ಮದನೋತ್ಸವ ಮೋಹಶಕೆ.....
ಕಾಳಿಂದಿ -
ನಿನ್ನೆಡೆಗಿನ ಹಗಲುಗನಸೊಂದು ಚಂದಿರನೂರಿನ ತಂಬೆಲರ ಮೀಯುತ್ತಾ ನನ್ನ ಮೃತ ಸಂಜೆಗಳನು ಸಂಜೀವಿನಿಯಂತೆ ಸಲಹುತ್ತದೆ...
ಮತ್ತು
ಕಣ್ಮುಚ್ಚಿ ನಿನ್ನ ಇನ್ನಷ್ಟು ಕಾಣುತ್ತೇನೆ...
ನಿನ್ನ ಕಾಣುವಾಟದ ಉನ್ಮತ್ತ ಉತ್ತುಂಗದಲೂ ಕಣ್ಮುಚ್ಚಿ ಸುಖಮತ್ತ ಸಮಾಧಿಸ್ಥನಾಗುತ್ತೇನೆ...
#ನನ್ನ_ಧ್ಯಾನ...
⇴↯⇎↯⇴
ಏನ್ಗೊತ್ತಾ,
ಈ ಆಷಾಢದ ಮಗ್ಗುಲಿನ ದಟ್ಟ ತಂಪಿನ ರಾತ್ರಿಗಳಲಿ ಅಂಗಳದ ಮಣ್ಣ ಘಮ ಉಸಿರಲ್ಲಿ ಚಕ್ರ ಸುಳಿವಾಗ ಥಟ್ಟನೆ ನಿನ್ನ ಕಿವಿ ಹಿಂದಿನ ತಿರುವಿನ ಹೆಣ್ಣು ಕಂಪು ನೆನಪಾಗುತ್ತೆ ನೋಡು...
ಅಲ್ಲಿಂದಾಚೆ ಮೃಗವಾಂಛೆಯ ಒಂದೊಂದೇ ಪುಟಗಳು ಇರುಳ ಗಾಳಿಗದುರಿ ಪಟಪಟಿಸುತ್ತವೆ...
ನಿನ್ನ ಉಡುಗೆ ತೊಡುಗೆ ತೊಡೆದುಹಾಕಿ ಬೆತ್ತಲಾಚೆಯ ಬಹುವಿಧ ಅಲಂಕಾರಗಳ ಕೆಡಿಸಬೇಕು...
ಕಣ್ಣ ಚಮೆಯನು ಕುಂಚವಾಗಿಸಿ ನಿನ್ನ ಎದೆ ಗುಂಬದ ಮೊನಚು ತುದಿಯ ಸುತ್ತಾ ನನ್ನ ನಾನೇ ಬರೆಯಬೇಕು...
ಉಸಿರುಸಿರ ಮಾರುತ ಮೈಯ್ಯ ಆಳ ತೀರಗಳನೆಲ್ಲ ತೀಡಿಯಾಡಿ ಮೈಮರೆಸಬೇಕು...
ನಾ ನಿನ್ನೊಳಿಳಿದು ಜೀವಂತ ಚಿತ್ರವಾಗಬೇಕು - ನಿನ್ನ ಕೂಡೋ ಪರಮ ಪೋಲಿ ಪಾತ್ರವಾಗಬೇಕು...
ಕೇಳು,
"ನಾನು ಬ್ರಹ್ಮ ಬರೆದ ಅಲಂಕಾರಕ್ಕೆ ಬೇಶರತ್ ಸೋತವನು..."
ಹಾಗೆಂದೇ ನಿನ್ನ ಹಾಯೋ ನನ್ನ ಕನಸೆಲ್ಲ ಹಸಿಹಸಿ ಅಂಗಳಕೆ ಬಿದ್ದ ಉನ್ಮತ್ತ ಬಾನು...
#ಮದನೋತ್ಸವ_ಶಕೆ...
ಕಾಳಿಂದಿ -
ನಿನ್ನೆಡೆಗಿನ ಹಗಲುಗನಸೊಂದು ಚಂದಿರನೂರಿನ ತಂಬೆಲರ ಮೀಯುತ್ತಾ ನನ್ನ ಮೃತ ಸಂಜೆಗಳನು ಸಂಜೀವಿನಿಯಂತೆ ಸಲಹುತ್ತದೆ...
ಮತ್ತು
ಕಣ್ಮುಚ್ಚಿ ನಿನ್ನ ಇನ್ನಷ್ಟು ಕಾಣುತ್ತೇನೆ...
ನಿನ್ನ ಕಾಣುವಾಟದ ಉನ್ಮತ್ತ ಉತ್ತುಂಗದಲೂ ಕಣ್ಮುಚ್ಚಿ ಸುಖಮತ್ತ ಸಮಾಧಿಸ್ಥನಾಗುತ್ತೇನೆ...
#ನನ್ನ_ಧ್ಯಾನ...
⇴↯⇎↯⇴
ಏನ್ಗೊತ್ತಾ,
ಈ ಆಷಾಢದ ಮಗ್ಗುಲಿನ ದಟ್ಟ ತಂಪಿನ ರಾತ್ರಿಗಳಲಿ ಅಂಗಳದ ಮಣ್ಣ ಘಮ ಉಸಿರಲ್ಲಿ ಚಕ್ರ ಸುಳಿವಾಗ ಥಟ್ಟನೆ ನಿನ್ನ ಕಿವಿ ಹಿಂದಿನ ತಿರುವಿನ ಹೆಣ್ಣು ಕಂಪು ನೆನಪಾಗುತ್ತೆ ನೋಡು...
ಅಲ್ಲಿಂದಾಚೆ ಮೃಗವಾಂಛೆಯ ಒಂದೊಂದೇ ಪುಟಗಳು ಇರುಳ ಗಾಳಿಗದುರಿ ಪಟಪಟಿಸುತ್ತವೆ...
ನಿನ್ನ ಉಡುಗೆ ತೊಡುಗೆ ತೊಡೆದುಹಾಕಿ ಬೆತ್ತಲಾಚೆಯ ಬಹುವಿಧ ಅಲಂಕಾರಗಳ ಕೆಡಿಸಬೇಕು...
ಕಣ್ಣ ಚಮೆಯನು ಕುಂಚವಾಗಿಸಿ ನಿನ್ನ ಎದೆ ಗುಂಬದ ಮೊನಚು ತುದಿಯ ಸುತ್ತಾ ನನ್ನ ನಾನೇ ಬರೆಯಬೇಕು...
ಉಸಿರುಸಿರ ಮಾರುತ ಮೈಯ್ಯ ಆಳ ತೀರಗಳನೆಲ್ಲ ತೀಡಿಯಾಡಿ ಮೈಮರೆಸಬೇಕು...
ನಾ ನಿನ್ನೊಳಿಳಿದು ಜೀವಂತ ಚಿತ್ರವಾಗಬೇಕು - ನಿನ್ನ ಕೂಡೋ ಪರಮ ಪೋಲಿ ಪಾತ್ರವಾಗಬೇಕು...
ಕೇಳು,
"ನಾನು ಬ್ರಹ್ಮ ಬರೆದ ಅಲಂಕಾರಕ್ಕೆ ಬೇಶರತ್ ಸೋತವನು..."
ಹಾಗೆಂದೇ ನಿನ್ನ ಹಾಯೋ ನನ್ನ ಕನಸೆಲ್ಲ ಹಸಿಹಸಿ ಅಂಗಳಕೆ ಬಿದ್ದ ಉನ್ಮತ್ತ ಬಾನು...
#ಮದನೋತ್ಸವ_ಶಕೆ...
⇴↯⇎↯⇴
ಹಂಡೆ ಉರಿ ನೀರ ಮಿಂದು ಬಂದವಳ ಎದೆ ಗೊಂಚಲ ಮೆತ್ತೆಯ ತೀರಗಳಿಂದ ಹೊರಟ ಸೋಪಿನ ಅತ್ತರು ಮೆತ್ತಿದ ಬೆಚ್ಚಾನೆ ಎಳೆ ಬೆವರ ನವಿರು ಕಂಪು ಎನ್ನ ಉಸಿರ ಬಳ್ಳಿಯ ಹಿಡಿದು ನೇರ ನಾಭಿಮೂಲವ ಸೇರಿ ಅಡಿ ಮುಡಿಯ ಊರು ಕೇರಿಗಳಲೆಲ್ಲ ಅಬ್ಬರದ ಕಾಮನ ಹಬ್ಬ...ಏರಬೇಕಾದ ಉನ್ಮತ್ತ ಉರ ಏರಿ, ಇಳಿಯಬೇಕಾದ ಇರುಕಲ ಮಡು ಆಳ, ಬೆಳಕು ಕತ್ತಲ ಮಡತೆಗಳಲಿ ದಿಕ್ಕು ದೆಸೆಯಿಲ್ಲದೇ ಅಲೆದಲೆದು ದಣಿವ ಕಣ್ಣು, ಮತ್ತೆ ಮತ್ತದೇ ಅಂದಕೆ ಮಣಿದು ಅಂಕೆ ತಪ್ಪುವ ಉಸಿರ ಹೋರು...
ಆಹಾ...
ಸೋಲು ಕೂಡಾ ಅದೆಷ್ಟು ಮಧುರವೋ ಇಲ್ಲಿ - ಹೆಣ್ಣ ಅಸೀಮ ಚೆಲುವಿನ ಸೊಬಗು ಸಿರಿವಂತಿಕೆ ಎದುರಲ್ಲಿ...
ಆ ಬೊಮ್ಮನ ಕುಂಚ ಕೌಶಲಕೆ ಮಾರ ನಮನ...
ಕತ್ತಲಲೂ ಬೆತ್ತಲನು ಅರೆಗಣ್ಣಲ್ಲಿ ಹೀರೋ ತೀವ್ರತಮ ಸಭ್ಯ ನಾನು, ನಡು ಹಗಲ ಸೌಂದರ್ಯ ಸಮರದಿ ಶರಂಪರ ಸೆಣಸಿ ಬೇಶರತ್ ಸೋಲುವಲ್ಲಿ ನಡುಬೀಡು ಪುಡಿ ಪುಡಿ...
#ಆಹ್_ರತಿಸದನ_ಮೋಹಾಘಾತವೇ...
⇴↯⇎↯⇴
ಧೋ ಮಳೆಯೊಂದಿಗೆ ಕಪಿಲೆ ಕರುವಿನ ಘಂಟೆ ದನಿ ಸೇರಿದಂತೆ ಒಳಮನೆಯಲಿ ಆಯಿ ಶಾಂತ ಲಹರಿಯಲಿ ಹರಿನಾಮವ ಗುನುಗುತಿರುವಾಗ ಮೆತ್ತಿ ಯೆಂಚಿನ ಮೂಲೆಯಲಿ ನಿನ್ನ ತುಟಿಯಿಂದ ಕದ್ದ ಏದುಸಿರ ಮುತ್ತಿನ ಪುರಾತನ ಪುಳಕದ ಮೆಲುಕಿನಲಿ ನಾನಿಲ್ಲಿ ತುಂತುರುವಿಗೆ ಎದೆ ತೆರೆದರೆ ನಿನ್ನನ್ನೂ ಮಳೆಯಲಿ ಮೀಯಿಸಿದಂತೆಯೇ ಲೆಕ್ಕ...ಎಳೆ ಹೆಣ್ಣ ಹೊಳೆ ಭಾವ ಬಸುರಿನ ಅಸ್ಥಿರ ಬಯಕೆಗಳ ವಿಚಿತ್ರ ತಲ್ಲಣದ ಯಾವುದೋ ದ್ಯಾಸದಲಿ ನೀನೊಮ್ಮೆ ಸುಮ್ಮನೆ ಕೂತಲ್ಲೇ ಕಾಲು ಕುಣಿಸಿದರೂ ಆ ಗೆಜ್ಜೆ ಕಿಂಕಿಣಿ ನನ್ನೇ ಕೂಗಿದಂಗೆ ಭಾಸ...
ಮನ್ಸು ಬಯಸಿದ ಅಮೃತ ಘಳಿಗೆಗೆ ಬೆರಳಂಚಿಗೆ ನಾ ಸಿಗದೇ ಹೋದಾಗ ನೀ ನಿನ್ನ ಸುಳ್ಳು ಅಸಹನೆಯ ಗಂಟು ಮುಖದಲ್ಲಿ ನನ್ನ ಹುಡುಕಿಕೊಳ್ಳುವ ಚಡಪಡಿಕೆಯ ಮೋದವ ಸವಿಯಲು ಮತ್ತೆ ಮತ್ತೆ ಕಳೆದೋಗಬೇಕೆನಿಸುತ್ತಿತ್ತಲ್ಲ...
ಸಣ್ಣ ಛಳಿಯ ಮಧ್ಯಸ್ಥಿಕೆಯಲಿ ಆ ಮುನಿಸು ಮುರಿಯುವ ರಾಜೀ ಸೂತ್ರದ ರಮ್ಯ ರಸಿಕ ಕ್ಷಣಗಳ ಬ್ರಹ್ಮ ಲಿಪಿಯ ಶೃಂಗಾರ ಕವಿತೆಗಳನು ವಿರಹ ಕಾಲದಲಿ ಕನ್ನಡಿಯೆದುರಿನ ಬೆತ್ತಲಲಿ ಮತ್ತೆ ಮತ್ತೆ ಓದಿಕೊಳ್ಳುತ್ತೇನೆ...
#ಹ್ಯಾಂಗೆ_ಮಣಿಸೋದು_ಹೇಳು_ಆಜನ್ಮವಿರಹಿಯ_ಪೋಲಿ_ಸಂಜೆಗಳ_ಕಾವನು...
⇴↯⇎↯⇴
ಹನಿ ಗರ್ಭದ ಮೋಡವೇ -
ವಸಂತ ವನ ಪುಷ್ಪದ ಎಸಳಿನಂತೆ ನಗೆಯ ಚಿಗುರು ಬೆರಳಲ್ಲಿ ಇರುಳ ಪಕ್ಕೆಯ ತಿವಿದು ಬೆಳಕಿಗೆ ಕಚಗುಳಿ ಇಡುತೀಯೆ...
ನೀ ಬಿಡಿಸಿ ತಂದ ಪಾರಿಜಾತವ ಉಸಿರ ಬೊಗಸೆಗೆ ಸುರುವಿಕೊಂಡೆ...
ಈಗ ಎದೆಯ ಚೊಬ್ಬೆಯ ತುಂಬಾ ನಿನ್ನದೇ ಕನಸ ಪರಿಮಳ...
ಜೀವದ ಜೀವವೇ -
ಚಂದಿರನೂರಲ್ಲಿ ಹುಣ್ಣಿಮೆ ಹಬ್ಬವಂತೆ...
ಪೆಂಡೆ ಪೆಂಡೆ ನೆನಪು, ಕನಸುಗಳೆಲ್ಲ ಬಾನ್ಬಯಲಿಗೆ ತೋಳ್ದೆರೆದು ದಿವಿನಾಗಿ ಬಿರಿಯುವ ಇಂಥ ಇಳಿ ಸಂಜೆಯ ಹೆಗಲನಾತು ನೀನಿದ್ದರೂ, ಇರದೇ ಹೋದರೂ ಇರುಳ ಜೀವ ವದ್ದೆ ವದ್ದೆ...
ಕೂಸೇ -
ಜೊಂಪೆ ಜೊಂಪೆ ಹೆರಳ ಮಾಲೆಯಲಿ ಎದೆಗೊಂಚಲ ಏರಿಗೆ ತೆರೆ ಕಟ್ಟಿ, ಕಣ್ಣ ಕುಮುದ ಶರದಲೇ ಎನ್ನೆದೆ ಸೀಮೆಯ ನಿರಾಯಾಸದಿ ಗೆದ್ದು ಬಿಂಕದಿ ಬೀಗುವ ನೀನೆಂಬ ನೀ ಚೂರುಪಾರು ಸಿಗುವ ಮುಸ್ಸಂಜೆಗಳ ಅಂಗಳದಲಿ ಗುಮಿಗೂಡೋ ನೆರೆಹೊರೆಯ ಸಂತೆಯನು ಮನಸಾರೆ ಹಳಿಯುತ್ತೇನೆ...
ಕಾರಣ,
ತುಟಿಗಳು ತುಟಿಗಳ ಸೇರಿ ಜೇನೂಡಲು ಹವಣಿಸೋ ಬಿಸಿಯೂಟದಂತ ಹರೆಯ ಹಸಿವಿನ ತೀರಾ ಸಾಮಾನ್ಯ ಮಧುರ ಪಾಪಕೂ ಒಂದು ಸಣ್ಣ ಕಿರುಗತ್ತಲ ಮೂಲೆಯ ಏಕಾಂತವೂ ದಕ್ಕಗೊಡದಂತೆ ಸುತ್ತ ಉರಿವ ಕವಳ ಕುತೂಹಲದ ನೂರು ಕಂಗಳು - ಪ್ರಣಯ ಫಲಿಸದ ಪ್ರೇಮದೆದೆಯಲಿ ಉರಿವ ವಿರಹದ ಹಿಡಿಶಾಪವಿದೆ ಜಂಗುಳಿಗೆ...
#ಅಂಗಳದ_ಹಾಡು_ಹಸೆ...
⇴↯⇎↯⇴
"ಎದೆ ಮಿದುವನಾಳಿ ಗಂಡಸಾಗಬಹುದು, ಗಂಡನೂ ಆಗಬಹುದು; ಹೇಳು, ಎದೆಯ ಭಾವಕೆ ಮಿಡಿಯದವನ ಗೆಳೆಯಾ ಅನ್ನಬಹುದು ಹೇಗೆ..."
ಅವಳಂತಾಳೆ: ಗೆಳೆಯನಾಗಲು ಸೋತ ಗಂಡನೂ ಬರೀ ಗಂಡಸೇ...
ಪಾತ್ರ ಬದಲಾದರೆ ಅವನೂ ಅದನ್ನೇ ಹೇಳ್ತಾನೆ...
ಶಿವ ಶಿವಾ - ಕೃಷ್ಣ ಕೃಷ್ಣಾ...
#ಅಂತಃಪುರದ_ನಿಟ್ಟುಸಿರು...
⇴↯⇎↯⇴
ನಾನು ಕಾಮದೇವನ ತುಂಡು - ನೀನು ಪ್ರೇಮದ ಪೂಜಾರಿ; ಸೇರಿಸಿ ನೊಗವ ಕಟ್ಟಿದ ನಶೆ ಯಾವುದು...? ಬದುಕ ಹೂಳಿದ ನೇಗಿಲ್ಯಾತರದ್ದು...??
#ಬಗೆಹರಿಯದ_ಭಾವಸಖ್ಯದ_ಗಣಿತ...
⇴↯⇎↯⇴
ಕೊಟ್ಟ ಕೊನೇಯ ಕಾಗೆಯೂ ಗೂಡು ಸೇರಿ ನಿರಭ್ರ ಸಂಜೆಯೊಂದು ಇರುಳಿಗೆ ದಾಟುವ ಆತ್ಯಂತಿಕ ಘಳಿಗೆಯಲ್ಲಿ ಸುರಿದು ಕೆಂಪಾದ ಕಣ್ಣನೊರೆಸಿಕೊಳ್ತಾ ನಾನೂ ಬರಿದಾಗಿ ಹಗುರಾದೆ ಅಂದುಕೊಳ್ತೇನೆ...
ಉಹೂಂ...
ಹಾಗಾಗುವುದೇ ಇಲ್ಲ...
ನಿಶಿದ್ಧ ಮೌನವೊಂದು ಹೂಂಗುಟ್ಟಂತೆ ಎದೆ ಪಕ್ಕೆಯ ಗಟ್ಟಿ ಚಿವುಟಿ ಅಲ್ಲಿ ನೀನಿರುವುದನು ತೋರಿಬಿಡುತ್ತದೆ...
ಮತ್ತೆ ಎಲ್ಲ ಎಂದಿನಂತೆ...
ಮನಸಿದು ಎನ್ನದು ಅದದೇ ಭಾರಗಳ ಒಪ್ಪ ಮಾಡಿ ಹೊಸ ಬೆಲೆಯಿಟ್ಟು ಮಾರುವ ಸಂತೆ...
ನೋಡು,
ಈ ಖಾಲಿಯೆಂಬ ಖಾಲಿಯಲ್ಲೂ ಖಾಲಿಯಾಗದ ಎಷ್ಟೆಲ್ಲಾ ಇದೆ...
#ಪಾರಿಜಾತ_ಅರಳೋ_ಹೊತ್ತಾಯ್ತು...
⇴↯⇎↯⇴
ಕೇರಿಯಾಚೆಯ ಪಾಳು ಮನೆಯಲಿ ದೇವರೂ ಇರಬಹುದು - ನಿನ್ನ ಗೆಜ್ಜೆ ಮಂತ್ರ, ಕೊರಳ ಶಂಖದ ಮಾಯೆ ಅಲ್ಲಿಯ ನೆಳಲ ಹಾಸಲಿ ಆಯಾಸ ನೀಗಿಕೊಂಬ ಬಡ ಗೋಪನ ಕಣ್ಣ ಕೊಳಲಲಿ ಕನಸ ರಾಗ ಬಿತ್ತಬಹುದು...
ಇಂಥವೇ -
ನನ್ನದೇ ಹಪ್ಪು ಹಳೇ ಅನಾಥ ಶಬ್ದಗಳ ಅರಿಕೆಗೆ ಹೊಸ ಹುಡುಗಿ ನಿನ್ನ ಕಣ್ಣು ಕಲಮಲಿಸಿದರೆ ಹೊಸದಾಗಿ ಬರೆಯಬಹುದು ಪ್ರಣಯ ಕವಿತೆಯ - ನಿನಗೆಂದೇ, ನಿನ್ನೊಳಿಳಿದು...
ವಸಂತ ನಗುವುದೆಂದರೆ ಹಳೆ ಬೇರು ಹೊಸ ಹೂವ ಹಡೆವುದೂ ಅಲ್ಲವಾ...
ಹೇಳು, ಎದೆಯ ಎಡೆಯಿಟ್ಟು ಮಂಡಿಯೂರಿ ಕೈ ಚಾಚಲಾ...
ಕಂಗಾಲು ಬೈರಾಗಿಯ ಖಾಲಿ ಬೊಗಸೆಯಲ್ಲಿ ಅನುರಾಗದ ಮಳೆಯಾದೇಯಾ...
#ಆಲಾಪ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment