Friday, May 18, 2018

ಗೊಂಚಲು - ಎರಡ್ನೂರೈವತ್ತೊಂಭತ್ತು.....

ನಾನೆಂಬೋ ಹುಡುಕಾಟ..... 

ಪ್ರೀತಿ ಅಂದ್ರೆ ಈ ಬದುಕಿನ ಜೀವ ಭಾವದ "ಜೀವಂತ" ಕಣ್ಣ ಹನಿ... 💞
⇍↺⇎↻⇏

ಏನ್ಗೊತ್ತಾ -
ಮಾತು, ಕೃತಿಗಳ ಹಿಂದಿನ ಪ್ರೀತಿ, ಕಾಳಜಿ ಮನವ ತಾಕದೇ ಹೋದಾಗ ಅಥವಾ ಪ್ರೀತಿ, ಕರುಣೆ, ಕಾಳಜಿಗಳೆಲ್ಲ ಕೃತಿಯಾಗಿ ಒಗ್ಗದೇ ಬರೀ ಒಣ ಒಣ ಮಾತಿನ ಅಲಂಕಾರವಾದಾಗ ಭಾವ ಬಾಂಧವ್ಯಗಳಲ್ಲೆಲ್ಲ ಉಳಿವುದು ಪೂರಾ ಪೂರಾ ವ್ಯಾವಹಾರಿಕ ವ್ಯಾಯಾಮ ಅಷ್ಟೇ........
ಅಷ್ಟಾಗಿಯೂ, ಅಂತಲ್ಲೂ ತುಸುವಾದರೂ ಮಿದು ಭಾವದ ಭ್ರಾಂತು ಉಸಿರಾಡಬೇಕೇ - ಸಬೂಬುಗಳ ಮರಳ ಮಹಲನು ನಂಬಿ ಬಂಧಕ್ಕೆ ಪ್ರೀತಿಯ ಹೂಡಬೇಕು ಅಷ್ಟೇ...
#ಭ್ರಮೆಗಳಲ್ಲಿ_ಸುಖವಿದ್ದರೆ_ಭ್ರಮೆ_ಒಳ್ಳೆಯದೇ...?!
⇍↺⇎↻⇏

ಹೃದಯಹೀನನ ಮನೆಗೂ ನೇಹದ ತೋರಣವಿದೆ...
ಈ ಹೃದಯವೆಂಬೋ ಮಾಂಸದ ಮುದ್ದೆಗೆ ಸುಸ್ತಾದಷ್ಟು ಸುಲಭಕ್ಕೆ ಹೃದಯದ ಭಾವ ಕೋಶಕ್ಕೆ ಸುಸ್ತಾಗುವುದಿಲ್ಲವಾ...!!??
ಜಗದ ಭಾವುಕತೆ (?) ಜಡವ ಸೋಕುವುದಿಲ್ಲವೇನೋ...
#ನಾನು...
⇍↺⇎↻⇏

ಮರುಳನ ಬರಿಗಾಲ ಹಾದಿಯಲೂ ಕಂಡದ್ದು ಉಂಡದ್ದೆಲ್ಲ ನಗುವೇ......
#ಮರುಳನ_ಮಾಡೆನ್ನ_ಬದುಕೇ...💞
#ಎನ್ನ_ಕಾಲ್ದಾರಿಯಲಿ_ಎನ್ನದೇ_ಗುರುತಿರಲಿ...👣
⇍↺⇎↻⇏

ನಗೆ ನದಿಯ ಪಾತ್ರದ ನಟ್ಟ ನಡು ಹಾದಿಯಲಿ ಒಂದೆರಡು ನೋವ ಸುಳಿ - ಕೊಟ್ಟದ್ದು ಪಡೆದದ್ದು ನಮ್ಮ ನಮ್ಮೊಳಗೇ...
ಆ ಚಕ್ರ ಸುಳಿಯ ಬಿಳಲ ಬಳಸಿ ಹಾಯಲಾರೆವೇ ಪ್ರೀತಿ ಹಾಯಿಯ ಬಿಗಿಗೊಳಿಸಿ - ತೇಲುತಿರುವಂತೆ ಬಂಧ ಗಂಧ ನಮ್ಮ ಮಡಿಲೊಳಗೇ...
ದೂರ ದೂರ ಸರಿದು ಚಿಟಿಕೆ ನೋವಿನ ಅಂಡು ಚಿವುಟುತ್ತ ಕೊರಗಬೇಕೇಕೆ - ಅಸ್ತಿತ್ವವಿಲ್ಲವೇ ಬಳಿ ಆತು ಕೂತು ಹಂಚಿಕೊಂಡ ನೆಂಚಿಕೊಂಡ ಬೊಗಸೆ ನಗೆಯ ಕರಗಕೆ...
ಬಾ ನನ್ನ ಜೊತೆಗೆ ಕೊರಳೊಡ್ಡಿ ಕಟ್ಟಿಕೊಂಡ ಎಲ್ಲ ಎಲ್ಲೆಯ ಮರೆತು - ಕಣ್ಣ ಹನಿಯ ಹಾದಿಯಲ್ಲೇ ಮೂಡಲೆರಡು ಪುಟ್ಟ ಪುಟ್ಟ ನಗೆಯ ಹೆಜ್ಜೆ ಗುರುತು...
#ನಗೆಯ_ಸಂಕಲಿಸಿ_ಸಂಭ್ರಮಿಸೋಣ...
#ಭಾವ_ಭಾವೈಕ್ಯ_ಬಂಧ...
⇍↺⇎↻⇏

ಚಿಟಿಕೆ ಪ್ರೀತೀನ ಚಿನ್ನವೆಂದು ಹಂಚಿದೆ - ಬೊಗಸೆ ತುಂಬಾ ನಗುವೇ ನಗು...😊
#ಅಕ್ಷಯ_ತೃತೀಯ...💞
⇍↺⇎↻⇏

ಓದಿದ್ದು, ಓದಬೇಕಾದದ್ದು, ಓದಲಾಗದೇ ಇದ್ದದ್ದು ಎಲ್ಲ ಸೇರಿದೀ ಬದುಕು - ಪುಸ್ತಕ...
ಅನುಭವ - ಗುರು...
ಪರಿಣಾಮವೇ ಪಾಠ...
'ನಾನೆಂಬೋ' ನಾನಾದರೋ ಬರೀ ಉಡಾಳ ವಿದ್ಯಾರ್ಥಿ...
#ಪುಸ್ತಕ_ದಿನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment