ನೇಹವೆಂಬೋ ಭಾವಾನುಭಾವ.....
ನೇಹವೇ,
ಅನ್ಸುತ್ತೆ ಆಗೀಗ -
ಕಳೆದೋಗಬೇಕು ನಾನೂ ನನ್ನಲ್ಲಿ - ಕಸರಾಗುವ ಮುನ್ನ ನಿನ್ನ ಕಣ್ಣಲ್ಲಿ...
ಆಗೆಲ್ಲ -
ನಿನ್ನ ನೋವು ನಲಿವುಗಳ ಜಗದ ಕುಹಕದ ಕಣ್ಣಿಂದ ಬಚ್ಚಿಡಲೋಸುಗವೋ ಅಥವಾ ಎಲ್ಲ ಹೂಳಿಡುವುದೇ ಹಗುರತೆಯ ಹಾದಿ ಎಂತಂದೋ ನಿನ್ನ ಸುತ್ತ ನಿನಗಾಗಿ ನೀ ಸೃಷ್ಟಿಸಿಕೊಂಡ ನೀರವತೆಯ ಪರಿಧಿಯನ್ನು ಅತಿಕ್ರಮಿಸಬಾರದು ಎಂತಲೇ ಹೆಣಗುತ್ತೇನೆ...
ಆದರೆ,
ಆ ಜಿದ್ದಿನಲ್ಲಿ ಕಣ್ಣೆದುರೇ ಭಾವ ಬಂಧದ ಬೆಸುಗೆಯ ನಡುವೆ ಇಂಚಿಂಚಾಗಿ ತೆರೆದುಕೊಳ್ಳುವ ಜಿಡ್ಡಿನ ಕಂದಕವ ಕಂಡು ಕರುಳು ಕಟಕಟಿಸುತ್ತದೆ...
ಅಲ್ಲಿಗೆ,
ಮತ್ತೆ ನಾನು ನಿನ್ನ ಮೌನದ ಗೋಡೆಯ ಮೇಲೆ ಲೊಚಗುಡುತ್ತ ತೆವಳುವ ಹಸಿದ ಹಲ್ಲಿಯಾಗುತ್ತೇನೆ - ಮಾತಿನ ಅಸಹಾಯ ಅನುಸಂಧಾನ...
ನಿಜವೆಂದರೆ - ಸುಲಭವಲ್ಲ ಹೆಳವನಿಗೆ ಒಂಟಿ ನಡಿಗೆ...
#ಸಾವೆಂದರೆ_ಮತ್ತೇನಲ್ಲ_ಸದ್ದಿಲ್ಲದೆ_ರದ್ದಿಯಾಗುವುದು...
{\!/!\!/}
ಬರಿ ನೇಹವೇನಾ - ಅಲ್ಲ ಅನ್ಸತ್ತೆ...
ಅಂದ್ರೆ ಪ್ರೇಮವಾ - ಖಂಡಿತಾ ಅಲ್ಲ...
ಮತ್ತೆ...?
ಭಾವದ ಸಲಿಗೆ ದೇಹಕ್ಕೆ ದಾಟಿದರೆ ಮೈಲಿಗೆಯಂತೆ...!!
ಲೋಕ ವಿವರ ಕೇಳತ್ತೆ - ಬಂಧ, ಸಂಬಂಧ ಏನು? ಹೇಗೆ? ಎಷ್ಟು? ಯಾಕೆ? ಎಲ್ಲೀವರೆಗೆ?
ಅರೆರೆ -
ಅರ್ಥವಾಗಲ್ಲ ನಂಗೆ: ಪ್ರಕೃತಿ ಪುರುಷ ಹೃದಯ ಸಂಗಾತಕ್ಕಾವ ಗೋತ್ರ, ಪ್ರವರ...?
ನನ್ನೊಳಗೋ ಅದಿಷ್ಟೇ -
ನೇಹಕೂ ಒಂದು ಹೆಜ್ಜೆ ಮುಂದೆ ಮತ್ತು ಪ್ರೇಮಕಿಂತ ಒಂದು ಮೆಟ್ಟಿಲು ಕೆಳಗೆ ಬೇಲಿಯಿಲ್ಲದ ಬಯಲಲಿ ಆಮೋದದಿ ತುಯ್ಯುವ ಹೆಸರಿರದ ಅಮೂರ್ತ ನಗೆ, ಮುಷ್ಟಿಯೊಳಗಣ ಬಿದಿಗೆ ಬೆಳ್ದಿಂಗಳ ಭಾವ ಜೀವ ಬೆಸುಗೆ...
#ಕಡಲು_ಪೌರ್ಣಿಮೆ_ಸುಖದ_ಕಣ್ಣಂಚ_ಹನಿ_ಮೌನ_ರಾಗ...
{\!/!\!/}
ಒಂದು ಮುರ್ಕಿಯ ಅಂಚಲ್ಲಿ ಅಚಾನಕ್ ಆಗಿ ಅರಿವೆ ಪರಿವೆಯ ಹಂಗಿಲ್ಲದೇ ಒಂದ್ಯಾವುದೋ ಹೊಸ ಆತ್ಮವನ್ನು ಸಂಧಿಸ್ತೀವಿ - ಸಣ್ಣ ಮಂದಹಾಸದಿಂದ ಶುರುವಾಗಿ ನಾಲ್ಕು ಗಾವುದ ಜೊತೆ ಜೊತೆಯ ಸರಸ ವಿರಸದಲ್ಲಿ ಭಾವನಾತ್ಮಕವಾಗಿ ಬಂಧಿಸಿಕೊಳ್ತೀವಿ - ಇನ್ಯಾವುದೋ ಕವಲು, ಸಣ್ಣ ಅಮಲು, 'ನಾನು' 'ನೀನು'ಗಳ ಕಾವಲು ಕಾಯುತ್ತಾ ಪ್ರಜ್ಞಾಪೂರ್ವಕವಾಗಿ ದೂರವನ್ನು ಸಾಧಿಸ್ತೀವಿ...
ಸಂಧಿಸಿ ಬಂಧಿಸಿ ಬಿಡಿಸಿಕೊಂಡ ಬದುಕಿನ ಚಿತ್ರದ ಅಂದವನ್ನ, ಬಂಧವನ್ನ ಸಕಾರಣಕ್ಕೋ, ಅಕಾರಣಕ್ಕೋ ಅಳಿಸಿ ಹಾಕುವ ವಿದಾಯವೆಂದರೆ ಬದುಕಿರುವಂತೆಯೇ ಸಾವನ್ನ ಅನುಭವಿಸುವುದೇ ಅಲ್ಲವಾ...
#ಬಂಧ_ಕನಸು_ಅರ್ಧಬರೆದಸಾಲು...
{\!/!\!/}
ಸಾವಿರ ಬಾರಿ "Love You" ಅಂತಂದು ಹೆಗಲು ತಬ್ಬಿಯೂ ಪ್ರೇಮವಲ್ಲದ, ಪ್ರೇಮವಾಗದ; ಅಷ್ಟೇ ಬಾರಿ "Hate You" ಅಂದು, ಅನ್ನಿಸಿಕೊಂಡು, ಮುನಿದು ಮುಖ ಊದಿಸಿಕೊಂಡೂ ಶಾಶ್ವತ ಮುಖ ತಿರುವಿ ನಡೆಯಲಾಗದ ಮುದ್ದು ಮುದ್ದು ಭಾವಾನುಭಾವ ಆಪ್ತತೆಗೆ ನೇಹವೆಂದಲ್ಲದೇ ಇನ್ನೇನಂತ ಕೂಗಲಿ...
ಚಣ ನಿಲ್ಲುವ ತಾಣವಲ್ಲದೆಯೂ ಅಲೆದಲೆದು ತೂರಿ ಬರುವ ಅಲೆಯ ಮೋದ; ಮರಳಿ ಮರಳಿ ಮೊರೆವ ಮಾತೆಲ್ಲವ ಮೌನದಲೆ ಆದರಿಸೋ ಕಿನಾರೆಯ ಸಂವೇದ - ಯುಗಯುಗಾಂತರದ ದಿವ್ಯ ಮೈತ್ರಿಯಲ್ಲದೇ ಇನ್ನೇನು...💞
#ನೇಹವೆಂಬೋ_ಶರಧಿ...
{\!/!\!/}
ಕಣ್ಣ ಕದಲಿಕೆಯ ಕಾಣು - ಮಾತು ಮಾತಲಿ ಮಾತು ಕಟ್ಟಿದ ಭ್ರಮೆಯ ಗೂಡು ಒಡೆದೀತು...
ನುಡಿಯಾಚೆಯ ನಡೆಯ ಗ್ರಹಿಸು - ಮಾತಾಗದ ಅಸಲೀ ಭಾವದ ಆಳಗಲದ ಅರಿವಾದೀತು...
ಆಪ್ತತೆಯ ಸನ್ನಿಧಿಯಲಿ ಭಯದ ಗೋಡೆ ಒಡೆದು, ಪ್ರೀತಿ ಬಾಗಿಲು ತೆರೆದು, ಭಾವ ಬಯಲಾಗಿ ಬಂಧ ಬೆಳಕಾಗಲಿ - ಅಲ್ಲೆಲ್ಲ ಎದೆ ಒಡೆವ ಮೌನಕಿಂತ ಕಿವಿ ಸುಡುವ ಮಾತೇ ಹಿತ...
#ಮಾತಿನಾಳದಮಾತು_ಮಾತುಮರೆಸಿದಮಾತು_ಎದೆಯಹೂಳಲಿಹೂತುಕೂತಿರೋಮಾತು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

"ಸಾವೆಂದರೆ_ಮತ್ತೇನಲ್ಲ_ಸದ್ದಿಲ್ಲದೆ_ರದ್ದಿಯಾಗುವುದು..."
ReplyDeleteಸಾವಿನ definition ಒಂಥರಾ ಚಂದವಿದೆ...
"ಸಾವಿರ ಬಾರಿ "Love You" ಅಂತಂದು ಹೆಗಲು ತಬ್ಬಿಯೂ ಪ್ರೇಮವಲ್ಲದ, ಪ್ರೇಮವಾಗದ; ಅಷ್ಟೇ ಬಾರಿ "Hate You" ಅಂದು, ಅನ್ನಿಸಿಕೊಂಡು, ಮುನಿದು ಮುಖ ಊದಿಸಿಕೊಂಡೂ ಶಾಶ್ವತ ಮುಖ ತಿರುವಿ ನಡೆಯಲಾಗದ ಮುದ್ದು ಮುದ್ದು ಭಾವಾನುಭಾವ ಆಪ್ತತೆ" ಚಂದ..
This comment has been removed by the author.
ReplyDeleteತುಂಡು ಬರಹಗಳಲ್ಲಿಯೂ ಬಗೆ ಬಗೆಯ ಭಾವಗಳ ನಂಟು. ಜೊತೆಗೆ ಸ್ನೇಹವೂ ಉಂಟು
ReplyDelete