ವಸುಂಧರೆಯ ಚೆಲುವಿಗೆ ಬೆರಗಾಗಿ.....
ಸಾಗರನ ಸಖ್ಯ ಬಯಸಿ – ಗಾಳಿಯಲೆಗಳ ಸೀಳಿ – ಲಾಸ್ಯವಾಡುವ ಹಕ್ಕಿ ರೆಕ್ಕೆಯಂತೆ ಇಲ್ಲೀಗ ನನ್ನ ಮನಸು...
ಮೋಡಕಿಂತ ಎತ್ತರ ನಾನೀಗ ಎಂಬ ಭ್ರಮೆಯಲ್ಲಿ ಮನಸಲ್ಲಿನ ಭಾವದಲೆಗಳು ಬೀಸು ಗಾಳಿಯೊಂದಿಗೆ ಜಿದ್ದಿಗೆ ಬಿದ್ದಿವೆ...
ಕೊಡಚಾದ್ರಿ ಗಿರಿಯ ನೆತ್ತಿಯ ಚುಂಬಿಸಿದ ಪಾದಗಳಲ್ಲಿ ದಾರಿ ತುಳಿದ ಆಯಾಸ – ಮನದಲ್ಲಿ ಮತ್ತೆ ಒಗ್ಗೂಡುತಿರುವ ಅಷ್ಟಿಷ್ಟು ಜೀವನ ವ್ಯಾಮೋಹ...
ಒಂದೆಡೆ ಬಯಲು – ಪಕ್ಕದಲ್ಲೇ ಹಸಿರ ಸಾಗರ – ಅಲ್ಲೊಂದು ಕೊಳ – ಇನ್ನೆಲ್ಲೋ ಒಂದು ಹಳ್ಳ – ಕಾಡೆಂದರೆ ಸಾಸಿರ ಸಾಸಿರ ಬೆರಗು ತುಂಬಿದ ಬಳ್ಳ...
ಹಕ್ಕಿಗಳ ಉಯಿಲು – ಜೀರುಂಡೆಗಳ ಗಿಜಿ ಗಿಜಿ – ಅಲ್ಲೆಲ್ಲೋ ಓಡಾಡೋ ಮೃಗಗಳ ಹೆಜ್ಜೆ ಸಪ್ಪಳ – ಸರಿದಾಡೋ ಸರಿಸೃಪಗಳ ಸರಬರ; ಅಷ್ಟೆಲ್ಲ ಸದ್ದುಗಳ ನಡುವೆಯೂ ನೆಲೆ ಕಂಡುಕೊಂಡ ಗವ್ವೆನ್ನೋ ಮೌನ...
ಕಾಂಕ್ರೀಟು ಕಾಡು ಸುಸ್ತೆನಿಸಿದಾಗಲೆಲ್ಲ ಆ ಹಸಿರು ಕಾಡು ಇನ್ನಿಲ್ಲದಂತೆ ಕಾಡಿ ತನ್ನ ಮಡಿಲಿಗೆ ನನ್ನ ಕರೆಯುತ್ತೆ...
ಆ ಕಾಡಲ್ಲಿ ಕಳೆದು ಹೋದಾಗಲೆಲ್ಲಾ ಮನಸಿಗೇನೋ ಬೆಳಗು ಮೂಡಿದ ಭಾವ...
ಮೊನ್ನೆ ದಿನ ನನ್ನದೇ ಆಪ್ತ ಬಳಗದೊಂದದಿಗೆ ಹೀಗೆ ಅಲೆದದ್ದು ಕೊಡಚಾದ್ರಿಯ ಕಾಡಲ್ಲಿ...
ಇಲ್ಲೊಂದಿಷ್ಟು ಛಾಯಾಚಿತ್ರಗಳಿವೆ – ನನ್ನ ಕ್ಯಾಮರಾ ಕಣ್ಣಲ್ಲಿ ತುಂಬಿ ತಂದ ಅಲ್ಲಿಯ ಸವಿನೆನಪುಗಳು...
ಶರಾವತಿಯ ಹಿನ್ನೀರು ಮತ್ತು ಕೊಡಚಾದ್ರಿಯ ಹಸಿರು ನಿಮ್ಮ ಕಣ್ಣನೂ ತುಂಬಲಿ...
ಸುಮ್ಮನೆ ನೋಡಿ ಅನುಭಾವಿಸಿ – ಆ ಏರಿಯಲ್ಲಿನ ನಮ್ಮ ಏದುಸಿರು, ಇಳಿದಾದ ಮೇಲಿನ ನಿಟ್ಟುಸಿರು ಎರಡೂ ನಿಮ್ಮನೂ ತಾಕೀತು...
|
ಶರಾವತಿ ಹಿನ್ನೀರು... |
|
ದಾರಿ ನಡುವೆ ಬಾಲ್ಯ ನೆನಪಾಗಿ... |
|
ಹಾಗೇ ಸುಮ್ಮನೆ... |
|
ಕಬ್ಬಿನ ಗದ್ದೆಗೆ ಪುಂಡರ ಹಿಂಡು...:) |
|
ಹಳ್ಳಿ ಹಾಡು... |
|
ಕಾಡ ನಡುವೆಯ ಸೊಬಗು ಹಿಡ್ಲುಮನೆ ಜಲಪಾತ... |
|
ಹನಿಗಳ ನರ್ತನ... |
|
ಏದುಸಿರ ಏರು ಹಾದಿ... |
|
ಹಸಿರ ಹಾಸಿನ ದಾರಿ... |
|
ಕೊಳದ ನೀರ ಹೀರಿ ಸುಸ್ತು ಮರೆವಾಗ... |
|
ಬಯಲು ದಾರಿ... |
|
ರವಿ ತಾನು ವಸುಂಧರೆಯ ವಕ್ಷೋಜಗಳ ನಡುವೆ ಮರೆಯಾಗೋ ಹೊತ್ತಿನ ನಾಚಿಕೆಯ ರಂಗು... |
|
ಬೆಳಗಾಗೋ ಹೊತ್ತು... |
|
ಸರ್ವಜ್ಞ ಪೀಠ... |
|
ಮೋಡಕೆ ಮುತ್ತಿಕ್ಕೋ ಗಿರಿಯ ಹಂಬಲವಾ – ಈ ಎತ್ತರ... |
|
ಹಸಿರ ಹಾಸಿಗೆ ಮೋಡದ ಹೊದಿಕೆ... |
|
ಕಾಲು ಜಾರಿದರೆ ಕೈಲಾಸ...:) |
|
ಕೊಡಚಾದ್ರಿಯ ನೆತ್ತಿಯ ಮೇಲಣ ಸರ್ವಜ್ಞ ಪೀಠದೆದುರು ನನ್ನ ಬಳಗದೊಂದಿಗೆ ನಾನು... |
|
ಇನ್ನೀಗ ಮುಕ್ತಾಯ ಸಮಯ...
ಆ ಹಸಿರ ಒಡಲಲ್ಲಿ, ಜಲಪಾತದ ತುಂತುರಿನಲ್ಲಿ, ಹಿನ್ನೀರ ಜಲರಾಶಿಯ ನಡುವಲೆಲ್ಲ ಓಡಾಡಲು ಜೊತೆಯಾದ, ನನ್ನ ಆ ಕಾಡು ಹಾದಿಯಲ್ಲಿ ಕೈಹಿಡಿದು ನಡೆದಾಡಿಸಿದ ನನ್ನ ಆಪ್ತ ಬಳಗದ ವಿನಾಕಾರಣದ ಪ್ರೀತಿಗೆ ನಾನು ಶರಣು...
|
soooopper.......................
ReplyDeleteSuperb pics Shri.... like It a lot... :-)
ReplyDelete108 ಓದಿದ ಮೇಲೆ ನನಗುೂ ಪ್ರವಾಸೋತ್ಸಾಹ ಮೂಡಿತು. ಚಿತ್ರಗಳೂ ಸೂಪರ್ರೂ.
ReplyDeletevery nice Pics :) liket it
ReplyDeleteಮನಸೆಳೆಯುವ ಛಾಯಾಚಿತ್ರಗಳು .....ಅದಕ್ಕೊಪ್ಪುವ ಅಡಿಬರಹಗಳು.....!!
ReplyDeletesooper..
ReplyDelete