ಹೀಗೆಲ್ಲ ಅನ್ನಿಸಿ.....
ಕಾಮಕ್ಕೆ ಅಪವಿತ್ರತೆಯನ್ನು ಆರೋಪಿಸುವ ಪ್ರೇಮಕ್ಕೆಂದಿಗೂ ರಾಧೆಯ ಎದೆ ಮಾಳದ ಉನ್ಮುಕ್ತ ಭಾವೋತ್ಕರ್ಷದ ಅಸೀಮ ತನ್ಮಯತೆ ಸಿದ್ಧಿಸಲು ಸಾಧ್ಯವೇ ಇಲ್ಲ...
ತಾನೇ ಹಾಕಿಕೊಂಡ ಸರಗೋಲನು ಸರಿಸಿ ಆಚೆ ಬರಲಾರದೇ, ಅವನ ತೆಕ್ಕೆಯಲಿ ತಲೆಯಿಟ್ಟು ಭಯವ ಮೀರಿದ ಹೆಣ್ಣುಗಳ ಸಂಖ್ಯೆಗಳಲಿ ಎಣಿಸುತ್ತ ಕೂತ ಮನಸುಗಳಿಗೆಂದಿಗೂ ರಾಧೆಯ ಪ್ರೇಮಕ್ಕೆ ಕೊಳಲ ಗಾನವನೊತ್ತೆಯಿಟ್ಟ, ದ್ರೌಪದಿಯ ಸ್ನೇಹಕ್ಕೆ ಆತ್ಮ ಸಾಂಗತ್ಯದ ಎತ್ತರವನಿತ್ತ, ಗೋಪಿಯರ ಅಕ್ಕರೆಗೆ ನಗೆಯ ಕನಸುಗಳನಿತ್ತ ಕೃಷ್ಣ ದಕ್ಕುವುದೇ ಇಲ್ಲ...
ನನಗಾದರೋ ರಾಮ ಅಲ್ಲೆಲ್ಲೋ ಕೂತು ರಾಜ್ಯವಾಳುವ ಆದರ್ಶ ಪುರುಷ - ಕೃಷ್ಣನೋ ಬದುಕಿನ ಸಹಜ ಸೌಂದರ್ಯ, ರೌದ್ರ ರಮಣೀಯತೆಗಳನೆಲ್ಲ ಆಡಾಡುತ್ತಲೇ ತೋರುವ ನನ್ನದೇ ಬೀದಿಯ ಗೆಳೆಯ...
------
ಮರೆಯಲಾರದ ನೋವುಗಳಿಗಾಗಿ ಇರುಳ ತುಂಬಾ ಬಿಕ್ಕಳಿಸಿದ್ದಿದ್ದೀತು - ಅನುಮಾನ, ಅವಮಾನ, ಅಸಹಾಯಕತೆಗಳಲಿ ಕಚ್ಚಿದ ತುಟಿಗಳಲಿ ರಕ್ತ ಜಿನುಗಿದ್ದಿದ್ದೀತು...
ಹಾಗಂತ ತಕರಾರುಗಳೇನಿಲ್ಲ ಈ ಬದುಕಿನೆಡೆಗೆ...
ಮಗು ಒದ್ದದ್ದು ನೋವೇ, ಆದರದು ಮಗು ಬೆಳೆಯುತಿರೋ ಖುಷಿ ಕೂಡಾ ಅಂತಾಳೆ ಆಯಿ...
ಅಳಿಸುತ್ತಳಿಸುತ್ತಲೇ ಬಂಡೆಯಂತೆ ಬೆಳೆಸಿದ ಬದುಕಿನ ಋಣ ದೊಡ್ಡದು...
ಕಡ ತಂದ ಬೆಳಕಲ್ಲಿ ತಂಪನೀವ ಚಂದಿರ ನಿದ್ದೆಗೆ ಜೋಗುಳವಾದಾನು; ಆದರೆ ಹಸಿರಿಗುಸಿರು ದಕ್ಕುವುದು ಸ್ವಯಂ ಪ್ರಕಾಶದ ಉರಿ ಬಿಸಿಲಲ್ಲೇ ಎಂಬ ಅರಿವಿಗೆ ಎದೆ ತೆರೆದು ನಿಲ್ಲುವ ದೃಢತೆ ತುಂಬಿದ್ದು ಸಾವಿನ ನಿಷ್ಠಾವಂತ ರಖಾವಿನಂತಾಡುವ ಈ ಬದುಕೇ ಅಲ್ಲವಾ...
ತನ್ನನ್ನು ತಾನು ಹಾಗೂ ತನ್ನೀ ಬದುಕನ್ನು ತಾನು ವಿನಾಕಾರಣ ಅಪರಿಮಿತವಾಗಿ ಪ್ರೀತಿಸಿಕೊಳ್ಳುವ ತೀವ್ರ ಒಳತುಡಿತ ಇಲ್ಲದವ ಮತ್ತು ಬದುಕು ಆ ಹಾದಿ ಬದಿಯಲ್ಲಿ ಅಲ್ಲಲ್ಲಿ ಎಸೆದಿಟ್ಟ ಚಿಕ್ಕ ಚಿಕ್ಕ ಬಿಡಿ ಬಿಡಿ ಖುಷಿಗಳನು ಆಸ್ಥೆಯಿಂದ ಹುಡುಕಿ ಜೋಳಿಗೆ ತುಂಬಿಕೊಂಡು ನಗೆಯ ಸಾಕಿಕೊಳ್ಳುವ ವ್ಯವಧಾನವಿಲ್ಲದವನಲ್ಲಿ ಮಾತ್ರ 'ನಂಗೆ ಒಂದಿನಿತಾದರೂ ಪ್ರೀತಿಯೇ ಸಿಕ್ಕಿಲ್ಲ ಈ ಬದುಕಲ್ಲಿ' ಎಂಬ ತೀರದ ಹಳಹಳಿಕೆಯಿರಲು ಸಾಧ್ಯ ಸದಾ...
ಮೃಷ್ಟಾನ್ನದ ಕನಸಲ್ಲಿ ಸಿಕ್ಕ ಗಂಜಿಯ ದೂರ ತಳ್ಳಿ ಹಸಿವಿಂದ ನರಳುವ ಇಲ್ಲವೇ ಮನದ ಮನೆಯ ಬಾಗಿಲಿಗೆ ಚಿಲಕವಿಕ್ಕಿ ಕೂತು ನಗುವಿಲ್ಲವೆಂದಳುವ ಚೆಂದಕೇನೆನ್ನುವುದು...
ಅರ್ಥವಾಗಬೇಕಾದದ್ದಿಷ್ಟೇ, ಪ್ರೀತಿ ಸಂತೆಯಲ್ಲಿ ಸಿಗುವ ಸರಕಲ್ಲ - ಆನೇ ಎನ್ನೀ ಬದುಕಿನೊಡನೆ ನಿರಂತರ ಸುರತಕ್ಕೆ ಬಿದ್ದು, ಬಸಿರ ತಲ್ಲಣಗಳು, ಪ್ರಸವ ವೇದನೆಗಳಲಿ ಮಿಂದೆದ್ದು ಹಡೆದು ಸಲಹಿಕೊಳ್ಳಬೇಕಾದ ಎನ್ನದೇ ಎದೆಮಡಿಲ ಭಾವಕೋಶದ ಕೂಸು...
ಎನ್ನ ತರಹೇವಾರಿ ಹಸಿವುಗಳಿಗಾಗಿ ಎನ್ನನೇ ಕಳೆದುಕೊಳ್ಳುವ ಮಳ್ಳಾಟ ಈ ಬದುಕು - ಪ್ರೀತಿ ಕೂಡಾ ಒಂದು ಹಸಿವು ಅಷ್ಟೇ...
------
ಆನೂ ಎನೇನೋ ಅಪ್ಲಾಯ್ತ್ತು; "ಆದ್ರೆ .........." ಎಂಬಲ್ಲಿ,
ಆದರೆ ಎಂಬ ಆ ನಿತ್ರಾಣ ರಾಗದಲ್ಲೇ ನಾ ಸಾಗದೇ ಉಳಿದ ಸಾವಿರ ಹಾದಿಗಳಿಗೆ ಸಬೂಬು ಮತ್ತು ಕನಸ ತೊಟ್ಟು ಕಳಚಿದ ಎನ್ನೆದೆಯ ನಿಟ್ಟುಸಿರು ಎರಡೂ ಅಡಗಿದೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:
Post a Comment