"ಕನಸು ಕೊಳೆತ ನಾತ":~
ಒಂದು ಸುಂದರ ಬದುಕಿತ್ತು.
ಅಲ್ಲೊಂದಿಷ್ಟು ಚಂದನೆಯ ಕನಸುಗಳಿದ್ದವು...
ಬದುಕು -
ಬದುಕೆಂದರೆ ಅದೇ ತಾನೆ - ಗಿಜಿಗುಡುವ ಅನಿಶ್ಚಿತತೆಗಳ ಸಂತೆ.
ಅಂಥದೊಂದು ಅನಿಶ್ಚಿತ ಅವಘಡಕ್ಕೆ ಎದುರು ನಿಲ್ಲಲಾಗದೇ, ಬದುಕಿಗಾಗಿ - ಅಲ್ಲ ಕೇವಲ ಬದುಕಿರುವುದಕ್ಕಾಗಿ,
ಆ ಎಲ್ಲ ಕನಸುಗಳನ್ನೂ ಪ್ರಜ್ಞಾಪೂರ್ವಕವಾಗಿ ಕೊಂದೆ.
ಕೊಂದುದಲ್ಲದೇ ಮನದ ಮೂಲೆಯ ಆಳದಲ್ಲಿ ಹೂತುಬಿಟ್ಟೆ.
ಆದರೀಗ,
ಹೂತ ಕನಸುಗಳ ಕೊಳೆತ ನಾತ ಬರುತ್ತಿದೆ.
ಆಸೆಯೆಂಬ ನಾಯಿಗೆ ನಾಚಿಕೆಯೇ ಇಲ್ಲ.
ಸಮಾಧಿಯನ್ನೂ ಅದು ಬಿಡಲಾರದಲ್ಲ...!
ಸಮಾಧಿಯ ಹೊಟ್ಟೆಯ ಬಗೆಬಗೆದು ಕೊಳೆತು ಜೀರ್ಣವಾದ ಶವವ ಹೊರತೆಗೆದು ಅದರ ನಾತ ಜೀವವ ಹಿಂಡುವಂತೆ ಮಾಡಿ ನಗುವುದಲ್ಲ..!
ಮತ್ತೆ ಹೂಳಲೂ ಆಗದೆ, ಇತ್ತ ನಾತವ ಸಹಿಸಲೂ ಆಗದೆ ಮಿಡುಕಿ ಒದ್ದಾಡುತಿದೆ ನನ್ನ ಜೀವಾತ್ಮ.
ನಿನ್ನೆಗಳ ಭಗ್ನ ಕನಸುಗಳ ಘೋರಿಯ ಮೇಲೆ ಕುಳಿತು ನಾಳೆಗಳ ಭವ್ಯತೆಯ ಬಗೆಗೆ ಹಗಲ್ಗನಸುಗಳ ಕಾಣುತ್ತಾ ಇಂದನ್ನು ಹಾಗೇ ಸುಮ್ಮನೆ ತಳ್ಳಿಬಿಡುವುದೇ ಬದುಕಾಗಿ ಹೋಯಿತಾ..?
ಹೀಗೆ ಬದುಕಿರುವುದಕ್ಕೋಸ್ಕರ ಬದುಕಿರುವುದು ಅಷ್ಟೊಂದು ಅಗತ್ಯವಾ..?
ಇಂಥ ಬದುಕಿಗಿಂತಲೂ ಸಾವಿಗೇ ಒಂದು ಸೌಂದರ್ಯವಿದೆಯೇನೋ..!!!
ಆದರೆ - ನಂಗೆ
"ಸಾಯಲು ಮನಸಿಲ್ಲ..."

ReplyDeleteಹೀಗೆ ಬದುಕಿರುವುದಕ್ಕೋಸ್ಕರ ಬದುಕಿರುವುದು ಅಷ್ಟೊಂದು ಅಗತ್ಯವಾ..?
ಇಂಥ ಬದುಕಿಗಿಂತಲೂ ಸಾವಿಗೇ ಒಂದು ಸೌಂದರ್ಯವಿದೆಯೇನೋ..!!!
ಆದರೆ - ನಂಗೆ
"ಸಾಯಲು ಮನಸಿಲ್ಲ..."
stupid fellow.........
very nice article...
ಹೆಡ್ಡಿಂಗೇ ಏನೋ ಒಂಥರಾ ಚಞಂದದಲ್ಲಿ ಚಂದ.....
ಏನೋ ಹೇಳೋಕಿತ್ತು... ಆದ್ರೆ ಹೇಳಲ್ಲಾ.....
ಆಸೆಯೆಂಬ ನಾಯಿಗೆ ನಾಚಿಕೆಯೇ ಇಲ್ಲ..
ReplyDeleteಅದ್ಭುತ ಸಾಲುಗಳು..
ಸಾವಿಗಿಂತ ಬದುಕಿನಲ್ಲೇ ಸೌಂದರ್ಯವಿದೆ.. ಸಮಾಧಿಯ ಆಚೆ ಬಂದು ನೋಡಬೇಕು ಅಷ್ಟೇ