ಆಗಸದ ಚಂದ್ರಮ ಭುವಿಯ ಮುತ್ತಿಕ್ಕಲು ಬಾಗುವನಂತೆ...
ಹಸಿದ ಧರಣಿ ಬಾಯ್ಬಿರಿವುದಂತೆ...
ಆಸೆಯ ಶರಧಿ ಉಕ್ಕಿ ತನ್ನ ಮಿತಿಯ ಮೀರುವುದಂತೆ...
ಸಹಜ ಸಂದರ್ಭದಲ್ಲಿ ರತಿ ರಮ್ಯವಾದ ಪ್ರಕೃತಿಯೇ -
ಮುನಿದಾಗ,
ಅಟ್ಟಹಾಸದಿ ಜವರಾಯ ತನ್ನ ರಾಜ್ಯ ವಿಸ್ತರಿಸುವನಂತೆ...
ಆಗ -
ಊರು - ಕೇರಿಗಳೆಲ್ಲ ಬರೀ ಸ್ಮಶಾನದಂತೆ...
ಮುನಿದ ಪ್ರಕೃತಿ ಶಾಂತವಾಗಲಿ.
ಜಪಾನಿನ ಆ ನೆಲದಲ್ಲಿ ಚೈತನ್ಯ ಮತ್ತೆ ಚಿಗುರಲಿ.
ಅಳುವ ಕಡಲಲಿ ಮತ್ತೆ ತೇಲಿ ಬರಲಿ
ನಗೆಯ ಹಾಯಿ ದೋಣಿ...
ಹೂಂ... ನಂದೂ ಅದೇ ಆಶಯ.....
ReplyDeleteಅಳುವ ಕಡಲಲಿ ಮತ್ತೆ ತೇಲಿ ಬರಲಿ
ನಗೆಯ ಹಾಯಿ ದೋಣಿ...