋದ ಕಲಿಸಬೇಕವಳಿಗೆ - ಜಿಂಕೆ ಗೆಲ್ಲುವ ಮುನ್ನ...

ReplyDeleteನಿಜವಾದ ಮಾತು.
ವತ್ಸಾ... ಮಾತಿಲ್ಲಾ..
ReplyDeleteಕನಸಲ್ಲೊಂದೇ ಇಂಥ ಚಂದದ ಮುದ್ದು ಭಾವವೇಕೆ ದೊರೆ.....
ReplyDeleteವಾಸ್ತವದಲ್ಲಿ ಬಂಗಾರದ ಜಿಂಕೆಯೊಂದನ್ನೇ ಕಾಣುವ ಪರಿ ಬಿಟ್ಟು ಬಿಡು ತಂದೇ.....
ಚಂದ ಚಂದದ ಸಾಲುಗಳು...