ನಗೆಯ ಸಂತೆಯ ನಡುವೆ ನಿಂತು
ಅಳುವ ಮಾರುವ ಬಯಕೆ
ಯಾಕೆ ಈ ಮನಕೆ...
ಉಸಿರ ವೇಗಕೆ ಸ್ಪಂದಿಸುವ
ಎದೆಗೂಡ ಸಣ್ಣ ನೋವ ಕದಲಿಕೆಯಲ್ಲೂ
ನನ್ನ ಕನಸುಗಳ ಗರ್ಭಪಾತ...
ಒಂದು ಘಳಿಗೆಯ ಹೃದಯ ಸ್ತಂಭನ
ಬದುಕಿನದೇ ಅಕಾಲ ಅವಸಾನ...
ಓ ಹೃದಯವೇ
ನೀ
ಮಿಡಿತವ ನಿಲ್ಲಿಸದಿರು.....
ಸೋಲುಗಳ ಸುಳಿಯಿಂದ ಎದ್ದು
ಗೆಲುವಿನ ತೆಪ್ಪವೇರಿ ತೇಲುವ ಆಸೆ
ಇನ್ನೂ ಉಸಿರಾಡುತಿದೆ...
ಅವಳ ಮಡಿಲಲ್ಲಿ ಮಲಗಿ
ಗೆಲುವಿನ ತೆಪ್ಪವೇರಿ ತೇಲುವ ಆಸೆ
ಇನ್ನೂ ಉಸಿರಾಡುತಿದೆ...
ಅವಳ ಮಡಿಲಲ್ಲಿ ಮಲಗಿ
ನನ್ನ ನಾ ಕಳೆದುಕೊಳ್ಳುವ ಬಯಕೆ
ಇನ್ನೂ ಹಾಗೇ ಉಳಿದುಕೊಂಡಿದೆ...
ಒಲವಿನೊರತೆಯ
ಹನಿಗಳ ಹೀರಿ
ಬಾಳ ಚಪ್ಪರದ
ತುಂಬೆಲ್ಲ ಹಬ್ಬಿ ನಿಂತ
ನಗೆ ಬಳ್ಳಿಯ
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
.....Pleas give me some time.....
xellent.......
ReplyDeleteತುಂಬಾ ಚಂದ ಬರೀದ್ಯೋ.....
ಕನಸಾಗಿ ಉಳಿದುಕೊಂಡದ್ದನ್ನೆಲ್ಲಾ ನನಸಾಗಿಸಿಕೊಳ್ಳಲೆಂದೇ ತಾನೇ ಎಲ್ಲರ ಹೋರಾಟ.....
ಆಸೆಗಳು ಉಸಿರಾಡುತ್ತಿದ್ದರೆ ತಾನೆ ಬದುಕಿನಲ್ಲಿ ಛಲ ಬರೋದು....
ಕನಸುಗಳ ಗರ್ಭಪಾತವಾಗಲು ಬಿಡಬೇಡ....
ಸಮಯ ಬೇಕಾದಷ್ಟಿದೆ.....
ಸಾಗರದ ಕೊನೆಗೆ ಆಕಾಶ ಸೇರುವುದು ಕಣ್ಣೆಗೆ ಕಾಣಿಸುತ್ತಿದ್ದರೂ.... ನಾವಲ್ಲಿ ತಲುಪಬೇಕಾದರೆ ಅದೆಷ್ಟು ವರ್ಷಗಳು ಬೇಕೋ......
ಹಾಗೆಯೇ ಇದೂ ಕೂಡಾ.....
I Like it.......
keep writting....
ಆಸೆಯೇ ಜೀವನದ ಉಸಿರು,
ReplyDeleteಕವನದ ಭಾವ ತುಂಬಾ ಚೆನ್ನಾಗಿ ಮೂಡಿದೆ. ಅಭಿನಂದನೆ.