ಹಗಲಿಗೂ - ಇರುಳಿಗೂ ಒಂದಿಷ್ಟು ಕನಸು.....
ಕಣ್ಣ ಹನಿಗಳನೆಲ್ಲ ಇರುಳ ಕಾವಳದ ಉರಿಗೆ ಸುರಿದು ಬತ್ತಿಸಿಬಿಟ್ಟಿದ್ದೇನೆ...
ಮನಸೀಗ ಖಾಲಿ ಖಜಾನೆ...
ಹೊಸ ಖುಷಿಗಳ ನಗೆ ಹೊನ್ನನು ಗೆದ್ದು ತುಂಬಿಕೊಳ್ಳಬೇಕಿದೆ ಈ ಹಗಲಿಗೆ...
ಶುಭದಿನ...
❤❤❤
ನಿದ್ದೆ ಇಲ್ಲದ ಕ್ಷುದ್ರ ರಾತ್ರಿಯಿಡೀ ನೆನಪುಗಳ ಕರಗೋತ್ಸವ -
ಮಾರನೇ ಹಗಲಿನ ಕನಸುಗಳ ತುಳಿಯದಿದ್ದರೆ ಅಷ್ಟೇ ಸಾಕು...
ಶುಭರಾತ್ರಿ...
❤❤❤
ಬೆಳಗೆಂದರೆ ಕನಸಿನ ಮರುಹುಟ್ಟು...
❤❤❤
ಹರಿದ ಸೀರೆಯ ತೊಟ್ಟಿಲಲೂ ಕೂಸು ಕುಪ್ಪಳಿಸುತ್ತದೆ ಕಿಲಕಿಲನೆ ನಲಿಯುತ್ತ...
ಚಂದ್ರ, ತಾರೆಗಳೆಲ್ಲ ಸೇವಕರು - ನಾಯಿ, ನರಿ, ಕಾಗೆ, ಗುಬ್ಬಿಯರೆಲ್ಲ ಬಂಧು ಬಳಗ...
ಇರುಳಿದು ಅಮ್ಮನ ಹಾಡಲ್ಲಿ ಕಂದನಿಗೆ ಪಟ್ಟಾಭಿಷೇಕದ ಹೊತ್ತು...
ಶುಭರಾತ್ರಿ...
❤❤❤
ಕನಸಿನ ಮರಿ ಹಕ್ಕಿಯೊಂದು ಮಗ್ಗಲು ಬದಲಿಸಿ ಆಕಳಿಸಿ ಮೈಮುರಿದು ಕಣ್ತೆರೆಯಿತು...
ಇನ್ನೂ ಹಾರಬೇಕಿರೋ ದೂರವ ಕಂಡು ಸಣ್ಣಗೆ ಕಂಪಿಸಿ ಮತ್ತೆ ರೆಕ್ಕೆ ತಡವಿಕೊಂಡು ಭರವಸೆಯಲಿ ಮೆಲು ನಕ್ಕಿತು...
ಬೆಳಗೆಂದರೆ ಕನಸಿನ ಗುಬ್ಬಿ ಮರಿಯ ಗರುಡ ಯಾನ...
❤❤❤
ಕೃಷ್ಣನ ಕೊಳಲಿಗೆ ರಾಧೆಯ ನಗು ಉಸಿರ ತುಂಬಿದಂತೆ...
ಅವನ ನೆನಪಿನ ನೆಪವೇ ಅವಳ ಗೆಜ್ಜೆಗೆ ಜೀವ ತುಂಬಿದಂತೆ...
ಅಲ್ಲಲ್ಲ ಕೃಷ್ಣನ ಬಾಂನ್ಸುರಿ, ರಾಧೆಯ ಕಾಲಂದುಗೆಗಳು ಒಟ್ಟಾಗಿ ಮಿಡಿದಂತೆ - ಅವಳೆದೆಯ ಮಾತಿನ ಗಲಗಲ...
ಅವಳಂದದ್ದು:
ಎನ್ನೆದೆಯ ಹಕ್ಕಿನ ಪದಕ ನೀನು ಕಣೋ - ‘ನೀನು’ ‘ನಾನು’ ಎಂಬುದೆಲ್ಲ ಸುಳ್ಳು; ಈ ಇರುಳ ಸಾಂಗತ್ಯ, ಆ ನಾಳೆಯ ಸಾರಥ್ಯ ಎರಡೂ ಇನ್ನೀಗ ಜೊತೆ ಬೆರೆತ ‘ನಾವು...’
ಇದೀಗ ಬೆಳದಿಂಗಳಿರುಳ ಶಾಂತ ನರ್ಮದೆಯ ದಂಡೆಯ ನಿರಾಳ ಮೌನ ಎನ್ನೆದೆಯಲಿ...
ಈ ಮೌನ ನಿರಂತರವಾಗಲಿ...
ಶುಭರಾತ್ರಿ...
❤❤❤
ಬೆಳಗೆಂದರೆ ಕನಸಿನ ಸಾರೋಟಿನ ಕುಲುಕಾಟದ ಧೀರ ಚಲನೆ...

No comments:
Post a Comment