Wednesday, December 14, 2011

ಗೊಂಚಲು - ಇಪ್ಪತ್ನಾಕು...



ಸೋನೆ ಮಳೆಯಲಿ
ಒಂದೆ ಕೊಡೆಯಡಿಯಲಿ
ಇಬ್ಬರೂ ನಡೆಯಬೇಕು...

ಕೊಡೆಯೂ ಇರಬೇಕು
ತೋಯಲೂ ಬೇಕು...

ತೋಯ್ದ ದೇಹ ತಣ್ಣಗೆ
ಒದ್ದೆ ಮನಸಲ್ಲಿ ಭಾವಗಳು ಬೆಚ್ಚಗೆ...

ನಮ್ಮಿಬ್ಬರ ಹುಚ್ಚಿಗೆ
ನಡುವೆ ಹಬ್ಬಿರುವ
ಒಲವೊಂದೆ ನೆಚ್ಚಿಗೆ...

13 comments:

  1. ಮಳೆ ಹಾಗೂ ಮಳೆಯ ನೆನಪು ಎರಡೂ ಮೊಳಕೆಯೊಡಿಸುತ್ತವೆ ಭಾವ ಬೀಜಗಳ..
    ಕನಸ ಬೇರುಗಳಿಗೆ ಮಳೆಯ ಪ್ರೇಮದ ಕಾವು...

    ಕೊಡೆ ಹಿಡಿದು ತೋಯ್ವ ಖುಷಿ ನಿನಗೂ ಸಿಕ್ಕಲಿ... ನಿನ್ನ ಬರಹಕ್ಕೆ ದಕ್ಕಿದಂತೆ..

    ReplyDelete
  2. ಚನ್ನಾಗಿದೆ.. ಎಂದಷ್ಟೆ ಹೇಳಬಲ್ಲೆ..

    ReplyDelete
  3. ತು೦ಬಾ ಚನ್ನಾಗಿದೆ..ಪ್ರೀತಿಗೂ ಹಾಗು ಮಳೆಗು ಅದೇನೊ ಒ೦ದು ರೀತಿಯ ಅವಿನಾಭಾವ ಸ೦ಬ೦ಧವಿದೆ.

    ReplyDelete
  4. ಸೋನೆ ಮಳೆಯಲಿ
    ಒಂದೆ ಕೊಡೆಯಡಿಯಲಿ
    ಇಬ್ಬರೂ ನಡೆಯಬೇಕು...

    ಕೊಡೆಯೂ ಇರಬೇಕು
    ತೋಯಲೂ ಬೇಕು...

    ತೋಯ್ದ ದೇಹ ತಣ್ಣಗೆ
    ಒದ್ದೆ ಮನಸಲ್ಲಿ ಭಾವಗಳು ಬೆಚ್ಚಗೆ...

    ನಮ್ಮಿಬ್ಬರ ಹುಚ್ಚಿಗೆ
    ನಡುವೆ ಹಬ್ಬಿರುವ
    ಒಲವೊಂದೆ ನೆಚ್ಚಿಗೆ...

    ಪದೇ ಪದೇ ಓದಿ ಖುಷಿ ಪಡೋದನ್ ಬಿಟ್ರೆ ಮತ್ತೇನೂ
    ತೋಚ್ತಾ ಇಲ್ಲೆ.......
    ಭಾವಗಳು ಹೃದಯಕ್ಕೆ ಹಬ್ಬಿ ಬಿಟ್ಟಿವೆ....

    ReplyDelete
  5. ನಿಮ್ಮ ಸುಂದರ ಸಾಲುಗಳನ್ನು ಓದಿದಾಗ ಬೆಚ್ಚನೆಯ ಭಾವಗಳು ಓದುಗನ ಮನಸ್ಸಲ್ಲೂ ಇಳಿಯುತ್ತದೆ....ಚೆನ್ನಾಗಿದೆ..

    ReplyDelete
  6. ಕೊಡೆಯು ಇರಬೇಕು
    ತೋಯಲು ಬೇಕು...
    ನಿಮ್ಮ ಭಾವ ಗೊಂಚಲುಗಳ ಮಳೆಯಲ್ಲಿ ತೋಯಲು ಇಷ್ಟ.. ಕೊಡೆಯೇ ಬೇಡಾ ...

    ReplyDelete
  7. ಚೊಲೊ ಇದೆ ...ಓದ್ತಾ ಇದ್ರೆ ಏನೋ ಒಂದ್ರೀತಿ ಬೆಚ್ಚಗಿನ ಅನುಭವ ಆಗ್ತು !!!! ಅನುಭವ ಇದ್ದ ???

    ReplyDelete
  8. This comment has been removed by the author.

    ReplyDelete
  9. ತಣ್ಣಗಿನ ದೇಹದಲ್ಲಿ ಬೆಚ್ಚನೆಯ ಭಾವ ಅದಕೆ ಒಲವಿನಾ ನೆಚ್ಚಿಗೆ ತುಂಬಾ ಚನ್ನಾಗಿದೆ

    ReplyDelete