ಪ್ರೇಮದ ಘೋರಿಯ ಮೇಲೆ ಕುಳಿತು.....
ಪ್ರೇಮ - 'ಮನದ ಯಾವುದೋ ಒಂದು ಮೂಲೆಯಲ್ಲಿ ಗೊತ್ತೇ ಆಗದೆ ಹುಟ್ಟಿ, ಅಷ್ಟೇ ನಿಶ್ಯಬ್ದವಾಗಿ ಸತ್ತೂ ಹೋಗಬಹುದಾದ ಮಧುರ ಭಾವ...'
ಪ್ರೇಮ - 'ಸಂಪೂರ್ಣ ಅಭಿವ್ಯಕ್ತಿಸಲಾಗದ ಅವ್ಯಕ್ತ ಭಾವಗಳ ಗೊಂಚಲು...'
ಪ್ರೇಮ - ಅದು ನನ್ನಲ್ಲಿ ಹುಟ್ಟಿದ ಭಾವ ಬಿಂದು ಯಾವುದು ?
ಸತ್ತ ಕಾರಣವೇನು ?
ಉತ್ತರ ಸಿಗದ ಪ್ರಶ್ನೆಗಳಿಗೆ ಸಿಲುಕಿ ಬಳಲಿ ಹೋಗಿದ್ದೇನೆ.
ಸತ್ತ ಪ್ರೇಮ ಉಳಿಸಿ ಹೋದ ಸ್ತಬ್ಧತೆಯಿಂದ ಆಚೆ ಬರಲಿ ಹೇಗೆ...?
ಒಮ್ಮೊಮ್ಮೆ ಆಸೆ ಆಗುತ್ತೆ...
ಮನಸಾರೆ ಬಿಕ್ಕಳಿಸಬೇಕೆಂದು - ಪ್ರೇಮದ ನಿಶೆಯೆಲ್ಲ ಇಳಿದುಹೋಗುವಂತೆ...
ಮನದ ಭಾವಗಳನೆಲ್ಲ ಆಚೆಸುರಿದು ಮಾತಾಗಬೇಕೆಂದು...
ಮತ್ತೆ ನಗಬೇಕೆಂದು - ಜಗದ ನಗುವೆಲ್ಲ ನನ್ನೊಬ್ಬನದೇ ಎನುವಂತೆ...
ಒಮ್ಮೊಮ್ಮೆ ಹೀಗೂ ಅನ್ನಿಸತ್ತೆ...
ಈ ಸಮಾಜದ ಮಿತಿಗಳನೆಲ್ಲ ಮೀರಬೇಕೆಂದು...
ಸೂಳೆ ಮನೆಯಲ್ಲಾದರೂ ಸರಿ ಗಂಡಸಾಗಬೇಕೆಂದು...
ಒಂದಿಷ್ಟು ಕೆಟ್ಟವನಾಗಬೇಕೆಂದು...
ಎಲ್ಲಕ್ಕಿಂತ ತೀವ್ರವಾಗಿ ಆಸೆ ಆಗ್ತಿದೆ...
ಮತ್ತೆ ಬದುಕಬೇಕೆಂದು - "ನಾನಾಗಿ ನಾನು"
ಕೇವಲ
"ನನಗಾಗಿ ನಾನು"
ಎದೆಯಂಗಳ ಖಾಲಿಯಿದೆ. ಅಲ್ಲ ಮತ್ತೆ ಖಾಲಿಯಾಗಿದೆ.
ಕನಸ ಗಿಡ ನೆಡ ಬಯಸುವವರು ಸಂಪರ್ಕಿಸಬಹುದು...