Tuesday, March 18, 2014

ಗೊಂಚಲು - ನೂರರ ಮೇಲೆ ಹನ್ನೆರಡು.....

ಕಲ್ಲು ಕಲ್ಲಿನಲು ಇತಿಹಾಸದ ಘಮಲು.....

ಅಂಥ ಪರಿ ಇತಿಹಾಸದ ಹುಚ್ಚೇನಿಲ್ಲ ನನ್ನಲ್ಲಿ. ಶಾಲೆಯ ಓದಿನಿಂದಾಚೆ ಇತಿಹಾಸ ಓದಿಕೊಂಡವನೂ ಅಲ್ಲ. ಆದರೆ ತ.ರಾ.ಸು. ಅವರ “ದುರ್ಗಾಸ್ತಮಾನ” ಕಾದಂಬರಿ ಓದಿದಾಗಿನಿಂದ ಚಿತ್ರದುರ್ಗದ ಕೋಟೆಯನೊಮ್ಮೆ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಮನದುಂಬಿತ್ತು. ಬಹುಕಾಲದ ಆ ಕನಸಿಗೆ ರೆಕ್ಕೆ ಬಂದಿದ್ದು ಮೊನ್ನೆ ಭಾನುವಾರ (೧೬-೦೩-೨೦೧೪). ನನ್ನ ಎಂದಿನ ಬಳಗದೊಂದಿಗೆ ಕೋಟೆಯನೊಮ್ಮೆ ಸುತ್ತಾಡಿ ಬಂದೆ. ಕೋಟೆಯ ಒಂದೊಂದು ತಿರುವೂ, ಒಂದೊಂದು ಕಲ್ಲೂ ಮದಕರಿ ನಾಯಕನ ಶೌರ್ಯ, ಓಬವ್ವಳ ರಾಷ್ಟ್ರಭಕ್ತಿ, ಶಾಂತಲಾಳ ಪ್ರೇಮ, ಆ ಕಾಲದ ಜನಜೀವನ, ರಕ್ತ ಚರಿತೆಯನೆಲ್ಲ ಕಣ್ಣ ಮುಂದೆ ತಂದು ಕತೆ ಹೇಳುತಿತ್ತು. ಆ ಕಾಲವ ಕಲ್ಪಿಸಿಕೊಳ್ಳುತ್ತಾ, ದುರ್ಗದ ಬಿಸಿಲ ಮಳೆಯಲ್ಲಿ ಬೇಯುತ್ತಾ, ಬೀಸುಗಾಳಿಗೆ ಮೈಯೊಡ್ಡಿ ಒಂದಿಡೀ ದಿನ ಸಂತೃಪ್ತವಾಗಿ ಕಳೆದು ಹೋಯ್ತು. ಅಲ್ಲಿಯ ನೆನಪಾಗಿ ನನ್ನ ಮನದ ಜತೆ ಜತೆಗೆ ನನ್ನ ಕ್ಯಾಮರಾದಲ್ಲಿ ಬಂಧಿಸಿ ತಂದ ಒಂದಷ್ಟು ಛಾಯಾಚಿತ್ರಗಳು ಇಲ್ಲಿವೆ. ಉಳಿದಂತೆ ನಾನೇನೂ ಹೇಳಲ್ಲ. ನೀವೇ ಸುಮ್ಮನೆ ಕಣ್ಣಾಡಿಸಿ. ಚಿತ್ರಗಳಾಡುವ ಮಾತು ಕೇಳಿ. ನಿಮಗೂ ನೆನಪಾದೀತು ಆ ಕಾಲ...















ಓಕುಳಿ ಹೊಂಡವಂತೆ...

ಹೀಗೊಂದು ಸಹ ಭೋಜನ...











ಓಬವ್ವನ ಕಿಂಡಿಯಲ್ಲಿ ನುಸುಳುವಾಗ...




















ಹಾಗೇ ಸುಮ್ಮನೆ...




7 comments:

  1. ಚಂದದ ಭಾವ,,ಚಂದದ ಬರಹ..
    ನಮ್ಗೂ ಚಿತ್ರದುರ್ಗದ ಕೋಟೆಯ ತೋರಿಸಿದ್ದಕ್ಕೊಂದು ಧನ್ಯವಾದ

    ReplyDelete
  2. ಶ್ರೀವತ್ಸ ಈ ಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಚಿತ್ರಗಳನ್ನು ನೋಡುವಾಗ "ಕನ್ನಡ ನಾಡಿನ ವೀರರಮಣಿಯ" ಹಾಡು ಕೂಡ ನೆನಪಾಯಿತು.

    ReplyDelete
  3. ಗೊಂಚಲು ೧೧೨ ಇಷ್ಟವಾಯಿತು ಗೆಳೆಯ.

    ReplyDelete