ಮೌನದ ಮಾತು.....
ಮಧುರ ಹೊಟ್ಟೆಕಿಚ್ಚೊಂದು ಮೂಡಿತ್ತು ನಂಗೆ ನಿನ್ನೆಡೆಗೆ - ಮೌನ ನಂಗಿಷ್ಟ ಕಣೋ ಅಂತ ನೀನಂದಾಗ...
ಮಧುರ ಹೊಟ್ಟೆಕಿಚ್ಚೊಂದು ಮೂಡಿತ್ತು ನಂಗೆ ನಿನ್ನೆಡೆಗೆ - ಮೌನ ನಂಗಿಷ್ಟ ಕಣೋ ಅಂತ ನೀನಂದಾಗ...
ಯಾಕ್ ಗೊತ್ತಾ,
ಸಂತೆಯ ನಡುವೆ ಎಲ್ಲರೂ ಖುಷಿಯೂರಿನ ತುಂಡರಸರೇ..
ನಿನ್ನ ಗಾಢ ಮೌನದಲ್ಲಿಯೂ ನಿನ್ನಲ್ಲಿ ನಗುವಿದೆಯಾ..!!
ಮೌನದಲೂ ನಗುವಿರೋದು ಪ್ರಾಮಾಣಿಕವೇ ಆದಲ್ಲಿ ನಿನ್ನೀ ಬದುಕು ಭವ್ಯವೇ ಸರಿ...
ಸಾಧಿಸಬೇಕಿದೆ ಮೌನದಲೂ ನಗುವ ನಾನೂನು...
***
ಮೌನವೆಂದರೆ - ಹಲವಾರು ಭಾವಗಳ ಮೂಟೆ ಕಟ್ಟಿ ಮನಸ ಒಳಗಿಟ್ಟು ಅದರ ಸುತ್ತ ಒಂದು ಕಿಂಡಿಯನೂ ಇಡದೇ ನಾವೇ ಕಟ್ಟಿಕೊಂಡ ಗೋಡೆ... ಭಾವ ಝರಿಗೆ ಅಡ್ಡಲಾಗಿ ಕಟ್ಟಿಕೊಂಡ ಅಣೆಕಟ್ಟು...
ಮೌನವೆಂದರೆ - ಧ್ಯಾನವೂ ಹೌದಂತೆ... ಕೈವಲ್ಯ ಜ್ಞಾನದ ದಾರಿ... ಇದರ ಆಸೆ ಸಧ್ಯಕ್ಕೆ ನಂಗಿಲ್ಲ...
ಮೌನವೆಂದರೆ - ಸಾವು ಕೂಡ... ವಿನಾಕಾರಣದ ಮೌನದಿಂದಾಗಿಯೇ ಅದೆಷ್ಟೋ ಮಧುರ ಬಂಧಗಳು ಸದ್ದಿಲ್ಲದೆ ಸತ್ತದ್ದ ಕಂಡಿದ್ದೇನೆ...
ಅಂತೆಯೇ ಮೌನವೆಂದರೆ - ಅದಮ್ಯ ಪ್ರೀತಿಯೂ ಆಗಬಹುದಂತೆ... ಹೌದೋ ಅಲ್ಲವೋ ಗೊತ್ತಿಲ್ಲ... ಆದರೂ ಎಂಥ ಮೌನದ ಅಣೆಕಟ್ಟೂ ಪ್ರೀತಿ ಜಲದ ಒತ್ತಡಕ್ಕೆ ಒಡೆದು ಮಾತಾಗಿ ಧುಮ್ಮಿಕ್ಕೀತು ಎಂಬುದನ್ನ ನಂಬುತ್ತೇನೆ...
ಆ ನಂಬಿಕೆಯಿಂದಲೇ ಕಾಯುತ್ತಿದ್ದೇನೆ - ನಿನ್ನ ಮನದ ಬಾಗಿಲೆದುರು ಅಂಗೈಯಲ್ಲಿ ಪ್ರೀತಿ ಹಣತೆಯ ಹಚ್ಚಿಟ್ಟುಕೊಂಡು...
ನನ್ನುಸಿರ ಹಣತೆ ಆರುವ ಮುನ್ನ ನಕ್ಕು ಬಿಡು ಒಮ್ಮೆ ಮೌನವ ಮಾತಾಗಿಸಿ...
ಓ ಕಪ್ಪು ಹುಡುಗೀ....;)
***
ಒಲವೇ -
ನೀ ಇರುವಂತೆಯೇ ನಿನ್ನ ಸ್ನೇಹವ ಒಪ್ಪಿಕೊಳ್ಳುವ ಯತ್ನದಲ್ಲಿ ನಿನ್ನ ಮೌನವನೂ ಒಪ್ಪಿಕೊಂಡಾಯ್ತು...
ಆದರೂ ಮನದ ಮೂಲೆಯಲೊಂದು ಪುಟ್ಟ ನಿರೀಕ್ಷೆ : ಎಂದಿಗಾದರೂ - ನನ್ನೀ ಉಸಿರು ಮೌನವ ಅಪ್ಪುವುದರೊಳಗಾದರೂ - ನಿನ್ನ ಮೌನದ ಮೂಸೆಯೊಳಗೆ ಹುದುಗಿರೋ ನೋವೆಲ್ಲ ಕರಗಿ ಹಿತವಾದ ನಗುವೊಂದು ಈ ಬದುಕನಪ್ಪಿ ಮಾತಾಡಿಸೀತು...ನನ್ನ ನಿರೀಕ್ಷೆಯೆಂಬುದು ನನ್ನ ನಂಬಿಕೆ ಕೂಡ...

ನಿನ್ನ ಅಕ್ಷರಗಳಲ್ಲಿ ನನ್ನ ಭಾವವೂ ಅಡಗಿದೆಯಾ...ಅಥವಾ ನಾನೇ ಇದ್ದೇನಾ ? ಹುಡುಕುತ್ತಿದ್ದೇನೆ.. ಸಿಕ್ಕರೂ ಸಿಗದಂತಹ ಭಾವಗಳಿವು... ಇಷ್ಟವಾಯಿತು ಅನ್ನುವಕ್ಕಿಂತ ಹೆಚ್ಚೇನು ಹೇಳಲಿ... ? :)
ReplyDeletewow...super...
ReplyDeleteಬಿಡಿ ಹೂಗಳ ಸೇರಿಸಿ ಕಟ್ಟಿದ ಭಾವಗಳ ಮಲ್ಲಿಗೆ ದಂಡೆ ... :)
ReplyDeleteಪರಿಮಳದ ಪರಿ ಇಷ್ಟವಾಗುತ್ತೆ ...
ಮೌನ ಮಾತಾದಾಗ ಖುಷಿ ಪಡೋ ಮನದ ಭಾವಗಳನಿಲ್ಲಿ ಓದಿ ಖುಷಿ ಆಯ್ತು ...
ReplyDeleteಮೌನವ ಮುರಿದು ನಗು ಮೊಗವ ಹೊತ್ತು ಬಹು ಬೇಗ ಮಾತಾಡಲಿ ಆ ನಿನ್ನ ಕಪ್ಪು ಹುಡುಗಿ :)
ಚಂದದ ಮೌನ ನಂಗ್ಯಾಕೋ ತುಂಬಾ ಇಷ್ಟ ಆಯ್ತು
ತುಂಬಾ ಚಂದದ ಭಾವ ....ಮೌನದಲ್ಲಿ ಎಷ್ಟೊಂದು ಅರ್ಥ...
ReplyDeleteಸಖತ್ತಾಗಿದ್ದು ಶ್ರೀವತ್ಸಣ್ಣ ಮೌನ, ಮಾತುಗಳ ವಿಶ್ಲೇಷಣೆ.. ಅಂದಂಗೆ ಆ ಕಪ್ಪು ಹುಡುಗಿ ಯಾರು ?
ReplyDeleteಹಿಂದಿನ ತಿಂಗ್ಳು ನೀವು ಊರಿಗೆ ಹೋಗ್ಬಂದಿದ್ದರ ಹಿಂದಿನ ಕಾರಣ ಇದೇನಾ ? :P
ಈ ಮೌನ...
ReplyDeleteಭಾವವೇ ಬರಹವಾಗಿ ಬಂದಿದ್ದೋ ಇಲ್ಲಾ....
ಬರಹವನ್ನೇ ಭಾವವಾಗಿ ಬಿಂಬಿಸಿದ್ದೋ...
ಏನೇ ಆದರೂ ಏನೋ ಇರುವಂಥಹ ಬರಹ....
ಚಿಕ್ಕ ಚೊಕ್ಕ... ಚಂದ ಚಂದ.....