ಏನೋ ಒಂದಿಷ್ಟು.....
ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...❤
ಮನೆಯಂಗಳದಿ ಕನಸ ಕಂದ 'ಪ್ರತೀಕ್ಷಾ' ಆಡುತಿರುವ ಭಾವದಲ್ಲಿ ಮೆದುವಾಗುತ್ತಾ - ಶುಭಾಶಯಗಳು...❤ ❤
***
ಪ್ರಜ್ಞೆಯ ಎತ್ತರ, ಭಾವದ ಆಳ ಎರಡೂ ಒಟ್ಟಾಗಿ ನಗುವುದು ತೀರಾ ತೀರಾ ವಿರಳ...
ಆತ್ಮದಲ್ಲಿ ಅಖಂಡ ಪ್ರೇಮವಿಲ್ಲದೇ ಕಣ್ಣಲ್ಲಿ ಹನಿ ಹುಟ್ಟಲಾರದೇನೋ - ಹುಟ್ಟಿದಲ್ಲಿ ಅದು ಹೆಣದ ವಾಸನೆಯಂತೆ ಅಸಹನೀಯ...
ಅಲ್ಲಲ್ಲಿ ಕೈಕುಲುಕೋ ಅಪವಾದಗಳಂಥ ಪ್ರಜ್ಞೆಯ ಎತ್ತರವ ನಗುವಲ್ಲೂ, ಭಾವದಾಳವ ಮೌನದಿಂದಲೂ ಮುಚ್ಚಿಡುವ, ಎದೆಯ ಹನಿಗಳನು ಪಾಲ್ತು ಫಾಲ್ತು ಮಾತುಗಳಿಂದ ಒಳಗೇ ಇಂಗಿಸಿಕೊಳ್ಳುವ ಶ್ರೀಮಂತ ಹೃದಯಗಳ ಸ್ನೇಹ ಸನ್ನಿಧಿ ಇನ್ನಷ್ಟು ಮತ್ತಷ್ಟು ದಕ್ಕಲಿ ಎನಗೆ...
***
ಮೊದಲ ಹೆಜ್ಜೆಗೆ ಪ್ರೀತಿ ಶಕ್ತಿಯಾಗಿ ನಡಿಗೆ ಕಲಿಸಿದವಳ ಹೆಜ್ಜೆ ನಡುಗುವ ಹೊತ್ತಲ್ಲಿ ತುಸು ಕೈ ನೀಡಬಲ್ಲೆನಾದರೆ ಬದುಕ ಋಣ ಅಷ್ಟಾದರೂ ಸಂದಂತೆ ಲೆಕ್ಕ...
***
ನೋವು, ನಗುವು - ಒಂದರ ನೆರಳು ಇನ್ನೊಂದು...
ಪರಿಸ್ಥಿತಿಯ ಮೇಲಾಟದಲ್ಲಿ ಈ ಕ್ಷಣ ಮತ್ತು ಈ ಕ್ಷಣದ ಗೆಲುವು ಮಾತ್ರ ನಿರ್ಣಾಯಕ ಎದೆಯ ಹಾಡಿನ ಯಾವ ಭಾವದ ನೆರಳು ಯಾವುದೆಂಬುದಕೆ...
ಸದಾ ಕೂಸುಮರಿಯಾಟ ಬೆನ್ನು ತಬ್ಬಿಯೇ ಹುಟ್ಟಿದ ಭಾವಗಳದ್ದು...
ನೋವು ನಗುವಿನ ಬೆನ್ನಿಗಂಟಿದ ಶಾಪ - ನಗುವು ನೋವಿನ ಮಡಿಲ ಶ್ರೀಮಂತ ಕೂಸು...
***
ಪ್ರಶ್ನೆ:
ಆ ಬಂಧ ನಿಂಗೇನು...?
ತಡಕಾಟವಿಲ್ಲದ ನೇರ ಉತ್ತರ:
ಏನೂ ಅಲ್ಲ ಮತ್ತು ಎಲ್ಲವೂ ಹೌದು...
ಅದು ಬದುಕು ಮತ್ತಾಸಾವಿನ ನಡುವೆಯ ಸಾಮರಸ್ಯದಂಥಾ ಭಾವ ಬಾಂಧವ್ಯ...
ಬದುಕ ವಿಜ್ರಂಭಣೆಯಲ್ಲಿ ಸಾವಿನ ಶ್ರೀಮಂತಿಕೆ - ಸಾವಿನ ಅಸ್ತಿತ್ವದಲ್ಲಿ ಬದುಕಿಗೆ ಫಲವಂತಿಕೆ ಇದ್ದಂತೆ...
ನಿರ್ಬಂಧಗಳ ಮೀರಿದ ನೀರ ಹರಿವಿನಂತೆ ಈ ಮನ ಮನಗಳ ನಡುವೆಯ ಪ್ರೀತಿ...
***
ಅವಳಂತಾಳೆ : ತೀವ್ರ ಆತ್ಮೀಕತೆ ಭಯ ಮೂಡಿಸುತ್ತೆ ಕಣೋ ಈಗೀಗ - ಆದ್ರೂ ಪ್ರತಿ ಜಗಳದ ನಂತ್ರಾನೂ ಪ್ರೀತಿ ತುಸು ಹೆಚ್ಚೇ ಆಗುತ್ತೆ - ಈ ಹೃದಯದ ಜಾದೂ ಅರ್ಥವೇ ಆಗಲ್ಲ...!!!
ನಿಜದ ಆತ್ಮೀಯತೆ ಮನಕೆ ಗೆಲುವ ತುಂಬುತ್ತೆ - ಭಯವೂ ಗೆಲುವಿನ ಆಕರವೇ ಅಲ್ಲವಾ - ಜಗಳವೂ ಆತ್ಮದ ಒಲವಿನ ಮೂಲವೇ ಆದೀತು ಆತ್ಮೀಯತೆ ಮನದ ಪ್ರಾಮಾಣಿಕ ಅಭಿಲಾಷೆಯಾಗಿದ್ದಾಗ - ಮೋಡ ಸೂರ್ಯನನ್ನಲ್ಲ ಚಂದಿರನನ್ನೂ ಮುಚ್ಚಿಡಲಾರದಲ್ಲವಾ ಬಹುಕಾಲ - ಹೃದಯದ ಜಾದುವಿನ ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪ್ರೀತಿಯೇ ಮತ್ತು ಪ್ರೀತಿಯೊಂದೇ; ಇದು ಎನ್ನೆದೆಯ ಪಿಸುಮಾತು...
ಪ್ರೀತಿಯ ನಮನಗಳು ಹೃದಯವಂತ ಸ್ನೇಹಿಗಳಿಗೆಲ್ಲ...❤ ❤ ❤
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:
Post a Comment