ಸಾವಿನೊಡೆತನದ ಬಯಲಲ್ಲಿ ಛಾವಣಿ ಇಲ್ಲದ ಗೂಡು - ಬದುಕು.....
ಒಂದಾದರೂ ಘನ ಉದ್ದೇಶವಿಲ್ಲದೆಯೂ ತುಡಿಯುತ್ತಲೇ ಇರುತ್ತೆ ಉಸಿರಿಗಾಗಿ ಈ ನಿರುಪಯೋಗಿ, ನಿರ್ಲಜ್ಜ ಬದುಕು...
ಹಿಡಿದಿಟ್ಟದ್ದು ಯಾವುದು...?
ಯಾವ ಮಹತ್ಕಾರ್ಯಕ್ಕೆ...??
ಮಹಾ ಮೌನದ ದಾರಿ ಅಷ್ಟು ದುರ್ಗಮವಾ...???
ಸಾವಿರ ನದಿಗಳ ಕುಡಿದೂ ಹಿಂಗದು ಸಾಗರದ ದಾಹ...
ಯಾವುದಕ್ಕೆ ಹೋಲಿಸಲಿ ಸಾಗರವ - ಅತಿ ಮಾತಿನ ಬದುಕಿಗಾ, ಅದರಾಚೆಯ ಮಹಾ ಮೌನಕ್ಕಾ...??
ಇಂಥ ಹೋಲಿಕೆಗಳನೆಲ್ಲ ಮೀರಿದ್ದಲ್ಲವಾ ಬದುಕು ಸಾವುಗಳೆಲ್ಲ ಅಂತೀರೇನೊ...
ಆದರೂ, ಮಾತಿಗೆ ನಗೆಯ ಬಣ್ಣ ತುಂಬುವುದು ಮತ್ತು ಮಹಾ ಮೌನಕೂ ಮಾರ್ದವತೆಯ ಕಣ್ಣ ಬಿಡಿಸುವುದು ಈ ಹೊತ್ತಿನ ಉದ್ದೇಶವಾಗಿ ತೋರುತ್ತೆ - ನಡಿಗೆ ಸಹನೀಯವೆನಿಸಲು...
---
ಎಣ್ಣೆ ಬತ್ತಿದ ಮೇಲಿನ ಬತ್ತಿಯ ಮೃಗೋನ್ಮಾದ - ಆರುವ ದೀಪದ ಉರಿ ಉರಿಯ ಆರ್ಭಟ; ಉಳಿದದ್ದಿಷ್ಟೇ ಚಿಟಿಕೆ ಬೂದಿ, ಕಮಟು ವಾಸನೆ - ಸಾವಿನೊಂದಿಗೆ ಚೌಕಾಶಿ ಸಾಧ್ಯವಿಲ್ಲ...
---
ತಬ್ಬಿ ಬಿಡು ಸಾವೇ -
ಹಚ್ಚಿಟ್ಟುಕೊಂಡ ಮುಗುಳ್ನಗೆಯ ಚಂದೀವಿಗೆಯ ಎಣ್ಣೆ ತೀರುವ ಮುನ್ನ; ಹರೆಯದ ಮುಂಬೆಳಗಿನ ತಿಳಿ ನಿದ್ದೆ ಮರುಳಿನ ಹಸಿ ಬಿಸಿ ಕನಸಂತೆ...
---
ಸಾವಿನ ಅಸ್ತಿತ್ವವೇ ಬದುಕ ಕುಡಿಕೆಗೆ ನಗೆಯ ಮಧುವ ಸುರಿಯುವಲ್ಲಿ ಕತ್ತಲ ಕಣ್ಣಲ್ಲಿ ಹಗಲ ಬೆರಗೆಲ್ಲ ಕನಸಾಗುತ್ತೆ - ಬೆಳಕ ಬಯಲಲ್ಲಿ ಇರುಳ ಸುಖದ ಸೆರಗು ನೆರಳಾಗುತ್ತೆ...
ಬಡ ಜೋಗಿಯ ಪ್ರತಿ ಹೆಜ್ಜೆಯಲೂ ಖುಷಿಯ ಉನ್ಮತ್ತ ಅಮಲು...
ಇಲ್ಲೀಗ ಸಾವಿಗೂ ನಗೆಯದೇ ಘಮಲು...
---
ಹಾಯ್ದು ಬಂದ ತಿರುವುಗಳೆಲ್ಲ ಮರೆತು ಹೋಗಲಿ...
ನೆನಪಿನ ಹಸಿಬೆ ಚೀಲ ಪೂರ್ತಾ ಖಾಲಿಯಾಗಲಿ...
ಹಾದಿಯ ಆ ಬದಿಯ ಹಸಿರಿಗೆ ನಿನ ಕಣ್ಣು ಕುರುಡಾಗಲಿ...
ಹೊಸ ಹುಟ್ಟಿಗೆ ನಿನ್ನೊಡಲು ಬಂಜರಾಗಲಿ...
ಹೇ ಮನಸೇ ಕ್ಷಮಿಸಿಬಿಡು -
ನಿನ್ನ ಹಸಿವಿನ ಅರಿವಿದ್ದೂ ಕಲಿಸಲೇಬೇಕಿದೆ ನಾ ನಿನಗೆ ಮುಟಿಗೆಯಷ್ಟಾದರೂ ಭಾವ ನಿರ್ಲಿಪ್ತಿ; ಅಳುವಿನಾಚೆಯ ನಿನದೇ ಸಣ್ಣ ನಗುವಿಗಾಗಿ...
---
ಸಾವು ತಾನು ಬಡ್ಡಿ ರಹಿತವಾಗಿ ಕೈಗಿಟ್ಟ ಸಾಲ ಈ ಬದುಕು...
ಪ್ರೀತಿಸಿಬಿಡು ಅಮ್ಮನ ಎದೆ ಹಾಲ ಹೀರುತ್ತಾ ನಗುವ ಕಂದನ ಮುಗ್ಧತೆಯಂತೆ...
ಮೋಹಿಸು ತನ್ನವಳ ಎದೆ ಏರಿಯ ಮೆದುವಿಗೆ ಸೋಲುತ್ತಾ, ತೊಡೆ ಕಣಿವೆಯ ಬಿಸಿಯಲಿ ಕಾಲನ ಮರೆವ ಕಾಮನಂತೆ...
ಸಾಲವ ಸಾವು ಮರಳಿ ಕೇಳುವ ಮುನ್ನ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:
Post a Comment