Friday, July 27, 2012

ಗೊಂಚಲು - ಮೂವತ್ತಾರು.....

ಚಿತ್ರಗಳು ಮಾತಾಡುತ್ತವೆ.....

ಮಳೆಯಂತೆ ಇಬ್ಬನಿಯು ಇಳೆಯ ತಬ್ಬುವ ಸೊಬಗು...
ಹುಚ್ಚೆದ್ದು ಬೀಸುವ ತಂಗಾಳಿ...
ಕೈಯ ಎತ್ತಿದರೆ ಸಿಕ್ಕೇಬಿಟ್ಟೀತೆನಿಸುವ ಆಗಸ...
ಕಣ್ಣ ನಿಲುಕಿನವರೆಗೂ ಸುತ್ತೆಲ್ಲ ಪಸರಿಸಿದ ಹಸಿರ ಸಿರಿ...
ಸ್ವರ್ಗವನೇ ಸೂರೆಗೊಂಡಂತ ಭಾವಗಳ ಕೋಲಾಹಲ...
ಮನ ಯಾವುದೋ ಲೋಕದಲ್ಲಿ ವಿಹರಿಸುತಿತ್ತು...
ಬಾನೆತ್ತರ ಬೆಳೆದು ನಿಂತ ಗಿರಿಯ ಶಿಖರದ ಮೇಲೆ
ಭಾನುವಾರವೊಂದು ಮೆಲ್ಲಗೆ ಕಣ್ತೆರೆದಿತ್ತು...


:::


ಅದು ಮೈಸೂರಿನಿಂದ ಆಚೆ ಸುಮಾರು 90 ಕಿ.ಮೀ. ದೂರದಲ್ಲಿ ಮೈಚಾಚಿ ನಿಂತ ಬೆಟ್ಟ...
ಹೆಸರು 'ಹಿಮವದ್ ಗೋಪಾಲ ಸ್ವಾಮಿ' ಬೆಟ್ಟ...
ನಾನು ನನ್ನವರೊಂದಿಗೆ ಅಲ್ಲಿ ಕಳೆದು ಬಂದ ಕ್ಷಣಗಳ ಖುಷಿಯ ಇನ್ನೂ ಉಸಿರಾಡುತಿದ್ದೇನೆ...
ಹಸಿರ ಸೀರೆಯನುಟ್ಟು ಕಂಗೋಳಿಪ ಇಳೆಯ ಇಬ್ಬನಿಯು ತಬ್ಬಿ ಸೃಷ್ಟಿಸುವ ಪ್ರಕೃತಿ ವೈಭವ - ಅದು ಅಕ್ಷರಕ್ಕೆ ದಕ್ಕುತ್ತಿಲ್ಲ...


:::


ನನ್ನ ಕ್ಯಾಮರಾ ಕಣ್ಣಗೆ ಸಿಕ್ಕ ಒಂದಷ್ಟು ಪ್ರಕೃತಿ ಭಾವಗಳು...





2 comments:

  1. supper photos yaar......

    nann bittikki hoidi...... nenpirli....

    ReplyDelete
    Replies
    1. ಧನ್ಯ ದೊರೆ...
      ಬಿಟ್ಟಿಕ್ಕಿ ಹೋದ್ದಕ್ಕೆ ಮಾಫ್ ಕೀಜಿಯೇ ಸಾಬ್...
      ಇನ್ನೊಂದ್ಸಲಾ ನಿನ್ನೂ ತಕಂಡು ಹೊವ್ತೆ ಆತಾ...

      Delete