ಹಾದಿ ಪಾದಕ್ಕೆ ಹೇಳಿದ ಪಾಠ.....
ನೀ ನಂಬಲಾರದ ಅಪ್ರಿಯ ಸತ್ಯ"ನಾನು..."
ನೀ ನಂಬಿರೋ ಗಾಢ ಸುಳ್ಳು"ನಾನು..."
ನನ್ನ ಉರಿಯಲಿ ನಾನೇ ಬೇಯುವ ನಗ್ನತೆಯು "ನಾನು..."
ನಾನಿಲ್ಲಿ ನಾನೆಂದರೆ ನಾನು ಮಾತ್ರ...
#ಬದುಕು#ಸಾವು
↻↢↯↯↣↺
ಜೊತೆಯಿದ್ದು ಒಂಟಿಯಾಗುವುದಕಿಂತ ಧಿಕ್ಕರಿಸಿ ಏಕಾಂಗಿಯಾಗುವುದು ಹಿತವೇನೋ...
ನನ್ನ ಭಾವಗಳಲ್ಲಿ, ಕ್ರಿಯೆ ಪ್ರಕ್ರಿಯೆಯ ನಿಲುವುಗಳಲ್ಲಿ ಸ್ಪಷ್ಟತೆ ಇಲ್ಲದೇ ಹೋದಲ್ಲಿ ನನಗೆ ನಾನು ಪ್ರಾಮಾಣಿಕನಾಗಿರಲು ಅದ್ಹೇಗೆ ಸಾಧ್ಯ...!?
ಅಂತಿಮವಾಗಿ ನಾ ಜೀವಿಸೋದು ನಂಗೋಸ್ಕರ - ನೋಡೋರ ಕಣ್ಣಿನ ಕಾಮಾಲೆ ಅದು ಅವರ ಸಮಸ್ಯೆ...
ಕುಹಕದ ಬಾಯಿ ಮುಚ್ಚುವಂತೆ ಬದುಕಬೇಕು ಅಥವಾ ಅವನ್ನು ನಿರ್ಲಕ್ಷಿಸಿ ಮುನ್ಸಾಗಬೇಕು - ಎರಡನ್ನೂ ಮಾಡಲಾಗದ ನನ್ನ ಕೀಳರಿಮೆಗೆ ಅವರಿವರ ದೂರಲೆಂತು...?
ಮೊದಲಾಗಿ ನನಗೆ ನಾನು ಪ್ರಾಮಾಣಿಕನಾಗಿರಬೇಕು - ಅಂತಿಮವಾಗಿ ನಾ ಜೀವಿಸೋದು ನಂಗೋಸ್ಕರ...
#ಹಾದಿ_ಪಾದಕ್ಕೆ_ಹೇಳಿದ_ಪಾಠ...
↻↢↯↯↣↺
ಗೆದ್ದದ್ದು ನಾನಲ್ಲ - ನೀನು ಗೆಲ್ಲಿಸಿಕೊಂಡದ್ದು...
ಎಷ್ಟು ಸೋತರೆ ಮೌನ ಸಿದ್ಧಿಸೀತು ನನ್ನೊಳಗೂ...
ಮೆದುವಾಗಲಾ ಇಲ್ಲಾ ಬಿಗುವಾಗಲಾ...???
ಎಲ್ಲಾದಕ್ಕೂ...........ನೀವು ಕರೆ ಮಾಡುತ್ತಿರುವ ಚಂದಾದಾರರು 'ನಿಮ್ಮ' ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ...
#ಮಾತು #ಮೌನ
↻↢↯↯↣↺
ಅಯ್ಯೋ ಮರುಳೇ -
ಸ್ವಾತಂತ್ರ್ಯ, ಸ್ವೇಚ್ಛೆಗಳು ಕೊಂದದ್ದಕ್ಕಿಂತ ನೂರು ಪಟ್ಟು ಹೆಚ್ಚಾಗಿ ಭಾವ, ಬಂಧ, ಸಂಬಂಧಗಳನ್ನು ಕಾವಲಿನ ಕತ್ತಿ ಹಿಡಿದ ಈ ಬೇಲಿಗಳೇ ತಿಂದು ಹಾಕುತ್ತವೆ...
ಭಾವಕ್ಕೆ ಬೆರಗು ತುಂಬಲಾರದೇ ದೇಹದ ಬೆವರಿಗೆ ಬೆಚ್ಚುವ ಲೋಕವೇ -
ಪ್ರೀತಿಯ ಪಾವಿತ್ರ್ಯವ ಕಾಯುವುದು ಭಯದ ಬಂಧನದ ಗಡಿಯಲ್ಲ, ಮಡಿ ಮಡಿಯಾದ ಕಟ್ಟಳೆಯ ಗುಡಿಯಲ್ಲ; ಬದಲಾಗಿ ಪ್ರೀತಿ ಮಾಗುವುದು, ಬಾಗುವುದು ಖಾಯಿಲೆ ಬೀಳದ ಪಕ್ವ ಮನಸಿನ ಸುಂಕವಿಲ್ಲದ ಕಾಳಜಿಯ ಕುಡಿಯಲ್ಲಿ...
#ವಿಪರೀತದ_ಸತ್ಯ..
↻↢↯↯↣↺
ಬಾಗುವಿಕೆಯ ಬಲದ ಮೇಲಲ್ಲವಾ ಬಂಧದ ಬಾಳಿಕೆ...
#ನಾನು...
↻↢↯↯↣↺
ಮೌನವ ಸಲಹಿಕೊಳ್ಳಲರಿಯದ ಮನಸು ಸುಖಾಸುಮ್ಮನೆ ಮಗುಚಿಬಿದ್ದರೆ ಮಾತಿಗೆ ಉಗ್ಗು ರೋಗ............... ಕಷ್ಟ ಕಷ್ಟ....... ಎಷ್ಟಂತ ಸುಳ್ಳು ಸುಳ್ಳೇ ನಗುವುದು............ ಎಲ್ಲಿಯೂ ಸಲ್ಲದ...... ಯಾರೂ ಒಲ್ಲದ....... ವಿಕ್ಷಿಪ್ತ ಅಸ್ತಿತ್ವ............... ದಾಟಿ ಬಂದ ಹಾದಿಯ ತುಂಬಾ ನೋಡನೋಡುತ್ತಾ ಮುರಿದುಬಿದ್ದ ಒಂದೊಂದೇ ಒಂದೊಂದೇ ಮೆಟ್ಟಿಲು.................... ಕೊನೆಗುಳಿದದ್ದು ಅಸ್ವಸ್ಥ ಉಸಿರೊಂದೇ......
#ನಾನು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:
Post a Comment