Sunday, August 25, 2013

ಗೊಂಚಲು - ಎಂಬತ್ತು ಮೇಲೆರಡು.....

ಅಲ್ಲಿ ಮಿಂದು - ಇಲ್ಲಿ ಮತ್ತೆ ನೆನೆದು.....

ಖುಷಿಗಳ ಎಲ್ಲೆಲ್ಲಿಂದಲೋ ಹೆಕ್ಕಿ ತಂದು ನಾ ನಡೆವ ದಾರಿಯುದ್ದಕೂ ಸುರಿದಿಟ್ಟು ನಗುವ ಬದುಕ ಕರುಣೆಗೆ ಶರಣು...
ಕಣ್ಣು ಹಾಯದ ತೀರದವರೆಗೂ ಉದ್ದಕೂ ಮೈಚಾಚಿ ಬಿದ್ದಿದೆ ಖುಷಿ ಖುಷಿ ಹಸುರಿನ ದಾರಿ...
ನಾ ನಡೆದಷ್ಟೂ - ನಾ ತುಂಬಿಕೊಂಡಷ್ಟೂ ನನ್ನದೇ...

ಕಾವೇರಮ್ಮನ ತವರೂರಲ್ಲಿ ಅವಳ ಪಾದಕ್ಕೆ ಹಣೆಯ ತಾಕಿಸಿ - ಅವಳ ಮಡಿಲ ಕಂಪಿಗೆ ಮೂಗರಳಿಸಿ - ತುಂತುರು ಮಳೆಯ ತಂಪಿಗೆ ಮೈಯೊಡ್ಡಿ - ಜಲಲ ಧಾರೆಯ ಗಾನದ ಇಂಪಿಗೆ ಕಿವಿಯಾಗಿ - ಹಸಿರ ಸೊಂಪಿಗೆ ಕಣ್ಣರಳಿಸಿ - ಮಂಜು ಹನಿಗಳಲಿ ಮಿಂದು - ಮೋಡಕೆ ಮುತ್ತಿಕ್ಕಿ ಬಂದ ಮನಸೀಗ ಹಗುರ ಹಗುರ...

ತಾಯಿ ಕಾವೇರಿಯ ತವರು - ಕಾಫಿ ನಾಡು - ಕೊಡವ ಸೀಮೆಯಲ್ಲಿ ಒಂದಿಡೀ ದಿನ ಅಲೆದು ಬಂದ ಖುಷಿ ನನ್ನದು...
ನನ್ನ ಖುಷಿಯ ನಿಮಗೂ ಹಂಚುವ ಬಯಕೆ ಕೂಡ ನನ್ನದೇ...
ನನ್ನ ಪುಟ್ಟ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ನಗುತಿರುವ ಆ ಊರ ಸೊಬಗ ಇಲ್ಲಿಷ್ಟು ನೀಡಿದ್ದೇನೆ... 
ನೋಡಿ ಸವಿಯುವ ಖುಷಿ ನಿಮ್ಮದಾಗಲಿ... :)

ಫೊಟೋ ತೆಗೀತೀರಾ....

ದಾರಿಯ ಸೊಬಗು...

ನಮ್ಮೊಳಗು ಬೆಳಗಲಿ...

ಚಿಗುರು...

ಇರ್ಪು ಜಲಪಾತದ ಸೊಬಗು...

ನನ್ನೊಂದಿಗೆ ಈ ಬಂಡೆ ಪಿಸುನುಡಿದ ಸಾಲುಗಳ ನಾನಿಲ್ಲಿ ಹೇಳಲಾರೆ...

ಏನ ಹೇಳಲಿ....

ಹಾಲ ಹೊಳೆಯಾ...

ಇರ್ಪು...

ಇರ್ಪು ಜಲಧಾರೆಯ ಸೊಬಗು...

ನೆನೆದ ತಿರುವು...

ಮಂಜು ಮಂಜು ದಾರಿ...

ಮರವ ತಬ್ಬಿದ ಹೂವ ಚೆಲುವು...

ಮೋಡಕು - ವಸುಧೆಗೂ ಒಲವು...

ಮೋಡವ ಚುಂಬಿಸುವಾಸೆ...

ನಾವು ಮೋಡಕಿಂತ ಎತ್ತರ - ಸ್ವಲ್ಪ ಕೆಳಗಿಳಿಯೋಣ ಕೈಗೇ ತಾಕೀತು...

ಬ್ರಹ್ಮಗಿರಿಯ ನೆತ್ತಿಯಿಂದ ಕಂಡ ಕಾವೇರಮ್ಮನ ತವರು ಮನೆ...

ಕಾವೇರಮ್ಮನಿಗೆ ಮಳೆಯ ಅಭ್ಯಂಜನ...

ಖಾಲಿ ಖಾಲಿ - ನಿನ್ನ ನೆನಪಾದ ನನ್ನ ಮನದಂತೆ...

ಅಬ್ಬೆಯ ಸೊಬಗು...

ಧುಮ್ಮಿಕ್ಕೋ ಅಬ್ಬೆ...

ಅವನ ತೆಕ್ಕೆಯ ಕಡೆಗೆ ಜೋರು ಜೋರು ನಡಿಗೆ...

ಹಾಗೆ ಸುಮ್ಮನೆ...

ಮತ್ತೆ ಅಬ್ಬೆ...

ಮರಗಳ ಮರೆಯಿಂದ ಅಬ್ಬೆ...

ಮುಚ್ಚಿದ ಬಾಗಿಲ ಹಿಂದೆ ಬುದ್ದನಿರುವನಂತೆ...
ದರ್ಶನವಾಗಲು - ತೆರೆಯಬೇಕು ನೀ
 ನಿನ್ನೊಳಗಣ  ಬಾಗಿಲು...

ಬಾರಿಸಬೇಕು ಅರಿವಿನ ಘಂಟೆಯ...

10 comments:

  1. ಚಿತ್ರಗಳು ಮತ್ತು ಬರಹಕ್ಕೆ ವಂದನೆಗಳು. ನಾವೇ ಅಲ್ಲಿ ಅಲೆದು ಬಂದಹಾಗಿದೆ....

    ReplyDelete
  2. noorentu talebisgala naduve nerigegattida haneyalli swalpa bigu kaledu niraala naguvannu bimbisuva intha prakratiyeduru summane sharanagati..

    :)

















    ReplyDelete
  3. ಒಳಗ ತೊಳೆದು ಬೆಳಗಿ ಬಾಗಿಲ ತೆರೆದು ದರ್ಶನವಿತ್ತ ನಿಸರ್ಗದ ಮಡಿಲಲ್ಲಿ ಕಳೆದ ಕ್ಷಣಗಳ ತುಂತುರು...

    ReplyDelete
  4. ಅದ್ಭುತವಾದ ಫೋಟೋಗಳು ಶ್ರೀವತ್ಸ... ಇ೦ತಹ ಅದ್ಭುತ ಚಿತ್ರಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು..

    ReplyDelete
  5. ವಾವ್ !!
    ಪ್ರಕೃತಿಯ ಮಡಿಲಲ್ಲಿ ಮಗುವಾಗಿ ದಿನವೊಂದ ಕಳೆದ ಖುಷಿ :)

    ಆ ಖುಷಿಯ ಸೊಬಗನ್ನ ನಮ್ಮಗಳಿಗೂ ತೋರಿಸಿದ್ದು ಮತ್ತಷ್ಟು ಖುಷಿ :)

    ಖಾಲಿ ಬೆಂಚಿನ ಆ ಚಿತ್ರವ್ಯಾಕೋ ತುಂಬಾ ಇಷ್ಟ ಆಯ್ತು .

    ReplyDelete
  6. Superb.. ನಾವು ಹೋಗಿದ್ಯ ಕೊಡಗಿಗೆ.. ಆದ್ರೆ ಅದ್ರ ಬಗ್ಗೆ ಬರೆಯಕ್ಕಾಗಿರ್ಲೆ.. ಚೆನ್ನಾಗಿದೆ ಬರದ್ದಿ.. ನಾವು ಹೋದಾಗ ಇರ್ಪು ಜಲಪಾತಕ್ಕೆ ಹೋಗಿರ್ಲೆ.. ಆದ್ರೆ ಅದ್ರ ಬದ್ಲು ದಬಾರೆ, ಚಕ್ಲಿ ಹೊಳೆ ಡ್ಯಾಂ.. ಹೀಗೆ ಬೇರೆ ಜಾಗಕ್ಕೆ ಹೋಗಿದ್ಯ.. :-)

    ReplyDelete
  7. ವಾಹ್..ಸುಂದರ ದೃಶ್ಯಾವಳಿ ಅದಕ್ಕೆ ತಕ್ಕ ಅಕ್ಷರದ ಸಾಲುಗಳು.

    ReplyDelete