Saturday, July 3, 2021

ಗೊಂಚಲು - ಮುನ್ನೂರೆಪ್ಪತ್ತೈದು.....

ನಗು ನೀ ವಸಂತವೇ - ನಗುವೇ ವಸಂತವೇ.....
ಕುಂಚ ಕಲೆ: ಸುಮತಿ ದೀಪಾ ಹೆಗಡೆ...


ಅವಧಿ ಮುಗಿದ ಔಷಧಿ - ನನ್ನ ಪ್ರೀತಿ...

"ನೀನು ಒಲವಿನ ಕಾವ್ಯನಾಮವಂತೆ..."

ನನ್ನ ಸೋಲಿನ ಗೆಲುವು ಮತ್ತು ಖುಷಿ ನೀನು...
___ ಹೆಸರಿಲ್ಲದ ಕನಸು...

ನಂಗೆ ನಾನೇ ಚಂದ ಕಾಣ್ಸೋ ಹಂಗೆ ಕಡು ಪ್ರೀತಿಯ ಕುಡಿದಮಲಿನ ನಿದ್ದೆ ಮರುಳ ಒದ್ದೊದ್ದೆ ಗರಿಕೆಯಂಥ ಕಣ್ಣಲ್ಲಿ ಮುದ್ದಾಗಿ ನನ್ನ ಮೆಲ್ಲುವ ನೀನು...
____ ಹೆಸರಿಲ್ಲದ ಸಹಿಯಂಥ ಹುಡಿ ಹುಡಿ ಕನಸು...

ಹಲ್ಮೊಟ್ಟೆ ಕಚ್ಚಿ ತುಟಿ ಬಿಗಿದು ನಾಲಿಗೆಯ ಬಂಧಿಸಿಕೊಂಡವಳ ಕಣ್ಣ ಕೊಳದ ಅಲೆಗಳು ಪಿಸುದನಿಯಲಿ ಉಸುರುವ ನೂರಾರು ಕಥೆಗಳ ದುರಂತ ನಾಯಕ ನಾನು...
_____ ಮರುದನಿ ಇಲ್ಲದ ನಿರ್ವಾತ...

ನಿಸ್ತೇಜ ಎದೆ ದಡವನ(ನೊ)ಪ್ಪಿದ ಜೀವ ಶರಧಿ ನೀನು...

ಮುಂಗಾರಿನ ಮುಗಿಲ ದಿಬ್ಬಣ ಹಾಯ್ದು ನೆನೆದ ಕಾಡು ಹಾದಿ ನೀನು...
ಗಿಡದ ಎದೆಯ ನೀರಜ ಮೌನ ಹೂವಾಗಿ ಅರಳೋ ಕವಿತೆ...
____ ಕೇಳಬೇಕು ಹೇಳಲಾಗದ ಏನನ್ನೋ...

ನಾನಾಗಿಯೇ ಪೂರ್ಣವಲ್ಲದ, ನನಗೇ ಸ್ವಂತವಲ್ಲದ ನಾನು ಪೂರ್ಣ ನನ್ನವನಾಗು, ಕೇವಲ ನನ್ನವನಷ್ಟೇ ಆಗಿರು ಎಂಬ ನಿನ್ನ ಅಕಾರಣ ಪ್ರೀತಿಯ (?) ಸೌಮ್ಯ ಸ್ವಾಮ್ಯತೆಯ ಆಗ್ರಹಗಳೆದುರು ದಿಕ್ಕುಗಾಣದ ಕಬೋಜಿಯಾಗಿ ನಿಲ್ಲುತ್ತೇನೆ...
___ನಾನು, ನೀನು ಮತ್ತು ನೇಹ...

ಪೊರೆಯಲೂ ಆಗದ ತೊರೆಯಲೂ ಆಗದ ತೊದಲು ಭಾವಗಳು ನಿದ್ದೆ ಕೊಲ್ಲುತ್ತವೆ...
ನಿನ್ನ ಮೌನಕ್ಕೆ ಮಾತು ಬರುತ್ತದೆ ಸುಳ್ಳು ಮಂಪಿನ ಕನಸಲ್ಲಿ - ಮಡಿಲ ಬಿಸಿಯ ಕಂಪಿನ ನೆನಪು ನೆತ್ತಿ ಹತ್ತಿ ನಿದ್ದೆ ಸಾಯುತ್ತದೆ...
___ ಮತ್ತೆ ಎಲ್ಲ ಮುಂದುವರಿಯುತ್ತದೆ...

ಜೀವದ್ರವ್ಯವೇ -
ಸದಾ ಸರ್ವದಾ ನಗಬೇಕು - ನಗುತಲೇ ಇರಬೇಕು 'ನೀನು...' 
ನೋವ ಬೆಳೆವ ರಕ್ಕಸ ಕೋಟೆಗಳ ಕೆಡವಿ ನಿನಗಾಗಿ ನಗೆಯ ಹುಡುಕಿ ತರಬೇಕು - ನಗಿಸುತಿರಬೇಕು - ನಿನ್ನ ನಗುವಾಗಬೇಕು 'ನಾನು...'
ನೀನು ನೀನಾಗಿ ನಿನ್ನ ನಗುವ ಹಡೆವಂತೆ ನಾ ನಿನ್ನ ಸಹಚಾರಿಯಾಗಬೇಕು...
ನಿನ್ನ ನಗಿಸುವ ನೆಪದಿ ನಾನೂ ನಗಬೇಕು - ನನ್ನ ನಗೆಯ ಜಪದಿ ನೀನು ನಗೆಯುಣ್ಣಬೇಕು...
ಯೋಗಾಯೋಗಗಳ ಮೀರಿ ಸಹಯೋಗವ ಸಾಧಿಸಬೇಕು - ಜೀವ ಜೀವ ಜತೆಯಾಗಿ ನಗೆಯ ಜೀವಿಸಲುಬೇಕು...
____ ನಗು ನೀ ವಸಂತವೇ - ನಗುವೇ ವಸಂತವೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

 1. ನಿಮ್ಮ ಮಾತೃ ಭಾಷೆಯಲ್ಲಿ ಸಂವಹನ ಮಾಡುವ ಮೂಲಕ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಿ. ಈ ಪ್ರಯತ್ನದಲ್ಲಿ ನಿಮಗೆ ಸಹಾಯ ಮಾಡಲು ನಾವು ಆಪ್ ಒಂದನ್ನು ನಿರ್ಮಿಸಿದ್ದೇವೆ. ಮಾತೃ ಅಪ್ (Matr App) ಬಳಸಿ ನಿಮ್ಮ ಮಾತೃ ಭಾಷೆಯಲ್ಲಿ ಬರೆಯಿರಿ.
  https://play.google.com/store/apps/details?id=com.snapcommute.matr

  ನಿಮ್ಮ ಸ್ಥಳೀಯ ಭಾಷೆಯಲ್ಲಿ, ನಿಮ್ಮ ಕೈಬರಹದಲ್ಲಿ ಸಂದೇಶಗಳು, ಈಮೇಲ್‌ಗಳು, ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿನ ಸಂಭಾಷಣೆ ಮತ್ತು ನಿಮ್ಮ ಸ್ಮಾರ್ಟ್‌ಫೋನಿ‌ನಲ್ಲಿ ಸಾಂಪ್ರದಾಯಿಕ ಕೀಬೋರ್ಡ್‌ನೊಂದಿಗೆ ನೀವು ಮಾಡಬಹುದಾದ ಬಹುಮಟ್ಟಿಗೆ ಯಾವುದನ್ನೂ ಬರೆಯಲು ಮಾತೃ ಆಪ್ನಲ್ಲಿ ಸಾಧ್ಯವಿದೆ. ಯಾವುದೇ ಇಂಗ್ಲಿಷ್ ಕೀಬೋರ್ಡ್‌ನ ಯಾವುದೇ ಕ್ರಿಯಾತ್ಮಕತೆಯನ್ನು ಕಳೆದುಕೊಳ್ಳದೆ ನೀವು ಈ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.

  ಮಾತೃ ಆಪ್ ಪ್ರಸ್ತುತ ಹನ್ನೆರಡು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ, ಇದರಲ್ಲಿ ಅಸ್ಸಾಮೀಸ್, ಬಾಂಗ್ಲಾ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಸೇರಿವೆ. ಶೀಘ್ರದಲ್ಲೇ ಹೆಚ್ಚಿನ ಭಾಷೆಗಳ್ಳನ್ನು ಸೇರಿಸಲಾಗುವುದು.

  ಮಾತೃ ಆಪ್ ಸುಧಾರಿತ ಸಲಹೆ ಮತ್ತು ಸ್ವಯಂ-ತಿದ್ದುಪಡಿ ವೈಶಿಷ್ಟ್ಯಗಳನ್ನು ಹೊಂದಿದ್ದು, ನೀವು ಕೆಲವು ಅಕ್ಷರಗಳನ್ನು ಬರೆಯುವಾಗ ಅಥವಾ ಟೈಪ್ ಮಾಡುವಾಗ ಸಂಬಂಧಿತ ಸಲಹೆಗಳನ್ನು ನೀಡಲಾಗುವುದು.

  ಮಾತೃ ಆಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅದರ ಸರ್ವರ್‌ಗಳಲ್ಲಿ ವೈಯಕ್ತಿಕ ಮಾಹಿತಿ / ಡೇಟಾವನ್ನು ಸಂಗ್ರಹಿಸುವುದಿಲ್ಲ / ಉಳಿಸಿಕೊಳ್ಳುವುದಿಲ್ಲ. ನಮ್ಮ ಸರ್ವರ್‌ಗಳಿಗೆ ಯಾವುದೇ ಡೇಟಾವನ್ನು ಕಳುಹಿಸದೆ ಕೈಬರಹ ಗುರುತಿಸುವಿಕೆಯನ್ನು ಸಹ ನಡೆಸಲಾಗುತ್ತದೆ.

  ಭಾರತದಲ್ಲಿ ಸ್ಥಳೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸಲು ಮಾತೃ ಆಪನ್ನು ಹಾಕಿಕೊಳ್ಳಿ, ಬಳಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾರತೀಯ ಬೇರುಗಳನ್ನು ಸ್ಥಾಪಿಸಲು ನಿಮಗೆ ಸಹಾಯ ಮಾಡಲು ನಮಗೆ ಸಹಾಯ ಮಾಡಿ. ಇನ್ನು ಹಲವಾರು ಭಾರತೀಯ ಭಾಷೆಗಳ ಆಪ್ಗಳ್ಳನ್ನು ನಾವು ತಯಾರಿಸುತಿದ್ದೇವೆ, ವಿಶೇಷವಾಗಿ ಭಾಷಾ ಕಲಿಕೆಯ ವರ್ಗದಲ್ಲಿ. ನಮ್ಮ ಆಪನ್ನು ಇನ್ನಷ್ಟು ಸುಧಾರಿಸಲು ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ನೀಡಿ.

  ReplyDelete