ಮಳೆಬಿಲ್ಲ ಬೆಮರು.....
ಮಳೆಬಿಲ್ಲಿನಂಥವಳೇ -
ಮಳೆಯೊಂದಿಗಿನ ನಿನ್ನ ನೆನಪನ್ನು ಬೇರ್ಪಡಿಸಲಾಗದೇ ಸದಾ ಸೋಲುತ್ತೇನೆ...
ತೋಯ್ದು ತೊಪ್ಪೆಯಾಗಿ ನನ್ನನೂ ತೋಯಿಸಿ ಮನೆ ಸೇರಿ ಹೆಗಲ ಚೀಲದಿಂದ ಕೊಡೆ ತೆಗೆದಿಟ್ಟು ಕಣ್ಮಿಟುಕಿಸಿ ಗೊಳ್ಳನೆ ನಗುತ್ತಿದ್ದ ನಿನ್ನವು ಮಾತ್ರ ಅನ್ನಿಸ್ತಿದ್ದ ಮುದ್ದು ಸಂಜೆಗಳು...
ಇರುಚಲನು ಮಿಂದ ಕಿಟಕಿ ಸರಳುಗಳ ತುಕ್ಕಿನ ಹಸಿ ಘಮಲಿಗೆ ಉಸಿರು ಬೀಗುವಾಗ ಸದ್ದಿಲ್ಲದೆ ಕಳ್ಳ ಬೆಕ್ಕಿನಂತೆ ಕರುಳ ಸೇರಿ ತುಟಿ ತಿರುವಲ್ಲಿ ಅರಳುತಿದ್ದ ಆಸೆ ಉಂಗುರ...
ಬೀದಿಗಿಳಿದು ತೋಯಲಾಗದ ಮಳೆಯ ಮಧ್ಯಾಹ್ನದ ಉತ್ತರಾರ್ಧದಲಿ ಒಟ್ಟೊಟ್ಟಿಗಿನ ಬಿಸಿನೀರ ಅಭ್ಯಂಜನಕೆಳೆದು ಕನ್ನಡಿಗೆ ನಾಚಿಕೆಯ ಬಿಂಬವ ಅಂಟಿಸಿದ್ದು...
ಒದ್ದೆ ಜಡೆಯ ಕೊಡವುವಾಗ ಇದ್ದಲ್ಲೇ ಘಲ್ಲೆಂದು ಲಘುವಾಗಿ ಕಂಪಿಸುವ ಆ ಪುಟ್ಟ ಎದೆ ಗೊಂಚಲು ನನ್ನಲ್ಲಿ ಎಬ್ಬಿಸುತಿದ್ದ ಅಬ್ಬರದ ಪ್ರಣಯಾತುರ ಅಲೆಗಳು...
ಮಿಂದೆದ್ದು ಬಂದವನ ತಾಜಾತನದ ಕಮ್ಮನೆ ಕಂಪಿಗೆ ಕಣ್ಣರಳಿಸಿ ಒರಟು ನಡು ತಬ್ಬಿ ತೆರೆದೆದೆಗೆ ಮುದ್ದಾಗಿ ಉಜ್ಜಿ ಗಂಡು ಬೆತ್ತಲೆಗೂ ರಂಗು ತುಂಬುತಿದ್ದ ಮೂಗುತಿಯ ಗೀರುಗಳೆಲ್ಲ ರೋಮಗಳ ಮರೆಯಲ್ಲಿನ್ನೂ ಬಿಮ್ಮಗೆ ಕೂತೇ ಇವೆ ಕಣೇ...
ಮತ್ತೆ ಹಸಿಯಾಗಿ ಕಾಡುವ ಬಾನು ಮುಡಿ ಬಿಚ್ಚಿ ಮೋಡ ಕರಗಿದ ಆ ತಿಳಿ ಬೆಳಕ ಹಾಸಿನಲಿ ಬೆನ್ನ ಬಯಲಲ್ಲಿ ನೀ ನೆಟ್ಟ ಉಗುರ ಹಳೇ ಗಾಯಗಳು...
ಮೀಯೋ ಕೋಣೆಯ ದರ್ಪಣದಂಚಿಗೆ ಅಂಟಿಸಿ ನೀ ಮರೆತ ಬಿಂದಿಗಳ ಚಿತ್ತಾರ ಇನ್ನೂ ಹಾಗ್ಹಾಗೇ ಇದೆ ಮಾರಾಯ್ತೀ - ಈ ನೆನಹುಗಳಂತೆಯೇ...
ಒಟ್ಟಾಗಿ ದಾಳಿಯಿಡುವ ಆ ಬಿಡಿ ಬಿಡಿ ಚಿತ್ರಗಳು ಈ ಎದೆಯ ಇಡಿ ಇಡಿಯಾಗಿ ಸುಡುತ್ತವೆ...
ನನ್ನೊಲವ ಕಪ್ಪು ಹುಡುಗೀ - ನೀನಿಲ್ಲದ ಮಳೆಗಿಲ್ಲಿ ಕನಸುಗಳಿಲ್ಲ; ನೆನಪಿನ ಉರಿಗಿಂದು ಸಾವಿನ ಬಣ್ಣ...
🔃🔃🔃
ವಸುಧೆ ಕೊರಳಿಗೆ ಮಳೆಯ ಮುತ್ತಿನ ಮಣಿ ಹಾರ - ದಿನಮಣಿಗೆ ಮೋಡದ ಹೊದಿಕೆ - ಕಡು ಸಂಜೆಗೂ ಮುಂಚಿನ ನಿದ್ದೆಗಣ್ಣ ಕೂಸಿನಂಥ ತಿಳಿಗತ್ತಲು; ಈ ತಂಪಿಗೆ, ಏಕಾಂತದ ಕಂಪಿಗೆ, ಇಂಪಾಗಿ ಸೊಂಪಾಗಿ ನೀ ಹಾಡಾಗಿ ಬಂದರೆ - ಎದೆಗೂಡ ತುಂಬೆಲ್ಲಾ ಒಲವಾ ಚೆಲುವ ಪಾರಿಜಾತದ ತಳಿರು, ಕಾಲ್ಗೆಜ್ಜೆ ಘಳಿರು...
ಇಬ್ಬನಿಯು ನೆಲ ತಬ್ಬಿದಂತೆ ಕೆನ್ನೆ ಗುಳಿಯ ಸುತ್ತ ತುಟಿಯ ತೇವದ ಚುಕ್ಕಿ ರಂಗೋಲಿ - ಕಟಿಯ ಬಳುಕಿನಂಚಲಿ ಹಸಿ ಬಿಸಿ ಸುಳಿ ಮಿಂಚು...
ತುಸು ಸಾವರಿಸಿ ಸಹಕರಿಸು - ಆ ಬೆತ್ತಲ ಬೆಳದಿಂಗಳ ಬೆಂಕಿ ಚಿತ್ತಾರದಲಿ ಈ ಇರುಳ ಬಾಗಿಲ ಸಿಂಗರಿಸು...
ಮರಳಿ ಹೊರಳಿ ನಾಭಿ ಸ್ಫೋಟಿಸಲಿ...
ಹೊಸ ಹೊಸದಾಗಿ ಹಸಿವು ಕೆರಳಿ ಮತ್ತೆ ಮತ್ತಲ್ಲೇ ಮತ್ತಿನ ಮುದ್ದು ಹುಟ್ಟಲಿ...
#ಮಳೆ_ಸಂಜೆಯ_ಮತ್ತಿನಾಸೆ...
🔃🔃🔃
ಬೆತ್ತಲೆ ಸೀಮೆಯ ಶ್ರೀಮಂತ ಅಂದದ ಗಣಿಯೆರಡು ಮಂದ ಬೆಳಕನ್ನು ಮೀಯುವಲ್ಲಿ, ನಾಚಿಕೆಯ ಬಾಗಿಲ ವಾಡೆಯಿಂದ ಇಣುಕಿದ ಅರೆಬರೆ ದಿಟ್ಟಿ ಉಸಿರ ಕೈ ಹಿಡಿದು ಹಾದಿ ತಪ್ಪಿ ಏರು ಜಾರಿನ ಊರೆಲ್ಲ ಅಲೆದಲೆದು, ಬೆನ್ನ ಹಾಳಿಯಲಿ ಬೆವರ ಟಿಸಿಲೊಡೆದು ಮಧುರ ಪಾಪದ ಕೇಳಿಯ ಒಪ್ಪಂದಕೆ ನಡು ಗದ್ದೆ ಕೊನೆಯ ಋಜು ಒತ್ತಿತು...
#ಪ್ರೇಮೋತ್ಖನನ...
🔃🔃🔃
ಸ್ನಾನದ ಮನೆ ಮೂಲೇಲಿ ಮೊಟ್ಟೆ ಇಟ್ಟು ಕಾವಿಗೆ ಕೂತ ಪಾರಿವಾಳದಂತೋಳು ನೀನು - ಮನ್ಸಿಗೆ ತುಸುವೂ ವಿರಾಮ ಕೊಡದೇ ಎಲ್ಲೆಲ್ಲೂ ಸತಾಯಿಸ್ತೀಯಾ...
ಛೀsss ನಾಚ್ಕೆ ಆಗಲ್ವೇನೆ - ಗಂಡೈಕ್ಳು ಮೀಯೋ ಹೊತ್ತಲ್ಲೂ ಕಣ್ಣು ಕೂಡ ಮಿಟುಕಿಸದೆ ಕೂರ್ತೀಯಲ್ಲ... 😜
#ಒಂದು ಪಾರಿವಾಳದ ಬಾಣಂತನ...
🔃🔃🔃
ಬೆಚ್ಚನೆ ರಮಣೀಯತೆಯ ಸಾಕಿಕೊಂಡ ತನ್ನ ಮೆತ್ತನ್ನ ಎದೆ ದಿಬ್ಬಗಳ ನಟ್ಟ ನಡುವಣ ಕಿರು ಓಣಿಯಲ್ಲಿ ನನ್ನ ಬಿಸಿ ಉಸಿರಿಗೆ ಆಸೆಯ ಘಮ ಉಣಿಸಿ ಕುಚ್ಚು ತಟ್ಟುತಾಳೆ - ಇರುಳೊಂದು ಹಿಂಗಿಂಗೆ ಶುರುವಾಗಿ ಮತ್ತೇರಿ ಬೆವರಾಗುತ್ತದೆ...
ಅವಳು ಹೇಳೋ ಶುಭರಾತ್ರಿ...😍
🔃🔃🔃
ನನ್ನುಸಿರು ನಿನ್ನುಸಿರೊಂದಿಗೆ ಹರೆಯದ ಹಸಿವಿನ ಪಿಸುಮಾತನಾಡುವಾಗ ತುಂಟ ತುಟಿಗಳು ಮಕ್ಕಳಂದದಿ ಕಚ್ಚಾಡುತ್ತವೆ - ನಿನ್ನೆದೆ ಮೆತ್ತೆಯ ಅಲಂಕರಿಸಿದ ಮೊದಲ ಬೆವರ ಹನಿಗೆ ಎನ್ನ ಕಿರು ಬೆರಳು ಸುಡುವಾಗ ಕಿಬ್ಬೊಟ್ಟೆ ಇಳಿಜಾರಿನಲ್ಲಿ ಪತಂಗ ನಾಟ್ಯೋತ್ಸವ - ಸುಖ ರಸ ರಾಗಕ್ಕೆ ಇಕ್ಕಳಗಾಲಿನ ಶಯನಬಂಧದಿ ನೇಗಿಲ ಕಸುವು ನೆಲವ ಸೀಳಿ, ಒದ್ದೆ ನೆಲ ನೇಗಿಲ ನುಂಗಿ ಭುವಿ ಗರ್ಭದಿ ಬೀಜಾಂಕುರದ ಕನಸು...
#ಇರುಳ_ಬೆವರು_ಬೆತ್ತಲೆ_ಬೆಳಕು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:
Post a Comment