ಒಂಟಿ ಸಂಜೆಯ ಎರಡು ಭಾವಗಳು.....
ಅಮ್ಮಾ ಪುಟ್ಟ ಗೆಳತೀ - ನೇಹದ ಒಡಲಿನ ಹಿಂಗದ ನಗುವಿನ ಹಸಿವಿದ್ದಲ್ಲಿ ಬೈಗುಳದಲ್ಲೂ ಅಸ್ತಿತ್ವವದ ಮೊಹರಿದೆ, ಜಗಳದಲ್ಲೂ ಸ್ನೇಹಿಯ ಆತ್ಮೀಕ ಒಳತುಡಿತದ ಆರೈಕೆಯ ಚಲುವಿದೆ...
ಕೂಗಿ ನೋಡೊಮ್ಮೆ, ಬದುಕ ಹಾದಿಯಲಿ ಮುಳ್ಳ ತುಳಿದೂ ನಗಬೇಕಾದಾಗ ನೀನು...
ಬೆನ್ನಲ್ಲೇ ನಿಂತಿರುತೀನಿ ನೇಹದ ಬುಟ್ಟಿಗೆ ಹೆಗಲ ಅಡವಿಟ್ಟ ಹಮಾಲ ನಾನು...
/\_\/_/\
ಆ ತಿರುವಿನ ಬಹು ಮಹಡಿ ಮಹಲಿನಾಚೆ ಬೆಳಕ ಮಣಿ ಮೋರೆ ಮರೆಸಿಕೊಂಡ...
ಕಾಗೆಯೊಂದು ಗಡಬಡಿಸಿ ಕೊನೆಯದಾಗಿ ಬಳಗವ ಕೂಗಿ ಗೂಡು ಸೇರಿತು...
ಅಲ್ಲಲ್ಲಿ ಹೊತ್ತಿಕೊಂಡ ಬೀದಿ ದಿಪಗಳೊಡನೆ ಅಮಾವಾಸ್ಯೆಯ ಇರುಳು ಮಾತಿಗಿಳಿಯುವ ಹೊತ್ತು...
ನಾ ನನ್ನ ನೆನಪ ಕೋಶದ ಹರಕು ಜೋಳಿಗೆಯಲಿ ನಗೆಯ ನಿಧಿಗಾಗಿ ತಡಕಾಡುತ್ತೇನೆ...
ಕನಸ ಕೋಶದ ಮುರುಕು ತೊಟ್ಟಿಲಲಿ ಚಂದಿರನ ತೂಗಲು ಹವಣಿಸುತ್ತೇನೆ...
ನಡೆದ ದೂರ, ನಡೆಯಬೇಕಾದದ್ದರ ದೂರ - ಯಾವುದು ಕಮ್ಮಿಯೋ ಗೊತ್ತಿಲ್ಲ...
ಹಿಮ್ಮಡಿಯ ಸೀಳಿನಲಿ ಬರಿಗಾಲ ನಿನ್ನೆಯ ವ್ಯಥೆಗಳು...
ಎಡವಿ ಒಡೆದ ಹೆಬ್ಬೆರಳಲಿ ಹೆಪ್ಪುಗಟ್ಟುತಿರೋ ನಾಳೆಗಳ ಕಥೆಗಳು...
ಅಮಾವಾಸ್ಯೆ -
ಚಂದಿರ -
ಹರಕು ಜೋಳಿಗೆ -
ಮುರುಕು ತೊಟ್ಟಿಲು...
ಎದೆಯ ಕಡಲ ತಳದಲ್ಲಿ ನಸುನಗೆಯ ಮುತ್ತೊಂದ ಹಡೆಯಬೇಕಿದ್ದ ಕಪ್ಪೆಚಿಪ್ಪಿನ ಗರ್ಭಪಾತ...
ಕಣ್ರೆಪ್ಪೆಯ ತಡೆಗೋಡೆಯ ಮೀರಲೆಳಸುವ ಅಲೆಗಳು...
ಹೆಳವನ ಇರುಳ ಸ್ವಪ್ನದ ನಗೆಯ ಕೂಸಿಗೆ ಬೆಳಕಲ್ಲಿ ನೆರಳಿಲ್ಲ...

No comments:
Post a Comment