Tuesday, August 13, 2013

ಗೊಂಚಲು - ಎಂಬತ್ತು ಮತ್ತೊಂದು.....

ಸೋತ ಮನದ ಮಾತು.....

ಕನಸುಗಳೆಲ್ಲಾ ಮೌನದೆ ಸುಖದಲಿರುವಾಗ
ಮಾತಿನ ಭಿಕ್ಷೆಗೆ ಹೊರಡುತ್ತೇನೆ – ನಾನು ಮನಸು...
ಭಿಕ್ಷೆಯೇನೋ ದಕ್ಕೀತು
ಅಷ್ಟೋ ಇಷ್ಟೋ,
ಇಲ್ಲ
ಪಾತ್ರೆಯೂ ತುಂಬೀತು
ಆಗೊಮ್ಮೆ ಈಗೊಮ್ಮೆ...
ಸಾವಿನ ಮನೇಲಿ
ದಾನ ಹೇರಳವಂತೆ...
ಆದರೂ
ಒಂದಿನಿತೂ ತಣಿಯದೀ ನನ್ನ ಕೆಟ್ಟ ಹಸಿವು...
ಕಾರಣವಿಷ್ಟೇ
‘ಮಾತು’ ನನ್ನ ‘ಅನ್ನ’
‘ಪಾತ್ರೆ’ ತುಂಬ ‘ಮೌನ...'

6 comments:

  1. This comment has been removed by the author.

    ReplyDelete
  2. kavana kalpane chanda chanda .... patreeyoo tumbeetu ommonne ... patre tumba mouna .. iveradoo ondakkondu vyatiriktavagillave ? .. atava avagavaga hotte tumbittu... eega tumbuttilla anno arthve ?

    ReplyDelete
  3. ಪ್ರವೀಣ್ ಜೀ -
    ಒಮ್ಮೊಮ್ಮೆ ಅಷ್ಟೋ ಇಷ್ಟೋ ಭಿಕ್ಷೆಯಾದರೆ ಇನ್ನೊಮ್ಮೆ ಪಾತ್ರೆ ತುಂಬ ಭಿಕ್ಷೆ... ಪಾತ್ರೆ ತುಂಬ ಭಿಕ್ಷೆ ಸಿಕ್ಕರೂ ಕೂಡ ನಾ ಅದರ ತಿನ್ನಲಾರೆ... ಕಾರಣ ನನ್ನ ಬಯಕೆಯ ಅನ್ನ 'ಮಾತು', ಪಾತ್ರೆ ತುಂಬಿದ ಭಿಕ್ಷೆ 'ಮೌನ'ದ್ದು ಎಂಬರ್ಥದಲ್ಲಿ ಬರೆದೆ ಅಷ್ಟೇ... ಅಲ್ಲಿಗೆ ನನ್ನ ಹಸಿವು ನಿರಂತರ... ಸತ್ತ ಕನಸುಗಳ (ಮೌನವಾದ) ಮನೆಯಲ್ಲಿ ಜೀವಂತಿಕೆಯ ಕನಸುಗಳ (ಮಾತಾಡೋ) ವ್ಯರ್ಥ ಹುಡುಕಾಟ...ಹೀಗೆ ಏನೇನೋ...:)

    ReplyDelete
  4. ಅಹಹಹ.. ಚೆನ್ನಾಗಿದೆ.

    (ನನಗೆ ಬಣ್ಣಗಳ ಮೇಲೇನೋ ಸ್ವಲ್ಪ ಅಸಹನೆ ಶ್ರೀವತ್ಸ, ))

    ReplyDelete
  5. ಇಷ್ಟವಾಯಿತು ಗೆಳೆಯ.

    ReplyDelete
  6. ಚಿಕ್ಕದಾದ ಚೊಕ್ಕದಾದ ಚಂದದ ಕವನ...........'ಮಾತಿನ ಭಿಕ್ಷೆಗೆ ಹೊರಟುಬಿಡುತ್ತೇನೆ' ತುಂಬಾ ಸುಂದರವಾದ ಸಾಲು:)

    ReplyDelete