Wednesday, December 14, 2011

ಗೊಂಚಲು - ಇಪ್ಪತ್ನಾಕು...



ಸೋನೆ ಮಳೆಯಲಿ
ಒಂದೆ ಕೊಡೆಯಡಿಯಲಿ
ಇಬ್ಬರೂ ನಡೆಯಬೇಕು...

ಕೊಡೆಯೂ ಇರಬೇಕು
ತೋಯಲೂ ಬೇಕು...

ತೋಯ್ದ ದೇಹ ತಣ್ಣಗೆ
ಒದ್ದೆ ಮನಸಲ್ಲಿ ಭಾವಗಳು ಬೆಚ್ಚಗೆ...

ನಮ್ಮಿಬ್ಬರ ಹುಚ್ಚಿಗೆ
ನಡುವೆ ಹಬ್ಬಿರುವ
ಒಲವೊಂದೆ ನೆಚ್ಚಿಗೆ...