ಅಲ್ಲಲ್ಲಿ ಹೇಳಿದ್ದು.....
(ಯಾರಿಗೆ ಮತ್ತು ಯಾವಾಗ ಅಂತ ಕೇಳಬೇಡಿ...)
ಕನಸಿನೂರಿಗೂ ನಿನ್ನ ಕನಸಿನಾಸೆ ಮೂಡುವಂತೆ ನಗುತಲಿರು ನನ ಗೆಳತಿ...
@@@
ನಿದ್ದೆ ಮಡಿಲಿಂದ ಎದ್ದು ಮೈಮುರಿದು ಯಾವುದೋ ಸವಿಗನಸು ನೆನಪಾದವಳಂತೆ ಸುಮ್ಮನೇ ಹಿತವಾಗಿ ನಗುತಿದ್ದ ನಿನ್ನ ಮುಂಗುರುಳ ತಾಕಿ ಬಂದೆ ಅಂತಂದ ರವಿ ಕಿರಣದ ಮೇಲೆ ನಂಗೆ ಸಿಟ್ಟು, ಹೊಟ್ಟೆಕಿಚ್ಚು ಮತ್ತು ಪ್ರೀತಿ ಒಟ್ಟೊಟ್ಟಿಗೇ ಮೂಡಿ ಒಂಥರಾ ರೋಮಾಂಚನ ಕಣೇ...;)
@@@
ಅಷ್ಟು ದೊಡ್ಡ ಕಲೆಯಿದ್ದೂ ಚಂದಕ್ಕೆ ಮತ್ತೊಂದು ಹೆಸರು ಚಂದ್ರಮ...
ಚಂದ ಅವನಲ್ಲ ಅವನ ತಂಪು ತಂಪು ಬೆಳದಿಂಗಳು...
ನಾನೂ ಅವನಂತಾಗಬೇಕಿತ್ತು; ವ್ಯಕ್ತಿತ್ವದ ಬೆಳಕಿಂದ ಬೆಳಗಬೇಕಿತ್ತು...
ಆದರಿದು ನನ್ನ ಮಟ್ಟಿಗೆ ಬರೀ ಬಯಕೆ ಅಷ್ಟೇ...
ಅಲ್ಲಿ ನೀನು ಆ ದಾರೀಲಿ ನಾಕು ಹೆಜ್ಜೆ ನಡೆದಾಗಿದೆ ಅಂತ ಸುದ್ದಿ ಬಂತು...
ಇಲ್ಲಿ, ಗೆಳೆಯನೆಂಬ ಹೆಮ್ಮೆಯ ಭಾವ ಎದೆಯ ತುಂಬಿ ನನ್ನದೇ ಬಯಕೆ ತೀರಿದಷ್ಟು ಅವ್ಯಕ್ತ ಖುಷಿ ನನ್ನಲ್ಲಿ......
@@@
ಎಲ್ಲಿಂದ ಎಲ್ಲಿಗೋ ಬೆಸೆದುಕೊಂಡು ಕೊರಳೆತ್ತಿ ಹಾಡುವ ಈ ಭಾವ ಬಂಧಗಳು ನೀಡುವ ಆತ್ಮೀಕ ಖುಷಿಗಳು ಈ ಬದುಕನ್ನು ಅದೆಷ್ಟು ಚಂದಗೆ ಶೃಂಗರಿಸುತ್ತವೆ ಅಂದರೆ ಅಂಥ ಬಂಧಗಳೆದುರು ಅರಿವೇ ಇಲ್ಲದೆ ಮನಸು ಹಕ್ಕಿ ಹಕ್ಕಿ...
ತಾರೆ, ಚಂದಿರರು ಕಾಣದ ಗಾಢ ಕತ್ತಲಲೂ ಆ ಜೀವಗಳ ಸ್ನೇಹದ ಬೆಳಕೇ ದಾರಿ ತೋರಿಬಿಡುತ್ತೆ...
ಅಂಥ ಬಂಧಗಳಿಗೆ ಋಣಿ...
@@@
ಗೆಳತೀ -
ಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಒಂದು ನಗೆಯ ಕ್ಷಣದ ನೆನಪು ಸಾಕು ಸಾವಿರ ನೋವುಗಳ ಮರೆತು ಹಗುರಾಗಲು...
ನಕ್ಕು ಬಿಡು ಮಗುವಂತೆ... ನಿಶ್ಚಿಂತೆಯಿಂದ - ಎಲ್ಲಾ ಒಳಿತೇ ಆಗುವುದೆಂಬ ಭರವಸೆಯಲ್ಲಿ...
ಒಳಿತು ಪ್ರತ್ಯಕ್ಷವಾಗಿ ದಕ್ಕುತ್ತೋ ಇಲ್ಲವೋ ಒಳಿತಿನ ಭರವಸೆಯ ನಗು ಈ ಕ್ಷಣವ ಬೆಳಗಿಸಿ ನಾಳೆಯೆಡೆಗೆ ಅಡಿಯಿಡಲು ಚೈತನ್ಯವನ್ನಂತೂ ಕೊಟ್ಟೇ ಕೊಡುತ್ತೆ...

ಭಾಷೆಯೆಂದರೆ ಬರೀ ಮಾತಲ್ಲ – ಮಾಧ್ಯಮರೂಪಿ ಶಬ್ದಾಡಂಬರವೂ ಅಲ್ಲ...
ಶಬ್ದದ ಹಿಂದಿನ ಭಾವ...
ಹೇಳಿದ್ದರ ಹಿಂದಿರುವ ಹೇಳದೇ ಉಳಿದದ್ದು – ನಾಲಿಗೆ ಆಡದೆಯೂ ಮನಸಿಗೆ ಕೇಳಿದ್ದು ಮತ್ತು ಮನಸಲ್ಲಿ ಮರೆವಿರದೆ ಉಳಿದದ್ದು...

ಎಲ್ಲವೂ ಮುತ್ತು ರತ್ನಗಳು ..
ReplyDeleteಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಒಂದು ನಗೆಯ ಕ್ಷಣದ ನೆನಪು ಸಾಕು ಸಾವಿರ ನೋವುಗಳ ಮರೆತು ಹಗುರಾಗಲು...
ನಕ್ಕು ಬಿಡಿ ಮಗುವಂತೆ... ನಿಶ್ಚಿಂತೆಯಿಂದ - ಎಲ್ಲಾ ಒಳಿತೇ ಆಗುವುದೆಂಬ ಭರವಸೆಯಲ್ಲಿ...
ಇದು ನಾನು ಪಾಲಿಸಲೇಬೇಕಾದ ಜೀವನ ನಿಯಮ ... ಧನ್ಯವಾದಗಳು ಗೆಳೆಯಾ
ಅಷ್ಟು ದೊಡ್ಡ ಕಲೆಯಿದ್ದೂ ಚಂದಕ್ಕೆ ಮತ್ತೊಂದು ಹೆಸರು ಚಂದ್ರಮ...
ReplyDeleteಚಂದ ಅವನಲ್ಲ ಅವನ ತಂಪು ತಂಪು ಬೆಳದಿಂಗಳು...
ನಾನೂ ಅವನಂತಾಗಬೇಕಿತ್ತು; ವ್ಯಕ್ತಿತ್ವದ ಬೆಳಕಿಂದ ಬೆಳಗಬೇಕಿತ್ತು...
ಆದರಿದು ನನ್ನ ಮಟ್ಟಿಗೆ ಬರೀ ಬಯಕೆ ಅಷ್ಟೇ...
ಅಲ್ಲಿ ನೀನು ಆ ದಾರೀಲಿ ನಾಕು ಹೆಜ್ಜೆ ನಡೆದಾಗಿದೆ ಅಂತ ಸುದ್ದಿ ಬಂತು...
ಇಲ್ಲಿ, ಗೆಳೆಯನೆಂಬ ಹೆಮ್ಮೆಯ ಭಾವ ಎದೆಯ ತುಂಬಿ ನನ್ನದೇ ಬಯಕೆ ತೀರಿದಷ್ಟು ಅವ್ಯಕ್ತ ಖುಷಿ ನನ್ನಲ್ಲಿ......ishta aada salugalu
"ಒಳಿತು ಪ್ರತ್ಯಕ್ಷವಾಗಿ ದಕ್ಕುತ್ತೋ ಇಲ್ಲವೋ ಒಳಿತಿನ ಭರವಸೆಯ ನಗು ಈ ಕ್ಷಣವ ಬೆಳಗಿಸಿ ನಾಳೆಯೆಡೆಗೆ ಅಡಿಯಿಡಲು ಚೈತನ್ಯವನ್ನಂತೂ ಕೊಟ್ಟೇ ಕೊಡುತ್ತೆ"
ReplyDeleteಮನಸ್ಸಿನಲ್ಲಿ ನಾಟಿತು.
ಒಂತರಾ ಹೊಸ ಲೇಖನ ಅನುಸ್ತು .. still like it :)
ReplyDeleteThis comment has been removed by the author.
ReplyDeleteಅಂತರಾಳದ ಮಥನದಲ್ಲಿನ ಉದ್ಭಾವಗಳೇ....
ReplyDeleteಅನುಭವದ ಹಗ್ಗ ಹಿಡಿದೆಳೆದು ಕಡೆದವರ್ಯಾರೋ...
ಉದ್ಭವಿಸಿದ್ದಂತೂ ಹೌದು.... ಉದ್ಭವಿಸಿದ ಒಳಿತಿಗೆಲ್ಲಾ ಶಾಶ್ವತತೆಯನ್ನು ಕೊಡಲಿಕ್ಕಾಗಲಿಕ್ಕಿಲ್ಲ...
ಪ್ರಯತ್ನವಾದರೂ ಇರಿಸಿಕೊಳ್ಳುವಾ.....
ಮನಸ ಮರ್ಕಟನನ್ನು ಒಂದೇ ಮರ ಹತ್ತಿಸಿ ಕುಳ್ಳಿರಿಸಿದರೆ ಎಷ್ಟು ದಿನ ಕುಳಿತೀತು.....??
ಸುಂದರ ಸಾಲುಗಳು...
ReplyDeleteಗೆಳತೀ -
ಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಸಾಲು ತುಂಬಾ ಇಷ್ಟವಾಯಿತು
ಗೆಳತೀ -
ReplyDeleteಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಒಂದು ನಗೆಯ ಕ್ಷಣದ ನೆನಪು ಸಾಕು ಸಾವಿರ ನೋವುಗಳ ಮರೆತು ಹಗುರಾಗಲು...
ನಕ್ಕು ಬಿಡು ಮಗುವಂತೆ... ನಿಶ್ಚಿಂತೆಯಿಂದ - ಎಲ್ಲಾ ಒಳಿತೇ ಆಗುವುದೆಂಬ ಭರವಸೆಯಲ್ಲಿ...
ಒಳಿತು ಪ್ರತ್ಯಕ್ಷವಾಗಿ ದಕ್ಕುತ್ತೋ ಇಲ್ಲವೋ ಒಳಿತಿನ ಭರವಸೆಯ ನಗು ಈ ಕ್ಷಣವ ಬೆಳಗಿಸಿ ನಾಳೆಯೆಡೆಗೆ ಅಡಿಯಿಡಲು ಚೈತನ್ಯವನ್ನಂತೂ ಕೊಟ್ಟೇ ಕೊಡುತ್ತೆ...
Tumba ishta aatu... :)