ಆಯಿ...
ಅವಳೆದೆಯ ಅಮೃತವ ಕುಡಿದೆ
ಜೀವ ಇನ್ನೂ ಉಸಿರಾಡುತಿದೆ.
ಜೀವ ಇನ್ನೂ ಉಸಿರಾಡುತಿದೆ.
ಅವಳ ಕೈತುತ್ತನುಂಡು ಬೆಳೆದೆ
ಹಸಿವ ಸಹಿಸುವ ಚೈತನ್ಯ ಮೈದುಂಬಿದೆ.ನನ್ನ ಬಾಲ್ಯದಲ್ಲಿ ಅವಳು ಮುಟ್ಟಾದಾಗ
ಬೆತ್ತಲಾಗಿ ಅವಳ ಮಡಿಲಲ್ಲಿ ಕುಳಿತಾಗ
ಅವಳ ಸೆರಗು ಹೊದಿಕೆಯಾದದ್ದು ನೆನಪಾದರೆ
ಮತ್ತೆ ಮಗುವಾಗುವ ಆಸೆಯಾಗುತ್ತೆ.
ಹಿಮದ ನಾಡಲ್ಲೂ
ಛಳಿಯ ಸಹಿಸುವ ಶಕ್ತಿ ಮೈಗೂಡತ್ತೆ.
ನನ್ನ ಖುಷಿ ಅವಳ ನಗುವು ಎಂಬುದು
ನನ್ನ ಬೆರಗು.
ನನ್ನ ಗಾಯ ಅವಳ ಕಣ್ಣೀರೆಂಬುದು
ನನ್ನ ಬೇಗುದಿ.
ನಾನು ಬಿದ್ದಾಗ ತಬ್ಬಿ ಸಂತೈಸಿದ ಆಯಿ
ನಾನು ಗೆದ್ದಾಗ ಬರೀ ನಕ್ಕು ಸುಮ್ಮನಾದ ಪರಿ
ನನಗಿನ್ನೂ ಅರ್ಥವೇ ಆಗಿಲ್ಲ.
ಈ ಆಯಂದಿರೇ ಹೀಗೆ
ತಮಗೆ ಹಸಿವಾದರೆ ನಮಗೆ ಉಣಬಡಿಸುವ
ತಮಗೆ ಛಳಿಯಾದರೆ ನಮಗೆ ಕಂಬಳಿ ಹೊದೆಸುವ
ವಿಚಿತ್ರ ಜೀವಗಳು.
ಅವಳ ಮಮತೆಗೆ ಕಾರಣ
ಅವಳ ಒಡಲ ಪ್ರೀತಿಯ ಆಳ
ಗಂಡು ಪ್ರಾಣಿಯಾದ ನನ್ನ ತಿಳಿವಿಗೆ ಇನ್ನೂ ಅರಿವಾಗುತ್ತಲೇ ಇಲ್ಲ.
ಜೊತೆಯಲಿರುವಾಗ ಅವಳೆಂದರೆ ಸದರ ಭಾವ
ಇಂದು ಒಳ್ಳೆಯ ಮಗನಾಗಲಿಲ್ಲವೆಂಬ ನೋವ ಭಾವ.
ಆಯೀ...
ಹೇಳದಿರಲು ಕಾರಣ
ಗಂಡೆಂಬ ಅಹಂಭಾವವಾ..? ಇಲ್ಲಾ
ಹೇಳಬೇಕಿಲ್ಲವೆಂಬ ಸದರ ಭಾವವಾ..? ಗೊತ್ತಿಲ್ಲ.
ಆದರೂ
ನಿನ್ನೆದುರಿಗೆ ಎಂದೂ ಹೇಳದ ಮಾತೊಂದ
ಇಂದು ಹೇಳುತ್ತೇನೆ
ಆಯೀ...
I LOVE YOU...
ಜಗದೆಲ್ಲ ಅಮ್ಮಂದಿರಿಗೆ - ಅಮ್ಮಂದಿರಂಥ ಹೆಣ್ಣು ಜೀವಗಳಿಗೆ
ನನ್ನದೊಂದು ಸಲಾಮ್...
ಹೂಂ ಅಮ್ಮಂದಿರೇ ಹಾಗೆ...
ReplyDeleteಅರ್ಥವಾಗದ ಜೀವಗಳು........
ಹೇಯ್......
ತುಂಬಾ ತುಂಬಾ ಚೊಲೋ ಬರದ್ಯೋ.......
ರಾಶಿ ಖುಷಿ ಆತು.......
No words shree...
ReplyDeleteJust Superb...
Kannalli neeraadisi bidutteeya hudugaa.... Ammana madilalli maguvaagi bidabeku.
ReplyDelete