ದಿನ ದಿನಾಂತ ಭಾವ ಸಂಗಾತ.....
ಈ ಸಂಜೆ - ಈ ಸಂತೆ - ನಡುವೆ ಮಿಡಿವ ಏಕಾಂತ...
ನನ್ನನೇ ನಾನು ಹುಡುಕುವ ಆಟ, ಓಡಾಟ...
ಮುಚ್ಚಂಜೆಯ ಮುಂಗುರುಳಿಗೆ ನಗೆಯ ಗಿಲಕಿಯ ಕಟ್ಟಿ ಊರೆಲ್ಲ ಮೆರೆಸಿದ ಹಿತಭಾವ ಲಹರಿ...
ಥ್ಯಾಂಕ್ಯೂ ಬೆಂಗಳೂರು...💓😘
___11.03.2017
‘~;~;~’
ಉರಿಯುತಿರಲಿ ಎದೆಯ ಮಾಳದಿ ಒಲವ ದೀವಳಿಗೆ...
ಚೂರೇ ಚೂರು ನಗೆಯ ಬಣ್ಣ ಉಸಿರ ಕಾವಡಿಗೆ...
ರಕ್ಕಸ ಪ್ರೀತಿ - ದೈವ ಕಾಮ - ಬದುಕ ಉರವಣಿಗೆ...
#ಬಣ್ಣಗಳ_ಹಬ್ಬದ_ಶುಭಾಶಯಗಳು...
___12.03.2017
‘~;~;~’
ಇದ್ದೂ ಇರದಂತಿರುವ ಹಲವು, ಇರದೆಯೂ ಇದ್ದಂತೆ ಪೊರೆವ ಕೆಲವು - ಎಲ್ಲ ಇದ್ದಲ್ಲೇ ಕಳೆದ್ಹೋಗುವ ಮುನ್ನ, ಹೆಸರಿಲ್ಲದಂತೆ ಎಲ್ಲೆಲ್ಲೋ ತೊಳೆದ್ಹೋಗುವ ಮುನ್ನ - ಕೂಡಿಕೊಳಲಿ ಮತ್ತೆ ಮತ್ತೆ ಭಾವ ಬೆಳಕು ಕಣ್ಣು ಕಣ್ಣ - ನಾಳೆಗಳಿಗೂ ದಾಟಿಕೊಳಲಿ ಮುಟಿಗೆಯಷ್ಟು ನಗೆಯ ಬಣ್ಣ...
#ಮತ್ತೆಮತ್ತೆ_ಬಣ್ಣಗಳ_ಹಬ್ಬದ_ಶುಭಾಶಯಗಳು...
___12.03.2017
‘~;~;~’
ನೋವಿನಂಬನು ತೊಡೆದು ಅಕ್ಷಿ ಬಟ್ಟಲ ತುಂಬಿ ತುಳುಕಿದ ನಗೆಯ ಮಿಂಚಿನ ಮತ್ತ ಘಳಿಗೆಗಿಂತ ದೊಡ್ಡ ಹಬ್ಬ ಇನ್ನೊಂದು ಕಂಡಿಲ್ಲ...
ಹಸಿದ ಕರುಳಿಗೆ ತುತ್ತನಿತ್ತು ನಿಸ್ವಾರ್ಥ ತೃಪ್ತಿಯಲಿ ತೇಗಿದ ಮನುಜ ಕಂಗಳಲಿ ಮಿನುಗಿದ ನಗೆ ಬೆಳಕಲ್ಲಿ ಕಂಡ ದೇವರು ಯಾವ ಗುಡಿಯಲೂ ಸಿಕ್ಕಿಲ್ಲ...
#ಇಂತಿಪ್ಪ_ನಗೆಯನ್ನು_ಆಚರಿಸುವೆದೆಯಲ್ಲಿ_ದೇವರು_ಒಳಮನೆಯ_ಪರಿಚಾರಕ...
ಯುಗಾದಿಯ ಶುಭಾಶಯಗಳು...💐
___29.03.2017
‘~;~;~’
ಮಸ್ತಕದ ಮರುಳಿಗೆ ಮದ್ದನೀಯುವ ಪುಸ್ತಕವೆಂಬೋ ಹೂವಾಡಗಿತ್ತಿಯ ಸೆರಗಲ್ಲಿ ಸಾವಿರ ಹೂಗಳ ಭಾವದ ಘಮ...
ಈ ಬದುಕಿಂಗೆ ಬಿಕ್ಕದೇ ಬಿಳಲಾಗುವುದ ಕಲಿಸಿದ ಹೊತ್ತಿಗೆ ಎಂಬ ಗುರುವೇ ನಿನ್ನ ನಂಟೊಂದು ಹರಿಯದೇ ಹರಿಯುತಿರಲಿ...
#ವಿಶ್ವ_ಪುಸ್ತಕ_ದಿನವಂತೆ...
___23.04.2017

No comments:
Post a Comment