Monday, August 22, 2011

ಗೊಂಚಲು - ಹತ್ತೊಂಬತ್ತು...

"ರಂಗ್ ದೇ ಬಸಂತಿ..."
ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸತ್ಯಾಗ್ರಹಿಗಳ ಜತೆಗೆ ಒಂದಿಡೀ ದಿನವನ್ನು ಜೀವಿಸಿದ್ದು ಮನಸಿಗೆ ಹೆಮ್ಮೆಯ ಭಾವವನ್ನು ಮೂಡಿಸಿದ್ದು ಸತ್ಯವೇ ಆದರೂ...
ನನಗೀಗಲೂ ಅನ್ನಿಸುತ್ತಿಲ್ಲ -
ನಾನು ದೇಶ ಸೇವೆ ಅಥವಾ ಸಮಾಜ ಸೇವೆಯಲ್ಲಿ ತೊಡಗಿಕೊಂಡೆನೆಂದು...


ಅನ್ನಿಸಿದ್ದಿಷ್ಟೇ -
ನಾನು - ನನ್ನ ನಾಳೆಗಳ ಒಳಿತಿಗಾಗಿ ನನ್ನ ಸುತ್ತಲಿನ ಪರಿಸರವನ್ನು ಶುದ್ಧವಾಗಿಸಿಕೊಳ್ಳಲೋಸುಗ ನನ್ನ ಇಂದಿನ ಒಂದಷ್ಟು ಘಂಟೆಗಳನ್ನು
ಸದ್ವಿನಿಯೋಗಪಡಿಸಿಕೊಂಡೆನೆಂದು.
ಅಲ್ಲಿ - 
ಅಣ್ಣಾ ಹಜಾರೆಯವರಂಥ ಅಷ್ಟೆಲ್ಲ ಹಿರಿಯ ಜೀವಗಳು ನಮ್ಮ ನಾಳೆಗಳಿಗಾಗಿ ಊಟ, ನಿದ್ದೆ ಬಿಟ್ಟು ಕೂತಿದ್ದಾರೆ.
ಬದುಕಿನ ಕೊನೆಯ ಘಟ್ಟದಲ್ಲಿರುವ ಅವರುಗಳ ನಾಳೆಗಳೆಂದರೆ ನಾವುಗಳೇ ತಾನೆ...!!!
ಅವರನ್ನು ಬೆಂಬಲಿಸಿ ಅವರ ಪರಿಶ್ರಮ ವಿಫಲವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಅಲ್ಲವಾ...!!!


ನಂಗೊತ್ತು - 
ನಮ್ಮ ನಿತ್ಯದ ಬದುಕಿನ ಜಂಜಡಗಳು ನಮಗೆ ನಿತ್ಯವೂ ಅವರೊಂದಿಗೆ ನೇರವಾಗಿ ಬೆರೆತಿರುವಷ್ಟು ಸಮಯ ಮತ್ತು ಅವಕಾಶ ಕೊಡಲಾರವು ಅಂತ.
ಆದರೂ,
ಎಲ್ಲ ಜಂಜಡಗಳ ನಡುವೆಯೇ ಒಂದಿಷ್ಟು ಸಮಯಾನ ಹೆಕ್ಕಿ ಸತ್ಯಾಗ್ರಹಿಗಳಿರುವಲ್ಲಿ ಹೋಗಿ 
ಅವರ ಜಯಘೋಷದೊಂದಿಗೆ ನಮ್ಮದೂ ದನಿ ಸೇರಿಸಿ 
ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಬಂದರೆ
ಉಪವಾಸದಿಂದ ಬಳಲಿದ ಆ ಜೀವಗಳಲ್ಲಿ ಒಂದಷ್ಟು ಚೈತನ್ಯ ಮೈಗೂಡೀತು...
ಗೆಲುವು ಸುಲಭಸಾಧ್ಯವಾದೀತು...ಅಲ್ಲವಾ...!!!


ಹೇಗಾದರಾಗಲಿ -
ನಮ್ಮ ನಮ್ಮ ಅವಕಾಶಗಳ ಪರಿಧಿಯಲ್ಲಿ
ನಮ್ಮ ನಮ್ಮ ಅರಿವಿನ ವ್ಯಾಪ್ತಿಯಲ್ಲಿ
ಯಾವುದೇ ರೀತಿಯಲ್ಲಾದರೂ
ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ
ಹೋರಾಟವನ್ನು ಬೆಂಬಲಿಸೋಣ...
ನಾಳೆಗಳನ್ನು ಚೆಂದವಾಗಿಸಿಕೊಳ್ಳವ ಕನಸಿಗೆ ಜೀವತುಂಬೋಣ...


ದಯವಿಟ್ಟು ಸತ್ಯಾಗ್ರಹವನ್ನು ಬೆಂಬಲಿಸಿ...
ವಿಶ್ವಾಸ ವೃದ್ಧಿಸಲಿ...

 ಜೈ ಹೋ...

5 comments:

 1. ಮತ್ತೊಂದು ರೀತಿಯ ಸ್ವಾತಂತ್ರ್ಯ ಸಂಗ್ರಾಮ........

  ಲೋಕಪಾಲಕರ ಹಸ್ತವೇ ತಾನೇ ತುಂಬಾ ದೊಡ್ಡದಿರೋದು.........

  ಹೂಂ.... ನಮ್ಮ ಕೈಲಾಗಿದ್ದನ್ನಾ ನಾನು ಮಾಡಲೇ ಬೇಕು......

  ReplyDelete
 2. ನಮಸ್ಕಾರ.
  ತಾವು ಯಾರೆಂದು ಗೊತ್ತಿಲ್ಲ. ನೀವು ನಿಮ್ಮ ಪ್ರೊಫೈಲ್’ಗೆ ಬಳಸಿದ ಚಿತ್ರಕ್ಕೆ Copyright ಇರುವುದಲ್ಲದೇ ಈ ಚಿತ್ರ ನನಗೆ ಸಂಬಂಧಪಟ್ಟವರೊಬ್ಬರ ಸ್ವಂತದ್ದಾಗಿದ್ದು ಈ ಚಿತ್ರವನ್ನು ನಾನು ಬಳಸಿಕೊಳ್ಳಲು ಈ ಚಿತ್ರದ ಮಾಲೀಕರ ಅನುಮತಿ ಪಡೆದುಕೊಂಡಿದ್ದೇನೆ. ಮಾಲೀಕರ ಅನುಮತಿಯಿಲ್ಲದೆ ಚಿತ್ರವನ್ನು ಬಳಸಬಾರದಾಗಿ ವಿನಂತಿ.

  ವಂದನೆಗಳೊಂದಿಗೆ,
  ಪ್ರೀತಿಯಿಂದ,
  -ಶಾಂತಲಾ ಭಂಡಿ

  ReplyDelete
 3. ನೀವು ಭ್ರಷ್ಟಾಚಾರದ ವಿರೋಧಿಗಳೆಂದು ತಿಳಿದು ಸಂತೋಷವಾಯಿತು. ಹಾಗೇ ಇನ್ನೊಬ್ಬರಿಗೆ ಸಂಬಂಧಿಸಿದ ಚಿತ್ರಗಳನ್ನು ಬಳಸುವುದನ್ನು ಬಿಟ್ಟರೆ ಇನ್ನೂ ಸಂತೋಷ! ಶಾಂತಲಾ ಭಂಡಿಯವರು ಮೇಲೆ ಉಲ್ಲೇಖಿಸಿದ owner ನಾನೇ ಆಗಿದ್ದು, ಉಳಿದಿದ್ದು ತಮಗೇ ಅರ್ಥವಾಗಿದೆಯೆಂದುಕೊೞುತ್ತೇನೆ!

  ReplyDelete
 4. ನಾನು ಬ್ಲಾಗ್ ಪ್ರಾರಂಭಿಸುವಾಗ Google Searchನಲ್ಲಿ ಸಿಕ್ಕ ಚಂದನೆಯ ಚಿತ್ರ ಅದು..ಅದನ್ನು ಹಾಗೇ ಬಳಸಿಕೊಂಡಿದ್ದೆ..Copyrightನ ಯಾವದೇ ಮಾಹಿತಿ ಅಲ್ಲಿ ಇರಲಿಲ್ಲ..Googleನಲ್ಲಿ ಸಿಗಬಹುದಾದ ಚಿತ್ರಗಳಿಗೆ Copyright ಇರುವ ಬಗ್ಗೆ ಗೊತ್ತಿರಲಿಲ್ಲ..ಯಾರದೇ ಹಕ್ಕುಗಳನ್ನು ಕದಿಯುವ ಉಮೇದಿ ಮತ್ತು ಅನಿವಾರ್ಯತೆ ನನಗಿಲ್ಲ..ಆದರೂ ಚಿತ್ರ ಬದಲಿಸಿದ್ದೇನೆ..
  ಚಿತ್ರ ನಿಮ್ಮದೇ ಆಗಿದ್ದಲ್ಲಿ ತುಂಬಾ ಚೆನ್ನಾಗಿದೆ..
  ಆದರೆ Googleನಂಥ ಸಾರ್ವಜನಿಕ ತಾಣಗಳಲ್ಲಿ Copyrightನ ವಿವರವಿಲ್ಲದೇ ಸಿಗದಂತೆ ನೋಡಿಕೊಂಡಲ್ಲಿ ಇನ್ಯಾರದೋ ಬಗ್ಗೆ ತಪ್ಪು ತಿಳುವಳಿಕೆ ಮೂಡುವುದು ತಪ್ಪಬಹುದು..
  ನಿಮ್ಮ ಭಾವಗಳಿಗೆ ನೋವುಂಟಾದಲ್ಲಿ ವಿಷಾದಿಸುತ್ತೇನೆ..
  ವಿಶ್ವಾಸ ವೃದ್ಧಿಸಲಿ..

  ReplyDelete
 5. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಹಾಗೇ ಚಿತ್ರವನ್ನು ತೆಗೆದಿದ್ದಕ್ಕೆ ಕೂಡ! ನಿಮಗೆ ತಿಳಿಯದೇ ಬಳಸಿದ್ದೀರೆಂದು ನನಗೂ ಮನವರಿಕೆಯಾಗಿದೆ. Copyright ಕಾನೂನು ತುಂಬಾ ವಿಸ್ತಾರವಾಗಿದ್ದು, ಅದನ್ನು ಹೆಸರಿಸಲೇ ಬೇಕೆಂಬ ನಿಯಮವಿಲ್ಲ. ಹಾಗಾಗಿ internet ನಲ್ಲಿ ಸಿಗುವ ಚಿತ್ರಗಳಿಗೆ copyright ಇರುವುದಿಲ್ಲವೆಂಬ ಭಾವನೆ ಸರಿಯಲ್ಲ. Images are, by default, copyrighted, even if they are not mentioned. Hence, one is not supposed to use it unless there is a specific permission from the concerned authority. It's a different story that even some advertisement companies steal the pictures from the internet, knowingly.

  ReplyDelete