Thursday, August 16, 2012

ಗೊಂಚಲು - ಮೂವತ್ತ ಒಂಭತ್ತು.....

ಪ್ರೀತಿ ಮಳೆ -
ಮೈದುಂಬಿ ನಗುವ ಇಳೆ.....

ಅಲ್ಲಿ ನನ್ನೂರು -
ಆಕಾಶರಾಜನ ಪ್ರೇಮಧಾರೆಯಲಿ ಮಿಂದು -
ಹಸಿರು ಸೀರೆಯನುಟ್ಟು ಸರ್ವಾಲಂಕೃತ ಭೂಷಿತೆಯಾಗಿ ಕಂಗೊಳಿಸುತ್ತಿದೆ
ಸೀಮಂತದ ಸಂಭ್ರಮದಲ್ಲಿನ ತುಂಬು ಬಸುರಿಯಂತೆ...

ನಮ್ಮ ಮನೆಯ ಎಮ್ಮೆ ಚಂದ್ರಿಯೂ ಮತ್ತೊಮ್ಮೆ ಅಮ್ಮನಾಗುತ್ತಿದ್ದಾಳಂತೆ...

ದುಡಿವ ರೈತನ ಕಣ್ಣಲ್ಲಿ ಆನಂದ -
ಮೈಯ ಬೆವರಲ್ಲೂ ಮಣ್ಣ ಗಂಧ...

ಅಲ್ಲೀಗ
ಸಕಲ ಜೀವಗಳ ಸೃಷ್ಟಿ ವೈಭವ...
ನನ್ನಮ್ಮ ನಗುತಿದ್ದಾಳೆ...

:::

ಮಳೆ ಮತ್ತು ಪ್ರೀತಿ
ಚಿತ್ರಗಳಲ್ಲಿ...

ಸಂಕ...


ಹೆಜ್ಜೆ ಗುರುತು...


ಯಾರದೋ ಗೂಡು...


ಕಾಡಿನೆಡೆಗೆ ಪಯಣ...


ಮಳೆಯಲಿ ಮಿಂದ ಹಸಿರ ವೈಭವ...





ಅರಣ್ಯ ಇಲಾಖೆ ನಿರ್ಮಿಸಿದ ಕಾಡ ನಡುವಿನ ಸೂರು...

ಕಲ್ಲು ಬಾಳೆ...


ಎಲೆಗಳ ರಂಗೋಲಿ...


ಮಳೆಯು ತಬ್ಬಿದ ಇಳೆ...
ಕಂಚಿಕಲ್ಲು ಗುಡ್ಡದಿಂದ ಕಾಣುವ ಕಾಳಿ ನದಿ ಪಾತ್ರ...




ಕಾಡು ಮರಕೂ ಕಟ್ಟೆ...


ಕಾಡು ದಾರಿ...


ವಚನ ವನ...(ಉಳವಿ)


ಗದ್ದೆ ನೆಟ್ಟಿ...


ದೂರದ ಬೆಟ್ಟ...


ಯಾವುದೋ ತೊರೆ...


ಜೀವ ಧಾತೆ -ಕಾಳಿ ಮಾತೆ...(ಕಾಳಿ ಹಿನ್ನೀರು)


ತೆಪ್ಪ ತೇಲುತಿದೆ ಬಂಧ ಬೆಸೆಯಲು...(ಶಿವಪುರ - ಕುಂಬ್ರಾಳ)

ದೋಸೆಗೆ ಹಿಟ್ಟು ರೆಡಿ...

ಕರೆಂಟಿಲ್ಲೆ ಗ್ಯಾಸ್ ಹಚ್ತೆ ತಡೀರಿ...


ಮೀನುಗಾರನೊಬ್ಬನ ಗಾಡಿ ಶೆಡ್...

ಕಾಡ ಕುಸುಮ...

ದಾಸವಾಳದ ಅಂದ...

ಚಂದ್ರಿ...


ದಟ್ಟ ಕಾನನ, ಮುಗಿಲ ಚುಂಬಿಸೋ ಮರಗಳು, ಜಿಟಿ ಜಿಟಿ ಹನಿವ ಮಳೆ, ಜೀವ ಪಡೆದ ಝರಿ - ತೊರೆಗಳು, ಪಿಚಿ ಪಿಚಿ ರಾಡಿಯ ರಸ್ತೆಗಳು, ಹೆಜ್ಜೆ ಇಟ್ಟಲ್ಲೆಲ್ಲ ರಕ್ತ ಹೀರಲು ಸದಾ ಸನ್ನದ್ಧ ಉಂಬಳಗಳು, ಅಲ್ಲೆಲ್ಲೋ ಕಾಡ ನಡುವೆ ಅರಣ್ಯ ಇಲಾಖೆಯ ಸೂರು, ತುಂಬಿ ನಿಂತ ಕಾಳಿನದಿಯ ಹಿನ್ನೀರು, ನದಿಯಾಚೆಯ ಊರುಗಳ ಬೆಸೆಯಲು ತೇಲುವ ತೆಪ್ಪ, ದಾರಿಹೋಕರನೂ ಕರೆದು ಅನ್ನವಿಕ್ಕುವ ಆ ಜನರ ಪ್ರೀತಿ...

ಓಹ್....
ನಾಕು ದಿನ ದಾಂಡೇಲಿಯ ಗುಂದಾ ಎಂಬ ಊರಿನ ಕಾಡುಗಳಲ್ಲಿ ಅಲೆದಾಡಿ (ಸುಮಾರು 25 ಮೈಲುಗಳಿಗೂ ಹೆಚ್ಚು) ಪ್ರಕೃತಿಯ ಮತ್ತು ನನ್ನ ಬಂಧುಗಳ ಪ್ರೀತಿಯ ಮಳೆಯಲ್ಲಿ ಮಿಂದೆದ್ದ ಆ ಅನುಭವ ನೆನಪಾಗಿ ಕಾಡೀತು ಕೊನೆತನಕ...

2 comments:

  1. ದಾಂಡೆಲಿಯ ಚಿತ್ರಗಳು ಮತ್ತು ಮಳೆಯ ಕಥನ ಓದಿ ಖುಷಿಯಾಯಿತು. ಬರದ ತಾಲ್ಲೂಕಿನವನಾದ ನಮಗೆ ಮಳೆ ಎಂದರೆ ದೇವಏ ಸರ್.

    ReplyDelete
  2. ಮಳೆ ನಾಡಲ್ಲಿ ಸುರಿದ ಮಳೆಯ ಚಿತ್ರಗಳ ತಂಪು...

    ತೊಟ್ಟಿಕ್ಕುತ್ತಿದೆ ನೆನಪುಗಳ ರೂಪ ತಾಳಿ...

    ReplyDelete