ಕಾಡುವ ಅಪೂರ್ಣ ಖುಷಿಯ ಭಾವಗಳು.....
(ಇಲ್ಲಿಯ ಭಾವಗಳು ಕೇವಲ ನನ್ನ ಕಲ್ಪನೆಗಳಷ್ಟೇ...)
ಗೆಳೆಯಾ -
ಸಂದು ಹೋದ ನಲವತ್ತರಾಚೆ ನಿಂತು ಹಿಂತಿರುಗಿ ನೋಡುತ್ತಿದ್ದೇನೆ ಕಳೆದ ಇಪ್ಪತ್ತು ಸಂವತ್ಸರಗಳ... ಅವು ಬದುಕಿಗೆ ನೀ ಸಿಕ್ಕ ಮೇಲಿನ ಸಂವತ್ಸರಗಳು...
ಮೊದಲ ರಾತ್ರೀಲಿ ಹಸಿದ ಮೈಯನ್ನು ಹರಿದು ಹೀರುವಂತೆ ನೀ ತಬ್ಬಿಕೊಂಡ ನೆನಪಿಗಿಂತ ನಂಗೆ ಅದಕೂ ಮುಂಚಿನ ದಿನಗಳಲ್ಲಿ ಆ ತಿರುವಿನಲ್ಲಿ ಬೀಳ್ಕೊಡುವ ಮುನ್ನ ನೀ ಆತ್ಮೀಯ ಸ್ನೇಹಭಾವದಲ್ಲಿ ಆಲಂಗಿಸಿ ಹಣೆಯ ಮುದ್ದಿಸುತ್ತಿದ್ದೆಯಲ್ಲ ಅದೇ ಹೆಚ್ಚು ಹಿತವಾಗಿ ನೆನಪಾಗುತ್ತೆ ಕಣೋ... ನೀ ಸ್ನೇಹದಲ್ಲಿ ಚುಂಬಿಸಿದ ಹಣೆಯನ್ನು ಇನ್ನಿಲ್ಲದಂತೆ ಪ್ರೀತಿಸಿದವಳು ನಾನು... ಅದರ ಅಂದ ಹೆಚ್ಚಿಸಿಕೊಳ್ಳಲೆಂದೇ ಅದುವರೆಗೆ ಅಲರ್ಜಿಯಿಂದ ನೋಡುತ್ತಿದ್ದ ಬಿಂದಿಯನ್ನೂ ಪ್ರೀತಿಸತೊಡಗಿ ಹಣೆಯ ಅದರಿಂದ ಸಿಂಗರಿಸಿಕೊಂಡವಳು... ಈಗ ಎಷ್ಟು ಕಾಲವಾಗಿ ಹೋಯಿತು ನೀ ಮತ್ತದೇ ಆತ್ಮಬಂಧುತ್ವದ ಭಾವದಲ್ಲಿ ಈ ಹಣೆಯ ಮುದ್ದಿಸಿ... ಆ ತೋಳಲ್ಲಿನ ಆತ್ಮೀಯತೆ, ನನ್ನ ರೂಪ – ಅಂತಸ್ತು – ಅಸಹಾಯಕತೆಗಳ ಬಗೆಗಿನ ನನ್ನ ಕೀಳರಿಮೆಗಳೆಲ್ಲ ಕಳೆದು ಹೋಗಿ ನಂಗಲ್ಲಿ ಸಿಗುತ್ತಿದ್ದ ಭರವಸೆ ಹಾಗೂ ಹಗುರತೆ ಇಂದ್ಯಾಕೆ ಸಿಗುತ್ತಿಲ್ಲ... ಸಾವಿರ ಜನರೆದುರೂ ಆತ್ಮೀಯವಾಗಿ ಆಲಂಗಿಸುತ್ತಿದ್ದವನು ಇಂದು ನಿನ್ನದೇ ಮನೆಯಂಗಳದಲ್ಲೂ ಹಾಗೇ ಸುಮ್ಮನೆ ಎಂಬಂತೆ ಪ್ರೀತಿ ತೋರಲೂ ಸಿಡುಕುವುದೇತಕೆ.? ಅಂದಿನ ಆ ಪ್ರೀತಿ ಎಲ್ಲಿ ಕಳೆದುಹೋಯಿತು.? ಆಲಿಂಗನ ಎಂಬುದು ರಾತ್ರಿಯ ಸುಖದ ಮುಂಚಿನ ಕಸರತ್ತು ಮಾತ್ರವಾಗಿ ಬದಲಾದದ್ದೇಕೆ.? ಅಂದು ಆ ಪಾರ್ಕಿನ ನಡುಮಧ್ಯದ ಬೆಂಚಿನ ಮೇಲೆ ಕೂಡ ನಿನ್ನ ಹೆಗಲು ತಬ್ಬಿ ಅಳಬಹುದಿತ್ತಲ್ಲ ನಾನು – ಖುಷಿಗೂ, ನೋವಿಗೂ... ಇಂದು ಈ ಏಕಾಂತದಲ್ಲಿ ಕೂಡ ಕಣ್ಣೀರಾಗಲಾಗದಿದ್ದುದಕೆ ಕಾರಣ ಏನು.? ಅಂದು ಅಷ್ಟೆಲ್ಲ ರಹದಾರಿ ದೂರವಿದ್ದೂ ಇಬ್ಬರಿಗೂ ಒಬ್ಬರಲ್ಲಿನ ಚಿಕ್ಕ ಕದಲಿಕೆಯೂ ಅರಿವಾಗುತ್ತಿತ್ತಲ್ಲ ಇಂದು ಉಸಿರು ತಾಕುವಷ್ಟು ಹತ್ತಿರವಿದ್ದರೂ ನನ್ನ ನಿಟ್ಟುಸಿರು ಕೂಡ ನಿನ್ನ ತಾಕದಂತಾದದ್ದು ಹೇಗೆ.? ಈಗಲೂ, ಈ ಕ್ಷಣಕ್ಕೂ ಅಂದುಕೊಳ್ತೇನೆ ಇದನೆಲ್ಲ ಹೇಳಿ ಮನಸಾರೆ ಅತ್ತು ನಿನ್ನ ಕಣ್ಣಲ್ಲಿ ಕಣ್ಣಿಡಬೇಕೆಂದು... ಆ ಭಾವದಲ್ಲಿ ನಾ ನಿನ್ನ ತೋಳು ತಬ್ಬಿದರೆ ನೀನದನ್ನ ನನ್ನ ಆಹ್ವಾನ ಅಂದುಕೊಂಡು ಮಾತಾಡಲೆಂದು ಬಿರಿದ ತುಟಿಯ ಮಧುಪಾತ್ರೆಯಾಗಿಸಿಕೊಂಡುಬಿಡ್ತೀಯ... ಮತ್ತೆಲ್ಲಿ ಮಾತು... ಬೇಕೋ ಬೇಡವೋ ಮಾತಾಡಬೇಕಿದ್ದ ಮನಸು ಮೂಕವಾಗಿ ದೇಹ ಮಾತಿಗಿಳಿಯುತ್ತೆ... ಕೂಡಿ ಕಳೆವುದೆಲ್ಲ ಮುಗಿದ ಮೇಲಾದರೂ ಮಾತಿಗಿಳಿಯೋಣವೆಂದರೆ ನಿಂಗೆ ಸುಖದ ಸುಸ್ತು – ಗಾಢ ನಿದ್ದೆ... ಎಲ್ಲ ಸುಖಗಳ ನಂತರವೂ ನನ್ನಲ್ಲುಳಿವುದು ಬರೀ ನಿಟ್ಟುಸಿರು... ಬದುಕಿನ ಯಾವುದೋ ತಿರುವಲ್ಲಿ ಆಕಸ್ಮಿಕ ಎಂಬಂತೆ ಎದುರಾಗಿ, ಎಷ್ಟೆಲ್ಲ ಭಾವಗಳು ಹೊಂದಿಕೊಂಡು ಬೆಸೆದುಕೊಂಡಿದ್ದ ಮಧುರ ಸ್ನೇಹವನ್ನ ಬದುಕಿಡೀ ಸಲಹಿಕೊಳ್ಳುವ, ಆ ಸ್ನೇಹದ ನಡುವೆ ಇನ್ಯಾರಿಗೂ ಉಸಿರಾಡಲು ಅವಕಾಶ ಕೊಡದಿರುವ ತೀವ್ರ ಹಂಬಲದಿಂದಲ್ಲವಾ ನಾವು ಸ್ನೇಹವನ್ನು ಪ್ರೇಮವಾಗಿಸಿಕೊಂಡು ಮದುವೆಯ ಬಂಧದಲ್ಲಿ ಬೆಸೆದುಕೊಂಡದ್ದು... ಇಲ್ಲಿ ಬೆಸೆದ ಬಂಧವನ್ನು ಜನ್ಮಾಂತರಕ್ಕೂ ವಿಸ್ತರಿಸಿಕೊಳ್ಳುವ ಆಸೆಯಿಂದಲ್ಲವಾ ಮದುವೆಯಾದದ್ದು... ಹಾಗೆ ಜನ್ಮಾಂತರಗಳವರೆಗೂ ನಮ್ಮನ್ನು ಬೆಸೆಯಬೇಕಿದ್ದ ಮದುವೆಯ ಬಂಧ ಬರೀ ಎರಡು ಸಂವತ್ಸರಗಳಲ್ಲೇ ಹಳಸಿದ ಭಾವ ಕೊಡುತ್ತಿರುವುದೇತಕೆ... ದೇಹಗಳು ಬೆತ್ತಲಾಗುತ್ತ ಆಗುತ್ತ ಮನಸು ಕತ್ತಲೆಗೆ ಜಾರಿ ಹೋಯಿತಾ... ಹಾಗಂತ ನಿಂಗೆ ನನ್ನೆಡೆಗೆ ಪ್ರೀತಿ ಇಲ್ಲ ಅಂತ ಯಾರಾದರೂ ಅಂದರೆ ನಾ ಸುತಾರಾಂ ಒಪ್ಪಲಾರೆ... ಆದರೆ ನಡುವೆ ಕಳಚಿಹೋದ ಆತ್ಮೀಯ ತಂತು ಯಾವುದು ಎಂಬುದು ನನಗೂ ಅರಿವಾಗುತ್ತಿಲ್ಲ... ಕೂತು ಮಾತಾಡಿ ಹಗುರಾಗಲು ನೀ ಸಿಗುತ್ತಿಲ್ಲ... ನೀ ದುಡಿತದಲ್ಲಿ ಸಂಪೂರ್ಣ ಕಳೆದುಹೋಗಿದ್ದು ನನ್ನ ಮತ್ತು ಭವಿಷ್ಯದಲ್ಲಿ ಬರಬಹುದಾದ ನಮ್ಮ ಜೀವಕುಡಿಯ ಸಲುವಾಗಿ ಎನ್ನುವ ನಿನ್ನ ಮಾತನ್ನ ನಾನು ಒಪ್ಪದೇ ವಿಧಿಯಿಲ್ಲ... ಆದರೆ ಬದುಕ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಭಾವಗಳ ಕೊಂದುಕೊಂಡದ್ದು ಸರಿಯಾ ಎಂಬುದು ಪ್ರಶ್ನೆ.? ನಾಳೆ ಒಂದಿಷ್ಟು ಆರ್ಥಿಕ ಸ್ವಾತಂತ್ರ್ಯ ದಕ್ಕಿದ ಮೇಲೆ ಬರಲಿ ಅಂದುಕೊಂಡ ಮಗು ಇಂದೇ ಬಂದಿದ್ದರಾಗುತ್ತಿತ್ತೇನೋ... ಒಂದಿಷ್ಟು ನನ್ನ ಖಾಲಿತನ ತುಂಬುತ್ತಿತ್ತೇನೋ... ಆದರೂ ನನ್ನ ಆಸೆ ಬರೀ ಮಗುವೊಂದೇ ಅಲ್ಲ – ನೀನೂ ಮಗುವಾಗಬೇಕು ನನ್ನ ಮಡಿಲಲ್ಲಿ ಆ ದಿನಗಳಲ್ಲಿಯಂತೆ... ಆ ದಿನಗಳು ಮತ್ತೆ ಬಂದೀತಾ..? ಬದುಕಿನ ಇಪ್ಪತ್ಮೂರನೇ ಸಂವತ್ಸರದ ಖಾಲಿ ಖಾಲಿ ಬೆಳಗು ಮತ್ತು ನೀರವ ರಾತ್ರಿಗಳಲ್ಲಿ ಕಾಡುತ್ತಿದ್ದ ಈ ಭಾವಗಳಲ್ಲಿ ಇಂದಿಗೂ ಈ ಅರ್ಧ ಶತಮಾನದಂಚಲ್ಲೂ ಹೆಚ್ಚೇನೂ ವ್ಯತ್ಯಾಸವಾಗಿಲ್ಲ... ಇಪ್ಪತ್ನಾಕಕ್ಕೆ ಮಗಳನ್ನು ಮತ್ತೆರಡು ವರ್ಷದಲ್ಲಿ ಮಗನನ್ನೂ ಕೊಟ್ಟದ್ದು ಬಿಟ್ಟರೆ... ನೀನು ಮತ್ತೆಂದೂ ಮಗುವಾಗಲೇ ಇಲ್ಲ ನನ್ನ ಮಡಿಲಲ್ಲಿ...
ಅಂಗಳದಲ್ಲಿ ನನ್ನದೇ ಕರುಳ ಬಳ್ಳಿಗಳು ನಲಿಯುತ್ತಿದ್ದ ಕಳೆದ ದಶಕವೇನೋ ಚೆಂದಗೇ ಕಳೆದು ಹೋಯಿತೆನ್ನಬಹುದು... ಆದರೆ ಮತ್ತೆ ಇಂದು ಅಂದಿನ ಆ ಭಾವಗಳು ಕೆರಳಿ ಕಾಡಹತ್ತಿವೆ... ಇಂದು ಮಕ್ಕಳೂ ಬೆಳೆದುಬಿಟ್ಟಿದ್ದಾರೆ ಅನ್ನಿಸ್ತಿದೆ... ಅವರ ಬದುಕುಗಳೂ ಕವಲೊಡೆಯುತ್ತಿವೆ... ಮಗಳು ಕನ್ನಡಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದಾಳೆ – ಮಗ ಬಾತ್‌ರೂಮಲ್ಲೇ ಘಂಟೆಗಟ್ಟಲೆ ಕಳೀತಾನೆ... ಅವರಿಗೀಗ ನಾ ಸುಮ್ ಸುಮ್ಮನೆ ಬೇಡದ ಮಾತಾಡಿ ಕಾಡೋ ಹಳೆಯ ಜಮಾನಾದ ಅಮ್ಮ... ನನ್ನಲ್ಲಿ ಏನೇನೋ ದುಗುಡಗಳು... ನಾನು ನಿಜಕ್ಕೂ ಹಳೆಯ ಜಮಾನಾದ ಹೆಂಗಸಾ... ನಿನ್ನ ಮತ್ತು ಮಕ್ಕಳ ನೆರಳಾಗಿ ಉಳಿದು ಬದುಕಿನ ನಿಜದ ಸವಿಯ ಕಳೆದುಕೊಂಡಿದ್ದೇನಾ... ಪ್ರೇಮಪೂರ್ಣ ಸಂಸಾರದ ಕನಸಲ್ಲಿ ನಾಲ್ಕು ಗೋಡೆಗಳ ಮಧ್ಯದ ಬಂಧಿಯಾಗಿಬಿಟ್ಟೆನಾ – ನಿಂತ ನೀರಾಗಿಹೋದೆನಾ... ಏನೇನೋ ಗೊಂದಲಗಳು... ಅವುಗಳ ಮಧ್ಯವೇ ಇಣುಕೋ ಹೊಸ ಆಸೆಗಳು (ಹೊಸತೋ ಅಥವಾ ಹಾಗೇ ಉಳಿದ ಹಳೆಯದರ ವಿಸ್ತರಣೆಯೋ ಅಂತ ಅನುಮಾನವಿದೆ)... ಅವನೆಲ್ಲ ನಿನ್ನೆದುರು ಹರವೋಣವೆಂದರೆ ನನ್ನ ದುಗುಡಗಳೆಲ್ಲ ನಿಂಗಿಂದು ತಮಾಷೆಯಾಗಿ ಕಾಣುತ್ವೆ... ನಮ್ಮಿಬ್ಬರ ನಡುವೆಯಂತೂ ದೇಹಗಳು ಕೂಡ ಮಾತಾಡುವುದು ವಿರಳವಾಗಿದೆ ಸಹಜವಾಗಿಯೇ... ಏನೆಲ್ಲ ಇದ್ದೂ ಕಾಡುವ ಈ ಒಂಟಿ ಒಂಟಿ ಅದೇ ಬೆಳಗು ಮತ್ತು ಅದದೇ ಸಂಜೆಗಳಲ್ಲಿ ಮತ್ತೆ ಮದುವೆಗೂ ಮುಂಚಿನ ಆ ದಿನಗಳು ನೆನಪಾಗುತ್ತಿವೆ... ನೀ ಸಿಕ್ಕು, ಬದುಕಿಗೆ ಹೊಸ ಸಂತೋಷ ಧುಮ್ಮಿಕ್ಕಿದ್ದ ಮದುವೆಗೂ ಮುಂಚಿನ ಆ ದಿನಗಳು... ಸಾಮಾನ್ಯವೆಂಬಂತೆ ಆದ ಪರಿಚಯ ಬಿಟ್ಟಿರಲಾರದ ಸ್ನೇಹವಾಗಿ ಒಬ್ಬರೇ ಸಾಗಬೇಕಾದ ಆ ಕಾಲು ದಾರೀಲಿ ಇಬ್ಬರೂ ಹಸ್ತಗಳ ಬೆಸೆದು ನಡೆದದ್ದು – ಕಲ್ಲೊಂದು ನನ್ನ ಕಾಲು ನೋಯಿಸಿದಾಗ ನಿನ್ನ ಕಣ್ಣಂಚು ಒದ್ದೆಯಾದದ್ದು – ಆ ಬೆಟ್ವವನೇರುವಾಗ ಸುಸ್ತಾಗಿ ನಾ ಸೊಂಟದ ಮೇಲೆ ಕೈಯಿಟ್ಟರೆ ನೀ ಮುಚ್ಚಟೆಯಿಂದ ನೆತ್ತಿ ನೇವರಿಸಿದ್ದು – ಯಾವುದೋ ತಿರುವಲ್ಲಿ ನಿಂಗೆ ಅಮ್ಮ ನೆನಪಾಗಿ ನೀ ನನ್ನ ಮಡಿಲಲ್ಲಿ ಮಗುವಾದದ್ದು – ಆ ಸಂಜೆ ಸಾಯೋ ಹೊತ್ತಲ್ಲಿ ಯಾವುದೋ ಹಳೆಯ ನೋವೊಂದ ನೆನೆದು ನಾ ನಿನ್ನ ಹೆಗಲ ತೋಯಿಸಿದ್ದು - ಹಗುರಾಗಿ ತಬ್ಬಿದ ನಿನ್ನ ಬಾಹುಗಳಲ್ಲಿ ನಂಗೆ ಭರವಸೆಯ ನಾಳೆಗಳು ಗೋಚರಿಸಿದ್ದು - ಆ ರಾತ್ರಿ ಕಾವಳದಲ್ಲಿ ನಿದ್ದೆ ಕಣ್ಣನೆಳೆಯುತಿದ್ದರೂ ನಿದ್ದೆ ಬರುತ್ತಿಲ್ಲ ಅಂತ ನಾ ಹಟಹೂಡಿದಾಗ ನೀ ತಟ್ಟಿ ತಟ್ಟಿ ಮಾಡಿ ನನ್ನ ಮಲಗಿಸಿದ್ದು – ಆ ಪುಟ್ಟ ವಿದಾಯದಲ್ಲೂ ಇಬ್ಬರ ಗಂಟಲೂ ತುಂಬಿ ಬರುತ್ತಿದ್ದುದು – ಸುಮ್ಮನೇ ಎಂಬಂತೆ ಹಣೆಗೆ ತುಟಿಯೊತ್ತುತಿದ್ದುದು – ಅಲ್ಯಾರೋ ನನ್ನ ಮುಖದ ಬದಲು ಎದೆಯೆಡೆಗೆ ಬಿಡುಗಣ್ಣನೆಟ್ಟದ್ದ ಕಂಡು ನಾ ಕೋಪಗೊಂಡರೆ ನೀನದನ್ನ ಅದೆಷ್ಟು ಗಂಡಸಿನ ಪ್ರಾಕೃತಿಕ ಅಭಿಲಾಷೆ ಅಂತ ವಿವರಿಸಿ ನನ್ನ ಕೋಪವ ಹೆಚ್ಚಿಸಿದ್ದು – ಅದ್ಯಾರೋ ಹುಡುಗೀನ ನೀ ನನ್ನೆದುರೇ ಹೊಗಳಿ ಬೆನ್ನಿಗೆ ಗುದ್ದು ತಿನ್ನುತಿದ್ದುದು... ಬದುಕನ್ನ ಅಷ್ಟೆಲ್ಲ ಚಂದಗೆ ವಿವರಿಸುತ್ತಿದ್ದೆಯಲ್ಲೋ... ಎಂಥ ಸ್ನೇಹವಿತ್ತು ಅಲ್ಲಿ... ನಂಗೆ ಆ ಗೆಳೆಯ ಮತ್ತೆ ಸಿಕ್ಕಾನಾ... ಅಥವಾ ಆ ಸ್ನೇಹವನ್ನ ಶಾಶ್ವತವಾಗಿಸುವ ತರಾತುರಿಯಲ್ಲಿ ಪ್ರೇಮವಾಗಿಸಿದ್ದೇ ತಪ್ಪಾಗಿ ಹೋಗಿ ಗೆಳೆಯನನ್ನು ಕಳೆದುಕೊಂಡುಬಿಟ್ಟೆನಾ... ಶಾಶ್ವತತೆಯ ಹುಯಿಲಿಗೆ ಬೀಳಬಾರದಿತ್ತಾ... ತೀವ್ರವಾಗಿ ಬೇಕೇಬೇಕಿನಿಸುತ್ತಿದೆ ಈ ಗಂಡನಲ್ಲಿ ಆ ಗೆಳೆಯ... ಮತ್ತೆ ಒಂದೇ ಒಂದು ಬಾರಿಯಾದರೂ ಆ ಕ್ಷಣಗಳು ಮರುಕಳಿಸಬಾರದಾ...
ಕೂದಲು ನೆರೆಯುತ್ತಿರುವ ಈ ವಯಸಲ್ಲಿ ಇದೇನು ಮತ್ತೆ ಹರೆಯಕ್ಕೆ ಹೋಗೋ ಹುಚ್ಚು ಹಂಬಲ ಅಂತೀಯೇನೋ... ಹೌದು ನಂಗೆ ಒಂಥರಾ ಹುಚ್ಚೇ... ನಡೆಯುತ್ತ ನಡೆಯುತ್ತ ದಾರಿ ಮಧ್ಯೆ ಎಲ್ಲೋ ಅರಿವೇ ಆಗದೆ ಕಳೆದುಕೊಂಡ ಮಧುರ ಭಾವಗಳ, ಖುಷಿಗಳ ಮತ್ತೆ ಹುಡುಕುವ ಹುಚ್ಚು... ಆದರೂ ಆ ಹುಚ್ಚಲ್ಲಿ ನಂಗೆ ಒಂಥರಾ ಅಪರಿಮಿತ ಸುಖವಿದೆ... ವಯಸ್ಸು ದೇಹಕ್ಕೆ ಮನಸಿಗಲ್ಲವಲ್ಲ... ಅಲ್ಲಿನ್ನೂ ಕನಸು ಚಿಗುರೋ ಚೈತನ್ಯವಿದೆಯಲ್ಲ... ಆ ಹುಚ್ಚು ಕನಸನ್ನು ಕೂಡ ನಾ ನಿನ್ನೆಡೆಗೇ ಕಾಣುತ್ತಿದ್ದೇನೆ... ಕೂದಲಿಗೆ ಬಣ್ಣ ಹಚ್ಚಿದಂತೆ ಮನಸಿನ ಭಾವಗಳಿಗೂ ಒಂಚೂರು ಬಣ್ಣ ಹಚ್ಚೋಣವಂತೆ ಮತ್ತೆ ಆ ದಿನಗಳಲ್ಲಿಯಂತೆ... ಬದುಕು ಗರಿಗೆದರಿ ನಲಿದೀತು ಮತ್ತೊಮ್ಮೆ... ಮಾತಾಗು ಒಮ್ಮೆ, ಮಗುವಾಗು ಇನ್ನೊಮ್ಮೆ, ಒಂದೇ ಒಂದು ಬಾರಿಯಾದರೂ ಕಣ್ಣಲ್ಲಿ ಕಣ್ಣಿಟ್ಟು ಹಣೆಯ ಮುದ್ದಿಟ್ಟು ಮನಸ ಸಿಂಗರಿಸು ನಾ ನನ್ನ ಒಂಟಿತನದಲ್ಲಿ ಪೂರ್ತಿ ಹುಗಿದು ಹೋಗುವ ಮುನ್ನ...
ಮನಸಿನಿಂದಲೂ ನಗುವ ಆಸೆಯಿಂದ ನಿನ್ನೊಳಗಣ ಸ್ನೇಹಿತನ ಮತ್ತೆ ಕಾಣುವ ಕನಸಿನೆಡೆಗೆ ಕಣ್ಣು ನೆಟ್ಟಿರೋ –
ನಿನ್ನಾಕೆ...

ಕೊಟ್ಟ ಪ್ರೀತಿಯನ್ನು ಜತನ ಮಾಡಿಕೊಳ್ಳಬೇಕು...
ReplyDeleteಕೊಡುವ ಪ್ರೀತಿಯನ್ನಲ್ಲ.... ಅದು ನಿರಂತರವಾಗಿ ಹರಿಯುತ್ತಿರಬೇಕು...
ಆ ನಿರಂತರತೆ ಎಲ್ಲಿ ಭಂಗವಾಗುತ್ತೋ ಅದೇ ಇಂತಹ ಪರಿಸ್ಥಿತಿಯ
ಮೊದಲ ಹಂತವಾದೀತು....
ಶೈಲಿ ಗಿಯ್ಲಿ ಉಳ್ಕಿದೇಲ್ಲಾ ಮಸ್ತ್ .....
sooooooooooooper
ReplyDeleteನಿಜ... ವಯಸ್ಸು ದೇಹಕ್ಕೆ ಮನಸ್ಸಿಗಲ್ಲ.....ತುಂಬಾ ಇಷ್ಟವಾಯ್ತು...
ReplyDeleteವಾಹ್ !
ReplyDeleteನಿಜ ..ನಲವತ್ತರ ಅವಳ ಆ ಹಪಾಹಪಿಯ ,ದಕ್ಕಿದ್ದ ಪ್ರಸ್ತುತ ಕಳೆದೇ ಹೋಗಿರೋ ಈ ಭಾವವ ಮನಕ್ಕೆ ನಾಟೋ ತರ ಹೇಳಿರೋ ನಿಮಗೊಂದು ನಮನ .
"ಮಗುವಾಗ ಬೇಕು ನೀನೂ ನನ್ನ ಮಡಿಲಲ್ಲಿ ಮತ್ತೆ " -ತುಂಬಾ ಕಾಡಬಂತು ಈ ಭಾವ .
ತುಂಬಾ ತುಂಬಾ ಇಷ್ಟವಾಯ್ತು
ವತ್ಸು ...
ReplyDeleteನನಗಿಂತ ವಯಸ್ಸಿನಲ್ಲಿ ದೊಡ್ದವರೆನಿಸಿಕೊಂಡ ಮನಸ್ಸಿಗೆ ಹತ್ತಿರವಾದ ಅನೇಕರು ನೆನಪಾಗಿ ಇದೆಲ್ಲವ ಓದಿ... ಯಾಕೋ ಅವರೆಲ್ಲರ ಮನಸ್ಸ ನೀ ಓದಿ ಬರೆದಂತಿದೆ. ಎದುರು ಸಿಕ್ಕರೆ ಅಂತ ಹಿರಿಯ ಸ್ನೇಹಿತೆಯರನ್ನು ನಿಲ್ಲಿಸಿ ಕೇಳಿಬಿಡಲೇ ಎನಿಸಿದ್ದು ನಿಜ