Tuesday, March 31, 2015

ಗೊಂಚಲು - ನೂರು + ಐವತ್ತು.....

ಹಗಲು - ಇರುಳು - ಶುಭದ ಆಶಯ.....J

ಮತ್ತೊಂದು ಖಾಲಿ ಬೆಳಗು...
ನಗೆಯ ಚಿತ್ತಾರ ಬಿಡಿಸಿಕೊಳ್ಳ ಹೊರಟ ಕೈಗಳು ಸೋಲದಿರಲಿ...
ಶುಭದಿನ... J

ಕನಸುಗಳ ಕಸುವ ಕಸಿಯುವ ಕ್ಷುದ್ರ ನೆನಪುಗಳು - 
ಕೊರಳ ತಬ್ಬುವ ಬೆಳದಿಂಗಳ ತೋಳು ಈ ಕ್ಷಣದ ಭರವಸೆ - 
ತಂಗಾಳಿಯೊಂದಿಗೆ ಬೆರೆತು ಹೋದ ನಿಟ್ಟುಸಿರು - 
ತಾರೆಗಳಿಗೆ ಕಂಡದ್ದು ನನ್ನ ನಗು ಮಾತ್ರ...
ಶುಭರಾತ್ರಿ...J

ಶುಭಾಶುಭಗಳ ಮೀರಿ ನಗುವುದು ಬೆಳಗು - ಎದೆಯ ಕಣ್ಣು ತೆರೆದಿರುವಾಗ...
ಶುಭದಿನ...J

ನಿದಿರಮ್ಮ ತಾನು ನಮ್ಮ ಕಣ್ಣ ತೊಟ್ಟಿಲಲಿ ಕನಸುಗಳ ತೂಗಿ ಲಾಲಿ ಹಾಡಲಿ - ಇರಳಲೂ ಕಣ್ಣ ಬಯಲಲ್ಲಿ ಕಾಮನಬಿಲ್ಲು ಮೂಡಲಿ...
ಶುಭರಾತ್ರಿ....J

ನಾ ಆಶಿಸಿದ ಮಾತ್ರಕ್ಕೆ ಅಶುಭವೇನೂ ಕಳೆವುದಿಲ್ಲ...
ಶುಭಕೂ ಅಶುಭಕೂ ನನ್ನ ಮಾತಿನ ಹಂಗೇನೂ ಇಲ್ಲ...
ಆದರೂ ಶುಭವನೇ ಕೋರುತ್ತೇನೆ - ಮನದ ಭಾವದಂತೆ...
ಶುಭವೇ ತಾನೆ; ಪ್ರತೀ ಹಗಲಲೂ ನನ್ನಿರುವಿಕೆಯ ಸಂದೇಶ ನಿಮ್ಮನೂ, ನಿಮ್ಮೊಳಗಿನ ನನ್ನ ನೆನಪಿನ ನಗುವೊಂದು ನನ್ನನೂ ತಲುಪುವುದು...
ಇದಕಿಂತ ಸಾರ್ಥಕ್ಯವೇನಿದೆ ಶುಭೋದಯ, ಶುಭದಿನ, ಶುಭರಾತ್ರಿ ಎಂಬ ಸಂದೇಶಗಳಿಗೆ...
ಶುಭದಿನ...J

4 comments: