Sunday, May 29, 2011

ಗೊಂಚಲು - ಹದಿನಾಕು...

ಬರೀ  ಕನಸು...
     ಮತ್ತು
ಮುಖವಾಡಗಳ  ಬದುಕು...


"ಕನಸುಗಳಿಗೆ ಬಸಿರಾಗದ ಮನಸಿಲ್ಲವೇನೋ.! ಆದರೆ ಎಂದೂ ನನಸಾಗದ 

ಕನಸುಗಳಿಗೆ ಬಸಿರಾಗಿ ಆ ಹುಸಿ ಬಸಿರನ್ನು ಬರಿದೇ ಹೊತ್ತು ಅಂಡಲೆಯುವ 

ಮನಸಿನ ಬೋಳೇತನಕ್ಕೆ ಏನೆನ್ನಬೇಕು.? ಅರ್ಥವಿಲ್ಲದ ಕನಸುಗಳನ್ನೇ 

ಅಲ್ಲವಾ ಹಗಲ್ಗನಸು ಅನ್ನೋದು. 

ಓ ಮನಸೇ.....ಬರಿದೇ ಭ್ರಮೆಯ ಸೃಷ್ಠಿಸುವ ಹಗಲ್ಗನಸುಗಳಿಗೆ ಬಸಿರಾಗಿ       

ಆ ಬಸಿರು ಹುಸಿಯಾದಾಗ ರೋಧಿಸದಿರು.

 ಮನಸೇ...ಪ್ಲೀಸ್...ತಿಳಿಯಾಗು...  

ತಿಳಿಯಾಗಿ ನಕ್ಕುಬಿಡು...

ಆ ಮುಗುಳ್ನಗು ನನಸಾಗಬಲ್ಲ ಕನಸುಗಳನ್ನು ಹೊತ್ತು ತರಲಿ...
                                               
                                               *****
                                                 ***
                                                   *  


"ನಾಳೆಯ ಕನಸುಗಳಲ್ಲಿ ಇಂದಿನ ವರ್ತಮಾನವನ್ನು ನಗ್ತಾ ನೂಕೋದು 

ಸುಲಭ."

 ಆದ್ರೆ ನಾಳೆಗಳ ಬಗೆಗೆ ಸಿಹಿಗನಸು ಕಾಣುವ ಅವಕಾಶವೇ 

ಇಲ್ಲದಾದಾಗ - ಭವಿಷ್ಯದೆಡೆಗಿನ ಭರವಸೆಗಳೇ ಸತ್ತು ಹೋದಾಗ, ನಿನ್ನೆಯ ಕಹಿ  

ಘಟನೆಗಳನ್ನೇ ಸವಿ ನೆನಪೆಂದುಕೊಂಡು ಶುಷ್ಕ ನಗು ನಕ್ಕು ಇಂದನ್ನು 

ತಳ್ಳಬೇಕಾಗಿ ಬರುವುದು ಬದುಕಿನ ಎಂಥ ಯಾತನಾದಾಯಕ  ವಿಪರ್ಯಾಸ 

ಅಲ್ವಾ? ಅಳಬೇಕೆನಿಸಿದಾಗಲೂ ನಗೆಯ ಮುಖವಾಡ ಧರಿಸ್ತಾ - ಹೇಗೋ 

ಜೀವಿಸಬೇಕೆಂದ್ಕೊಂಡು ಇನ್ಹೇಗೋ ಜೀವಿಸ್ತಾ ಕಾಲ ಕಳೆಯೋದೇನಾ 

ಬದುಕೆಂದರೆ.? ಸುತ್ತಲಿನ ಸಮಾಜದೆದುರು ನಾವು ಚೆನ್ನಾಗಿದೀವಿ 

(ಸಂತೋಷವಾಗಿ) ಅಂತ ತೋರಿಸ್ಕೊಳ್ಳೋದು ಒಂದಷ್ಟು ಮಟ್ಟಿಗೆ ಅಗತ್ಯ 

ಮತ್ತು ಅನಿವಾರ್ಯ ಕೂಡಾ. ಯಾಕಂದ್ರೆ, ಎಷ್ಟೇ ಸ್ವಾವಲಂಬಿ ಮನುಷ್ಯ 

ಅಂತಂದ್ಕೊಂಡ್ರೂ ಆತ ಜೀವಿಸಬೇಕಾದದ್ದು - ಬದುಕು ಸವೆಸಬೇಕಾದ್ದು ಇದೇ 

ಸಮಾಜದ ನಡುವೆ. ಇದೇ ಸಮಾಜದ ಒಂದು ಅಂಗವಾಗಿ.


ಮನುಷ್ಯಂಗೆ 'ಮುಖವಾಡಗಳು' ಎಷ್ಟೊಂದು ಅಗತ್ಯ ಅಲ್ವಾ...!


2 comments:

  1. ಭವಿಷ್ಯದ ಬಗ್ಗೆ ಕನಸು ಕಾಣುವ ಹಕ್ಕು ಎಲ್ರಿಗೂ ಇದೆ ದೊರೆಯೇ.....
    ಬರುವ ನಾಳೆ ಹೇಗೇ ಇರಲಿ......
    ಕನಸು ಕಾಣಲೂ ಬರವೇ?
    ಮುಖವಾಡಗಳ ಬದು ನಾವು ಆರಾಮಾಗಿ ಬದುಕಲು ಬೇಕು ಅಷ್ಟೇ....
    ನೇರಾ ನೇರ ಬದ್ಕ್ತೀನಂದ್ರೆ ಒಂದೋ ಎದುರಿನವರಿಗೆ ಬೆಜಾರಾಗುತ್ತೆ.....
    ಇಲ್ಲಾ ನಮಗೆ......
    ಗಾಡೀನಾ ಬಂದಂತೆ ಹೊಡೆದರೆ ಚನ್ನಾ ಅಲ್ವಾ....?
    ಅದೇ ತಾನೇ ಮಾಡ್ತಿರೋದು...

    ReplyDelete
  2. manushyanige mukhavaadagalu nijavaagalu athi agathya...

    ReplyDelete