ಹಲ ಭಾವ ಮಿಶ್ರಣ.....
ನೆನಪು ನಿನ್ನೆಗಳನ್ನ ಹಸಿರಾಗಿಡುತ್ತೆ...
ನೆನಪು ನಿನ್ನೆಗಳನ್ನ ಹಸಿರಾಗಿಡುತ್ತೆ...
ಕನಸು ನಾಳೆಗಳ ನಿರ್ದೇಶಿಸುತ್ತೆ...
ಯಾರದೇ ಬದುಕ ಕನಸಾಗೋ ಹಂಬಲವಿಲ್ಲ...
ಯಾರಲ್ಲಾದರೂ ಖುಷಿಯ ನೆನಪಾಗಿ ಉಳಿದೇನಾ...???
ಖಂಡಿತ ಆ ನಂಬಿಕೆಯಿಲ್ಲ...
ನಿನ್ನೆ ನಾಳೆಗಳಲ್ಲಿ ಉಳಿಯದೇ ಇಂದೆಂಬ ಈ ಕ್ಷಣದೊಂದಿಗೆ ಅದಿದ್ದಂತೆ ಕಳೆದು ಹೋಗುವುದಷ್ಟೇ ಉಳಿದಿರುವ ಹಂಬಲ...
ಇಳಿ ಸಂಜೆಯೆಂದರೂ, ಕಾರಿರುಳೆಂದರೂ ಅದೇ ತಾನೆ -
ಬಂಧಿಸಿಟ್ಟ ಕಣ್ಣ ಹನಿಗಳಿಗೆಲ್ಲ ಸ್ವಾತಂತ್ರ‍್ಯ ಸಿಗುವ ಕಾಲ...
ಮನಸು ಹಗುರಾಗಿ, ಹೊಸದಾಗಿ ನಗುವ ಹುಡುಕುವ ಕಾಲ...
ಹಗಲಲ್ಲಿ ಕಳಕೊಂಡದ್ದು ಇರುಳಲ್ಲಿ ಸಿಕ್ಕೀತಾ......???
ಪ್ರೀತಿ ಕೊಡುವುದೆಂದರೆ ಸ್ವಾತಂತ್ರ‍್ಯ ಕೊಡುವುದಲ್ವಾ...
ನಿನ್ನಿಷ್ಟದಂತೆ ನೀ ಬದುಕು ಅಂತಂದು ಹಾರಾಡಲು ಬಿಟ್ಟೆ...
ಎನ್ನೆದೆಯ ಗೂಡಿನಲಿ ನಿನ್ನ ಬಂಧಿಸುವುದೆ ನನ್ನಿಷ್ಟವೆಂದು ಬದುಕ ತಬ್ಬಿಬಿಟ್ಟಳು...
ನಾನಿಂದು ಅವಳ ಒಲವ ಗೃಹಬಂಧಿ...
ಪ್ರೀತಿಗೇನು ಕಾರಣ ಎಂದು ಕೇಳಲಾರೆ...
ಗೊತ್ತೆನಗೆ -
ಮುಂಬೆಳಗಿನ ಕನಸಿನಂಥ ಕವಿತೆ ನಿನ್ನ ಪ್ರೀತಿ...
ಕಪ್ಪು ಹುಡುಗೀ -
ನೀನು ಕತ್ತಲು ಮತ್ತು ಮಳೆ ಜತೆಯಾಗಿ ಸೇರಿದಂಥವಳು...
ನನ್ನ ಕಣ್ಣ ಹನಿಯ ನಾನೂ ಕಾಣದಂತೆ ನಿನ್ನುಡಿಯಲಿ ಹುದುಗಿಸಿಕೊಂಡು, ಕರೆಯೂ ಉಳಿಯದಂತೆ ತೊಳೆದು ಬೆಳಗಿನೆದುರು ಶುಭ್ರ ನಗೆಯೊಂದನೇ ಉಳಿಸುವವಳು...
ನಿನ್ನ ಹಗಲಿಗೆ ನಗೆಯ ನಂಜೇರಲಿ - ದಿನಕೆ ರಂಗೇರಲಿ...
ಕಂದನ ತುಟಿಯಂಚಿಂದ ಜಾರಲಾರೆನೆಂಬ ಹಸಿ ಹಾಲಿನ ಹನಿ ಮುತ್ತು ಮತ್ತು ನಿನ್ನ ನಗೆಯ ಸಿಹಿ ತುತ್ತು - ಈ ಬೆಳಗು...
ಗೆಳತೀ -
ಬದುಕಿನೊಂದಿಗೆ ಮುಗಿಯದ ಸಾವಿರ ಪ್ರಶ್ನೆಗಳಿತ್ತು - ನಿನ್ನ ಮುಗುಳ್ನಗುವ ಹೀರಿ ನನ್ನೆಲ್ಲ ಪ್ರಶ್ನೆಗಳ ಮರೆತೆ...
ಉತ್ತರಗಳ ಮೀರಿದ ಭಾವಗಳ ಸನ್ನಿಧಿಯಲಿ ನಗುವೊಂದೆ ಉತ್ತರ ಅನ್ನಿಸಿ - ನಿನ್ನೆಲ್ಲ ಪ್ರಶ್ನೆಗಳೆದುರು ನಗುತ್ತ ನಿಂತೆ...
ಬದುಕೀಗ ಅಷ್ಟಿಷ್ಟು ನಗುತ್ತಿರುವಂತಿದೆ...
ನಂಗಾದರೋ ನನ್ನ ಸಣ್ಣ ಬೇಸರದ ಎದುರೂ ಸದಾ ಗುರಾಣಿ ಹಿಡಿದು ಯುದ್ಧ ಸನ್ನದ್ಧರಾಗಿ ನಿಲ್ಲಲು ತಾವೇ ತಾವಾಗಿ ದಕ್ಕಿದ ಸ್ನೇಹಗಳ ಜೊತೆಯಿದೆ...
ಅವಳಿಗೋ ಅವಳ ಕಣ್ಣ ಹನಿಯೊಂದೆ ಆಸರೆ...
ಆದರೂ ಮಾತಿಗೆ ಮುನ್ನ ನೀ ಚೆನ್ನಾಗಿದ್ದೀಯೇನೋ ಅಂತಾಳೆ - ನಾನು ‘ಹಾಂ’ ಅನ್ನುವುದಕ್ಕಾಗಿ ಕಾಯುತ್ತಾಳೆ; ‘ಹಾಂ’ ಅಂದಾಗ ಸಮಾಧಾನದ ಉಸಿರ ಚೆಲ್ಲುತ್ತಾಳೆ...
ಅವಳು ಅಮ್ಮ - ನಾನು ಸ್ವಾನುಕಂಪದಲ್ಲಿ ತೇಲೋ ಸ್ವಾರ್ಥಿ ಮಗರಾಯ...
ನೆನಪಾದರೆ ಮುಸ್ಸಂಜೆ ಮುಳ್ಳಾಗಿ ಎದೆಯ ಚುಚ್ಚುತ್ತದೆ...
ಇರುಳು ಅರಳುವ ಹೊತ್ತು, ಅದೇ ತಾರಸಿ, ಅಲ್ಲಿರೋ ಬಟ್ಟೆ ಒಗೆಯೋ ಎರಡೂವರೆ ಅಡಿಯ ಹಾಸುಗಲ್ಲು, ಮೇಲೆ ಮುದುಡಿ ಮಲಗಿರೋ ಹೆಣದಂಥ ನಾನು ಮತ್ತು ನನ್ನ ಮನಸು, ಸುತ್ತ ಬಣ್ಣದ ಬಲ್ಬುಗಳ ಬೆಳಕಲ್ಲಿ ಲಕಲಕ ಅನ್ನೋ ಕಟ್ಟಡಗಳು, ಅಲ್ಯಾವುದೋ ಕಟ್ಟಡದ ಬಾಗಿಲಲ್ಲಿ ಯಾವುದಕ್ಕೋ ಕಾಯುವ ಒಂಟಿ ಹೆಣ್ಣು, ಮನಸಿನ ಬೆವರ ಒಣಗಿಸುವಲ್ಲಿ ಸೋತ ತಂಗಾಳಿ, ಮನದ ಮೂಗ ಹಿಂಡುವ ಕೊಳಕು ವಾಸನೆ ಚರಂಡಿಯದ್ದಲ್ಲ ನನ್ನದೇ ಬದುಕಿನದ್ದು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ನಗುವಾಗಲಿ ಬದುಕು....
ReplyDeleteಎಲ್ಲಾ ದುಃಖಗಳ ಎಲ್ಲೆ ಮೀರಿಯೂ...
ಅವಳು ಅಮ್ಮ - ನಾನು ಸ್ವಾನುಕಂಪದಲ್ಲಿ ತೇಲೋ ಸ್ವಾರ್ಥಿ ಮಗರಾಯ...
ReplyDeleteನೆನಪಾದರೆ ಮುಸ್ಸಂಜೆ ಮುಳ್ಳಾಗಿ ಎದೆಯ ಚುಚ್ಚುತ್ತದೆ...
ಕಣ್ಣೀರಾದೆ.... :(
ಎಂಥಾ ಬರೀತ್ಯೋ ಮಾರಾಯ! ಸೀದಾ ಹೃದಯಕ್ಕೆ ಲಗ್ಗೆಯಿಟ್ಟು ಕಲಕಿಬಿಡುವ ಸಾಲು ಸಾಲು ಮಳೆಯಂತೆ! ಯಾಕೋ ಮನಸಿನ ಮಾತಿಗೆ ದನಿಕೊಡಲಾಗದ ಅಸಹಾಯಕತೆ ಕಾಡಿದಾಗೆಲ್ಲ ಒಮ್ಮೆ ನಿನ್ನ ಭಾವಗಳ ಗೊಂಚಲಲ್ಲಿ ಇಣುಕಿ ನೋಡಿದರೆ ಸಾಕು. ಹೃದಯ ಹಾಡೂ ಹಾಡುತ್ತದೆ! ಹಾಗೆ ಕಂಬನಿಯೂ ಜಿನುಗುತ್ತದೆ! ಸೂಪರ್ ಲೈಕ್.
ReplyDeleteಚೆನ್ನಾಗಿದೇ ರೀ ನಿಮ್ಮ ಬರವಣಿಗೆ ಶೈಲಿ ಮುಂದುವರಿಯಿರಿ
ReplyDelete