ನಿಸ್ತಂತು ಬದುಕು.....
ನಿನ್ನೆಡೆಗಿನ ಚೂರು ಮೋಹಕ್ಕಾಗಿ ನಾನಲ್ಲದ ನನ್ನನ್ನು ಬದುಕಿ ಸುಸ್ತಾಗುತ್ತೇನೆ - ಪ್ರತಿ ನಿತ್ಯದ ಪ್ರತಿ ಘಳಿಗೆ ಒಳಗೊಳಗೇ ಮತ್ತೆ ಮತ್ತೆ ಸಾಯುತ್ತೇನೆ - ನಂಗ್‌ನಂಗೇ ಅಂತ ಒಂಚೂರೂ ಜಾಗಕ್ಕಾಗಿ ಮಂಚದ ಮನೆಯಲ್ಲೂ ತಡಕಾಡುತ್ತೇನೆ...
"ಪ್ರೀತಿಯಿಂದ ಪಡೀಬೇಕಿತ್ತು ಇಲ್ಲಾ ಪ್ರೀತಿಯಿಂದ ಬಿಟ್ಕೊಡಬೇಕಿತ್ತು" - ಒಂದೂ ಬಗೆಹರಿಯದೇ ಸಾಕಿಕೊಂಡದ್ದು ಹಳಹಳಿಕೆಯನ್ನಾಯಿತು...
ರೂಢಿಗತ ಈಗ - ಜೀವಂತ ತಲ್ಲಣಗಳನು ಹೊದ್ದು ಸಾವಿನಂತ ನಿದ್ದೆಗೆ ಕಾಯುತ್ತಾ ಇರುಳ ಮಡಿಲಿಗೆ ಜಾರುತ್ತೇನೆ...
ಹಾಂ... ಹೌದು... ನಿನ್ನ ಬೆನ್ನಿಗೆ ಕಣ್ಣಿಟ್ಟು ಊಳಿಡುತಿರುವುದು; ಅದು ನನ್ನದೇ ಕಳೇಬರ...
#ಘೋರಿ_ಮೇಲಿನ_ನೆರಳು...
↰↲➤➤➤↲↱
ಕೇಳಿಲ್ಲಿ -
ಹೊಸ ಹೊಸ ರೂಪದಲ್ಲಿ ಗೋಳುಗಳಷ್ಟೇ ಎಡತಾಕುವ ನಿಸ್ಸಾರದ ಈ ಹಾದಿಯಲ್ಲಿ ನೀನಾದರೂ ಒಂದು ಘಳಿಗೆ ಕಾಲಾಡಿಸಬಾರದೇ - ನೋವ ಗೆದ್ದು ಕೊಡುವುದಕ್ಕಲ್ಲ, ನಗೆಯ ಮಿಂಚೊಂದ ನನ್ನಲೇ ಹುಡುಕುವ ಹುಕಿ ಹುಟ್ಟಿಸಲಾದರೂ...
ನಿನ್ನದೊಂದು ಘಮದ ಋಣಭಾರವಾದರೂ ಜೊತೆಗಿದ್ದಿದ್ದರೆ ಈ ಪಯಣಕೆ ಹೇಳಿಕೊಳ್ಳಲೊಂದು ಉದ್ದೇಶವಾದರೂ ಕಾಣುತ್ತಿತ್ತಲ್ಲ...
#ಬೇವರ್ಸಿಯ_ಖಾಲಿ_ಜೋಳಿಗೇನ_ಬಿಟ್ಟಿಕನಸು_ಕೂಡಾ_ಮೂಸುವುದಿಲ್ಲ....
↰↲➤➤➤↲↱
ಹೊಸತೊಂದು ನೋವಾದರೂ ಬೇಕು ಹೆಣಗಾಡಿ ನಗುವುದಕ್ಕೆ - ಈ ಹಾಳು ಸುರಿವ ಖಾಲಿಗಿಂತ...
#ನಿಸ್ತಂತು_ಬದುಕು...
↰↲➤➤➤↲↱
ಸಂತೆಯ ಅಟಾಟೋಪಕ್ಕೆ, ಜಂಗುಳಿಯ ಆಡಂಬರಕೆ ಒಳಗೊಳಗೇ ಬೆಚ್ಚುತ್ತಾ ಅಲ್ಲೇ ಅಲೆಯುತ್ತಿರುತ್ತೇನೆ ಗುಂಪಿಗೆ ಸೇರದ ಪದವೊಂದು ಗುಂಪಿನಲ್ಲಿ ಎದ್ದು ಕಾಣುವಂತೆ...
#ಮೌನದ_ಭಯಕ್ಕೆ_ಬಿದ್ದ_ಜಂಗಮ...
↰↲➤➤➤↲↱
ಸಂತೆಯನ್ನೇ ಮನೆ ಮಾಡಿಕೊಂಡರೂ ಖಾಲಿತನಕ್ಕೆ ಮದ್ದು ಸಿಗುತ್ತಿಲ್ಲ - ಒಳಮನೆಯ ವಾಸ್ತುವೇ ಸರಿಯಿಲ್ಲವೇನೋ...
#ಒಣಕಲು_ಎದೆ...
↰↲➤➤➤↲↱
ಕನಸಿದಂತದ್ದೇ ಅಂತ್ಯವ ತಲುಪಲಾರದ ಅನುಮಾನದ ಭರದಲ್ಲಿ ಆರಂಭವನ್ನೂ ಪ್ರೀತಿಸದೇ ಹೋದರೆ ನಡಿಗೆಯೇ ಇಲ್ಲ, ಸೋಲಿನ ಅನುಭವವೂ ಇಲ್ಲ...
#ಹೊರಟು_ನೋಡು_ಸಿಕ್ಕೀತು_ನಗೆಯ_ಜಾಡು...
↰↲➤➤➤↲↱
ಅವಳ ಹಾಡಿ ಹೊಗಳಿ ಮಣಗಟ್ಟಲೆ ಬರೆದೇ ಬರೆದೆ...
ಅಬ್ಬಾ, 'ಎಷ್ಟೊಂದು ಪ್ರೀತಿಸ್ತೀಯಲ್ಲೋ ಅವಳನ್ನ!!' ಅಂತ ದೈವೀಕವೆಂದರು ಓದಿದ, ಕೇಳಿದ ಎಲ್ಲ...
ಉಹುಂ, ಪ್ರೀತಿಸಿದ್ದಲ್ಲ ನಾ ಅವಳನ್ನ - ಎದೆಯ ಸತ್ಯ ಬೇರೆಯೇ ಇದೆ ನನ್ನದು...
ಕೊಡಬೇಕಿದ್ದ ಹೊತ್ತಲ್ಲಿ, ಕೊಡಬೇಕಿದ್ದ ಪ್ರೀತಿಯನ್ನ, ಕೊಡಬೇಕಾದ ರೀತಿಯಲ್ಲಿ, ಕೊಡಲಾಗದ ಸೋಲನ್ನು ಬರೆದದ್ದು; ಶಬ್ದಗಳ ಸುಳಿಯಲ್ಲಿ ಒಳಗಿನ ಅಸಹಾಯಕತೆಯ ನೀಗಿಕೊಂಡಂತೆ ನಿಡುಸುಯ್ದದ್ದು ಅಷ್ಟೇ, ಅದಷ್ಟೇ...
ಆದರೆ,
ಓದು ಬಾರದ ಅವಳ ಕಣ್ಣ ಬಟ್ಟಲಲ್ಲಿ ನಿಜ ಪ್ರೀತಿ ಗಂಗೆ ತುಳುಕಿ ನಗುವಾಗಲೆಲ್ಲ ನಾನು ಮುಕ್ಕಾಗುತ್ತೇನೆ - ಒಳಗೇ ಸಾಯುತ್ತೇನೆ...
ಸುಳ್ಳು ಸಮಾಧಾನಕ್ಕೆ ಕಥೆ, ಕವಿತೆಯ ಬಣ್ಣ - ಕತ್ತಲನ್ನು ಹೇಗೂ ಬಣ್ಣಿಸಬಹುದಲ್ಲ...
ದಾಟಬಹುದಾದರೆ ಅದು ಬದುಕನ್ನಷ್ಟೇ - ಸಾವನ್ನು ಹಾಯಲಾದೀತೆ...
"ನಾನು ಹುಟ್ಟಿದೆ - ಅವಳು ಸತ್ತೋದಳು..."
#ಅವಳು...
↰↲➤➤➤↲↱
ಈ ಜಗತ್ತಿನಾಚೆಯ ಒಂದು ಅತಿರೇಕದ ಬದುಕನ್ನು ಒಂದ್ಹತ್ತು ವರ್ಷವಾದ್ರೂ ಬದುಕಬೇಕು...
ಹಡಬೆ ದನದ ಹುಚ್ಚು ಬದುಕೊಂದು ನಂದ್‌ನಂದೇ ಆಗಿ ನಂಗಿರಬೇಕು...
ಬೆಳಕ ಬಟ್ಟೆಯನುಟ್ಟ ಬಯಲ ಬೆತ್ತಲೆಯಲ್ಲಿ ನನ್ನೊಳಿಲ್ಲದ ನನ್ನ ನಿನ್ನೊಳು ಬೆದಕಬೇಕು...
ಚಿತ್ರದೊಳಗಣ ನಗುವ ಚೂರುಪಾರು ಚಿತ್ತಕಿಳಿಸಿಕೋಬೇಕು...
#ಬೇವರ್ಸಿ_ಕನಸು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಕುಂಚ: ಅಮನ್. |

ನಿನ್ನೆಡೆಗಿನ ಚೂರು ಮೋಹಕ್ಕಾಗಿ ನಾನಲ್ಲದ ನನ್ನನ್ನು ಬದುಕಿ ಸುಸ್ತಾಗುತ್ತೇನೆ" - ಬಹಳ ಕಾಲ ಕಾಡುವ ಸಾಲು
ReplyDelete