ಮಳೆಯ ಮರಿ ಸಾಲುಗಳು.....
(ಮುಂಗಾರಿನಲಿ ನೆನೆವಾಗ ಚಿಗುರಿದ ಭಾವಗಳು...)
ಭ್ರಮೆಗಳ ಗೂಡಿಂದಾಚೆ ಬಂದು ಅರಿವಿನ ಹಾದಿಯ ಏರನೇರಬೇಕಿದೆ...
ಮೌನವೇ ಕಿರು ಬೆರಳ ಭರವಸೆಯಾದರೂ ಆಗು ಬಾ...
ತುಸು ದೂರ ನಗುವಿನಾಸೆಯಿದೆ...
@@@
ಗವ್ವೆನ್ನೋ ವಾಸ್ತವದ ಕ್ರುದ್ಧ ಕತ್ತಲು - ಕಂಗೆಡಿಸೋ ಚಿತ್ರ ವಿಚಿತ್ರ ತಿರುವುಗಳ ಹಾದಿ - ಎಲ್ಲಾ ಜಗಳ, ಜಂಜಡಗಳ ಆಚೆಯೂ ಬೆಸೆದ ಬೆರಳುಗಳ ಸಡಿಲಿಸದ ಸ್ನೇಹಗಳು - ಬದುಕಿದು ಎನ್ನದು ಸ್ನೇಹಾನುಬಂಧಗಳ ಕರುಣೆಯ ಕೈತುತ್ತು...❤ ❤
@@@
ನಿತ್ಯವೂ ಹೊಸ ಭಾವದಿ ಕಾಡುವ ಕನಸವಳು - ಕಪ್ಪು ಹುಡುಗಿ...
ನನ್ನ ಘೋರಿಯ ಮೇಲರಳೋ ನಿಂಬೆ ಹೂವಿಗೂ ಅವಳದೇ ಘಮವಿದ್ದೀತು...
@@@
ಮಳೆಯ ನಾಕು ಹನಿಗೆ ನೆತ್ತಿ ತೋಯಿಸಿಕೊಂಡೆ - ಎಷ್ಟೆಲ್ಲಾ ನೆನಪಿನ ಮರಿಗಳು ಚಿಂವ್ ಚಿಂವ್ ಅನ್ನುತಿವೆ ಎದೆಯಲ್ಲಿ...
ಆ ಕಾಡು - ಮುಗಿಯದ ಕರುಳ ತಿರುವಿನಂಥ ಹಾದಿಗಳು - ಅಲ್ಲಿನ ನಿರ್ಭೀತ ಮೌನ - ನನ್ನೊಳಗಿನ ಸಾವಿರ ಗದ್ದಲ - ಕೈ ಹಿಡಿದು ಜೊತೆ ಬರುತಿದ್ದ ಹುಚ್ಚು ಕನಸುಗಳು...
ಇಲ್ಲಿ, ಈ ಮಹಾ ನಗರದ ಇಕ್ಕಟ್ಟು ಬೀದಿಗಳಲ್ಲಿ ಮಳೆಯೂ ಬಂಜೆಯೇ ಅನ್ನಿಸುತ್ತದೆ...
@@@
ಆಯೀ -
ಬದುಕಿಗೊಂದು ಕಾರಣ ಬೇಕೆಂಬುದಾದರೆ ಮಮತೆಯ ನಿನ್ನೊಲವೇ ನನ್ನೀ ಬದುಕಿಗಿರೋ ಕೊನೆಯ ಉದ್ದೇಶ...❤
@@@
ಪ್ರಶ್ನೆಯಾಗುಳಿಯದ ಅಥವಾ ಪ್ರಶ್ನೆಯೇ ಹುಟ್ಟದ - ಎದುರಾದದ್ದನ್ನು ಎದುರಾದ ಹಾಗೆಯೇ ಎದೆ ತೆರೆದು ಅನುಭವಿಸಿ ಹಿತವಾಗಿ ನಕ್ಕು ಮುನ್ನಡೆಯಬಹುದಾದ ಕೆಲವಾದರೂ ಘಳಿಗೆಗಳು ದಕ್ಕಲಿ ಎಂಬಾಸೆ ಬದುಕಿಗೆ...
@@@
ನಿತ್ಯ ದಿಂಬಿನಂಚನು ತೋಯಿಸೋ ಕಣ್ಣ ಹನಿಗಳು ಈ ಬದುಕನು ನೀ ಆಳಿದ ಪಳೆಯುಳಿಕೆಯ ಕಥೆ ಹೇಳುತ್ತವೆ...
ಈ ಮಳೆಯ ರಾತ್ರಿಗಳಲ್ಲಿ ನಿದ್ದೆಯ ಕಾಡುವ ಹಾಸಿಗೆಯ ಹಸಿವಿನ ಉರಿಗೆ ನಿನ್ನ ನೆನಪು ತುಪ್ಪವ ಸುರಿಯುತ್ತದೆ...
ಹಗಲಿಗೆ ಆಗೀಗ ನಿನ್ನ ಮುಗುಳ್ನಗು ಜೊತೆಯಾದರೆ ಅಂದಿನ ಸಂಜೆಯ ತಂಪಿಗೆ ಸಾವಿರ ಬಣ್ಣ...
ಈ ಬದುಕಿಗೆ ಇದೀಗ ನೀನೆಂಬ ನೀನು ಮುಗಿದ ಮಹಾ ಸಂಭ್ರಮ ಮತ್ತು ಉಳಿದು ಹೋದ ವಿಚಿತ್ರ ತಳಮಳದ ಪ್ರಶ್ನೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ReplyDeleteನನ್ನ ಘೋರಿಯ ಮೇಲರಳೋ ನಿಂಬೆ ಹೂವಿಗೂ ಅವಳದೇ ಘಮವಿದ್ದೀತು...
ಹೆಂಗೆ ಬರೀತೆ ಮಾರಾಯ.. ಸೂಪರ್ರ್..
ಚಂದ......
ReplyDelete