ಮುರಿದ ಫಲಕಗಳು.....
ನಂಗೆ ನಾನು ಇಷ್ಟು ಚಂದ ಸಿಗುವಾಗ ಪ್ರೀತಿಸೋಕೆ ಇನ್ಯಾವುದೋ ಅಪರಿಚಿತತೆಯನ್ನ ಯಾಕೆ ಹುಡುಕ್ಬೇಕು...?
ಯಾಕೇಂತ ಅಷ್ಟು ಹಪಹಪಿಸಿ ಹುಡುಕ್ತೀನಿ...??
ಅಶ್ರುತವಾದಲ್ಲಿ ಆನೆಂಬ ಗುರುತುಳಿಸುವ ಹುಂಬ ಹಂಬಲವೇ ಪ್ರೀತಿಯ ಮೂಲವಾ...???
ಬಯಲ ಬೆಳಕಿಗೆ ಬೇಲಿ ಝಡಿಯುವ ಪರಮ ಬೋಳೆತನಕೆ ಪ್ರೀತಿ ಪಟ್ಟ ಕಟ್ಟಿ ಮೆರೆವ ಭಂಡತನವ್ಯಾತಕೋ...????
#ಅರ್ಥಾರ್ಥವರಿಯದ_ಮರುಳ_ನಾನು...
↺⇄⇆↻
ಉದ್ದುದ್ದ ಬಿದ್ದ ಬೆಳಕಿನ ಕೋಲು - ಮುರಿದ ಕತ್ತಲ ಚೂರು - ಅರ್ಥವಾಗದ ಮರಣರಿಂಗಣ ಹಾಡು...
ಹನಿದು ಹರಿವ ಮೋಡ - ಹರಿಗೋಲು ಮುಗುಳು - ಬೆಂಕಿಯನುಂಡು ತೇಗಬೇಕು ಉಸಿರ ದೀಪದ ಗೂಡು...
ಬದುಕೇ ಬೇಲಿ - ಬದುಕೇ ಬಯಲು - ಬದುಕೋ ಬಯಕೆಯೇ ಬದುಕಿನ ಜಾಡು...
#ನಾನೆಂದರಿಲ್ಲಿ_ಕಾಲ_ಕಡಿದ_ಮೂರ್ತ...
↺⇄⇆↻
ಹತ್ತಿರ ಸೆಳೆದು ಕೂರಿಸಿದ ಆಪ್ತತೆ ಹಾಗೂ ಸಲಿಗೆಯಂತೆಯೇ ದೂರ ತಳ್ಳಿ ನಿಲ್ಲಿಸಿದ ನಿರ್ಲಕ್ಷ್ಯ ಮತ್ತು ಉಡಾಫೆಯೂ ದಿನಕಳೆದಂತೆ ಅಭ್ಯಾಸವಾಗುತ್ತೆ...
ಸಾವೂ ನೆನಪಿನ ಪೆಟ್ಟಿಗೆ ಮೂಲೆಯ ಸವೆದ ನಾಣ್ಯದಂತಾಗುತ್ತೆ...
ರುದಯ ರಾಗವ ಕೊರಳಿಗಂಟಿಸಿಕೊಂಡು ಏಳು ಸಾಗರದಾಚೆಗೆ ಪಾರಿವಾಳ ಹಾರುತಿದ್ದ ಕಾಲವೊಂದಿತ್ತಂತೆ 'ತನ್ನವರ ಕೂಡಲು' - ಏಳು ಸೆಕೆಂಡುಗಳ ದೂರಕೊಂದು ಮುಗುಳ್ನಗೆಯ ದಾಟಿಸಲೂ ಪುರುಸೊತ್ತಿಲ್ಲದ ಜಾಲ ಈಗ 'ನಮ್ಮವರೇ ಎಲ್ಲರೂ...'
ನಾನು - ನೀನು - ಅಳಿದೇ ಹೋದ ನಾವು...
ಇನ್ನು ನಿಜ ಪ್ರೀತಿಗೆಲ್ಲಿಯ ತಾವು...
#ಹೊಕ್ಕುಬಳಕೆ...
↺⇄⇆↻
ಜಗದ ಸಂತೆಯಲಿ ಏನೆಲ್ಲ ಆಗಿಯೂ ನನ್ನಲ್ಲಿ ನೀ ನೀನಾಗಿಯೇ ಉಳಿದೆ...
ಕನಸ ಚಿತ್ರಗಳಿಗೆಲ್ಲ ಮೊಳೆ ಜಡಿದು ಹಾರವಿಟ್ಟ ಮೇಲೂ ಉಸಿರಲ್ಲಿ ನಿನ್ನದೇ ಗಂಧವಿದೆ...
ಮಧುಪಾತ್ರೆಯಲೂ ಕಣ್ಣ ಹನಿಯನೇ ತುಂಬಿ ತುಂಬಿ ಗುಟುಕರಿಸುತ್ತೇನೆ - ನೀ ಖಾಲಿಯಾಗಬಾರದು...
ಕಾಡುಮಲ್ಲಿಗೆಯ ಘಮಕೆ ಸೋತು ಕಾಡು ಪಾಲಾದ ಹುಡುಗನ ಕಥೆಗೆ ನನ್ನದೇ ಹೆಸರಿಟ್ಟುಕೊಂಡೆ - ಮತ್ತೆ ನೀ ಮರೆತು ಹೋಗಬಾರದಲ್ಲ...
ನಾಳೆ (?) ಸಮಾಧಿಯ ಮೇಲೂ ನಿನ್ನ ಹೆಸರೇ ಬಿದ್ದೀತು - ನಂಗೊಂದು ಹೆಸರೇ ಇಲ್ಲವಲ್ಲ...
ಈ ನಿರ್ವಾತ, ಆ ನಿರ್ವಾಣ - ಭಾರಾಭಾರ ನಗು...
#ಬದುಕೇ...
↺⇄⇆↻
ರಣ ಕಾಡಿನ ನಟ್ಟಿರುಳಲಿ ಹೆಣ ಕಾಯುವಾಗಲೂ ಹುಟ್ಟಿರದ ನಿತ್ರಾಣವೊಂದು ಕಳೇಬರವ ಕಾಯ್ದಿಟ್ಟುಕೊಂಡಂತ ಮೃತ ಶೀತಲ ಬದುಕಿನ ಪ್ರತಿ ಹೆಜ್ಜೆಯನೂ ಕಾಡುತ್ತದೆ...
ಖಾಲಿ ಖಾಲಿ ಮುಂಜಾನೆ - ಹಾಳುಸುರಿವ ಮುಸ್ಸಂಜೆ - ಉಸಿರಾಟವೂ ಏಕತಾನ ಆಗೀಗ...
ಒಳಗೇ ಕುದಿವ ಸುಳ್ಳು ಮತ್ತು ಸತ್ಯದ ನಡು ಮಧ್ಯೆ ತಡಬಡಿಸುತ್ತಾ ಕೂತ ಸುಕ್ಕುಗಟ್ಟಿದ ಸುಡುಗಾಡು ಮೌನ...
ಯಮ ಕಿಂಕರರು ತುಳಿದ ಹಾದಿಯಲ್ಲೂ ಹೊಸ ಗರಿಕೆ ಚಿಗುರುತ್ತೆ ಅಂತ ಸಾಂತ್ವನಿಸೋ ನನ್ನದೇ ಪ್ರಜ್ಞೆಯ ಮಾತನೂ ಎಡಗಾಲಲ್ಲೊದ್ದು, ತನ್ನ ತಾ ಸಂಭಾಳಿಸಿಕೊಳ್ಳಲೂ ಅರಿಯದೇ ಸುಖಾಸುಮ್ಮನೆ ಮಗುಚಿ ಬೀಳೋ ನನ್ನದೀ ಅಡಸಂಬಡಸಾ ಮನಸು...
........ಕಾಯುವುದು.... ಕಾಯುವುದು...... ಮತ್ತು ಕಾಯುವುದಷ್ಟೇ..... ನಿಂತಲ್ಲೇ ನಿಂತು.... ಯಾವುದಕ್ಕೋ, ಎಷ್ಟು ಕಾಲವೋ..... ನಿರಂತರ ನಿಷ್ಫಲ ನಿರೀಕ್ಷೆ..........
.......ದೂರ ........ದೂರ .........ಬಹುದೂರ ಹೋಗಬೇಕು...... ಏನಕ್ಕೂ, ಯಾರಿಗೂ ಕಾಯುವ ಬೇಯುವ ಗೋಜಿಲ್ಲದ, ಎಲ್ಲ ಮರೆಯುವ, ಇಲ್ಲಿನೆಲ್ಲವ ತೊರೆಯುವ ಆ ನಿಶ್ಚಲ ತೀರವ ಸೇರಬೇಕು......
ಸುಳ್ಳು ನಗೆಯ ಬದುಕಿ ಸುಸ್ತಾದ ಕಾಲಕ್ಕೆ ಮಹಾಮೌನ ತಾ ಕರುಣೆದೋರಿ ಉಸಿರ ತಬ್ಬಿ ನಿಸೂರಾಗಿಸಬೇಕು...
#ನಿರ್ವಾಣ...
↺⇄⇆↻
ಅಕರಾಳ ವಿಕರಾಳವಾಗಿ ಹರಡಿಕೊಂಡ ಈ ಬದುಕಿನ ವಿಚಿತ್ರ ಕತ್ತಲು ನೀನು - ಉಂಡಷ್ಟೂ ಉಳಿಯುವ ರಣ ಹಸಿವು...
ಸ್ವರ್ಗ ಸೀಮೆಯಲಿ ಓಲಾಡಿದ ಹೆಜ್ಜೆ ಗುರುತುಗಳು ಮೈಯ್ಯ ತಿರುವುಗಳಲೆಲ್ಲ - ನೀ ಬಂದು ಹೋದ ಮೇಲೆ...
ತುಟಿಗೆ ತುಟಿ ಸೋಕಿಸಿ ಆತ್ಮಕ್ಕೆ ಮುತ್ತಿಟ್ಟು ಕಾರಿರುಳಲ್ಲೂ ನಂಗೆ ನನ್ನ ಬಿಚ್ಚಿ ತೋರುವ ಸಾಕ್ಷೀಪ್ರಜ್ಞೆ ನೀನು - ತುಂಬಿ ಮೇಳನ ಸಾವಿಗೂ ಬದುಕಿನದೇ ಹೆಸರು...
ನನ್ನ ನಾ ಹುಡುಕುವಾಗ ಸಿಕ್ಕಿದ್ದು ನೀನು... ಅದಕೇ ನೀನು ಅರ್ಥವೇ ಆಗುವುದಿಲ್ಲ ಮತ್ತು ಅರ್ಥವಾಗಲೇ ಬೇಕಿಲ್ಲ ಕೂಡ - ಈ ಅನರ್ಥದೊಳಗೂ ಒಂದು ರುಚಿ ರುಚಿ ಪದಾರ್ಥವಿದ್ದಂತಿದೆ...
ಜೀವ ಹಿಂಡುವಾ ಈ ಛಳಿಯೇ ಜೀವವ ಒಯ್ಯಬಾರದೇ ನೀನಿರುವಲ್ಲಿಗೆ - ನಾನೂ ನಕ್ಷತ್ರವಾಗಬೇಕು - 'ಸ್ವರ್ಗ' ಸೀಮೆ...

***ನಿಬಂಧನೆಗಳಿಗೊಳಪಟ್ಟಿದೆ...
***ಅತಿಕ್ರಮ ಪ್ರವೇಶ ನಿಶೇಧಿಸಲಾಗಿದೆ...
***ಷರತ್ತುಗಳು ಅನ್ವಯಿಸುತ್ತವೆ...
***ಕನಸುಗಳು ಮಾರಾಟಕ್ಕಿಲ್ಲ...
***ಹಕ್ಕುಗಳನ್ನು ಕಾಯ್ದಿರಿಸಲಾಗಿದೆ...
***ಕಣ್ಣೀರು ಬತ್ತಿದೆ ಎಚ್ಚರಿಕೆ...
#ಪ್ರೀತಿ_ತುಳಿದು_ಒಡೆದ_ಎದೆ_ಗೋಡೆಗೆ _ಅಂಟಿಸಿದ_ಮುರಿದ_ಫಲಕಗಳು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
ಅಯ್ಯೋ ಅಷ್ಟು ಚಂದವಿದೆ - "ನಂಗೆ ನಾನು ಇಷ್ಟು ಚಂದ ಸಿಗುವಾಗ ಪ್ರೀತಿಸೋಕೆ ಇನ್ಯಾವುದೋ ಅಪರಿಚಿತತೆಯನ್ನ ಯಾಕೆ ಹುಡುಕ್ಬೇಕು...?"
ReplyDelete