ಎದೆಯ ಚುಂಬಿಸಿದ ಪ್ರೀತಿ ಗಂಗೆಯ ಗೆಳೆತನ.....
ಉಸಿರಲ್ಲಿ ಬೆರೆತ ಹೆಸರಿಲ್ಲದ ಹುಡುಗೀ -
ಈ ಬಡ ಜೋಗಿಯ ಎದೆ ಜೋಪಡಿಯಲೀಗ
ನಿನ್ನೊಲವ ಕನಸುಗಳ ಗೆಜ್ಜೆಯ ಶ್ರೀಮಂತ ಘಲಿರು...
ಸಣ್ಣ ಮಳೆಯ ಸಂಜೆ,
ತುಟಿ ಉರಿಯುವ ಖಾರದ ಜೋಳ,
ಅರೆಗತ್ತಲ ದಾರಿ,
ಒಬ್ಬಂಟಿ ನಡಿಗೆ ಮತ್ತು ನಿನ್ನ ನೆನಪು...
ನನ್ನಂತರಂಗಕ್ಕೆ ಮಳೆಬಿಲ್ಲ ರಂಗು...
ಈ ಬದುಕೆಷ್ಟು ಸೊಗಸಲ್ಲವಾ...!!!
ಮೊದಲೆಲ್ಲ ಹೀಗಿರಲಿಲ್ಲ ನಾನು. ಶುದ್ಧ ಬಂಡೆಯಂಥ ಮನುಷ್ಯ. ಹಾಗಂತ ಗೆಳೆಯ ಗೆಳತಿಯರಿರಲಿಲ್ಲ ಅಂತಲ್ಲ. ಭಾವ ಬಂಧಗಳಿಗೆ ಸ್ಪಂದಿಸುತ್ತಿರಲಿಲ್ಲ ಅಂತಲೂ ಅಲ್ಲ. ಸ್ನೇಹಿತರ ದೊಡ್ಡ ಹಿಂಡು ನನ್ನ ಸುತ್ತ ಆಗಲೂ, ಈಗಲೂ. ಆದರೆ ವ್ಯತ್ಯಾಸ ತುಂಬಾ ಇದೆ. ಅದು ನಂಗೇ ಕಾಣಿಸ್ತಿದೆ. ನನ್ನ ನಡುವಿನ ಗೆಳೆಯ ಗೆಳತಿಯರೆಲ್ಲ ಪ್ರೀತಿ, ಪ್ರೇಮ ಅಂತ ಕನವರಿಸುವಾಗಲೆಲ್ಲ ನಕ್ಕುಬಿಡುತ್ತಿದ್ದೆ. ಪ್ರೇಮದಲ್ಲಿ ಸೋತು ಬಂದ ಗೆಳತಿ ನೋವಿನಿಂದ ಅಳುತ್ತಿದ್ದರೆ; ನಿನ್ನದು ಪ್ರೀತಿಯಾಗಿರಲೇ ಇಲ್ಲ ಅಂತ ಉಪದೇಶ ಕೊಟ್ಟಾಗ ಸಿಟ್ಟಿನಿಂದ ನೀನು ಹೃದಯಾನೇ ಇಲ್ಲದ ಪ್ರಾಣಿ ಅಂತ ಬೈದು ಎದ್ದು ಹೋಗಿದ್ದಳು. ಯಾರದೋ ನೋವಿಗೆ ಸ್ಪಂದಿಸುವುದೆಂದರೆ ಅವರೊಂದಿಗೆ ಸೇರಿ ಅಳೋದಲ್ಲ...ಭಾವುಕತೆಗೂ, ಬರೀ ಎಮೋಷನ್ಸ್‌ಗೂ ವ್ಯತ್ಯಾಸವಿದೆ ಅಂತೆಲ್ಲ ಭಾಷಣ ಬಿಗಿಯುತ್ತಿದ್ದವನು ನಾನು...
ಇಂತಹುದೇ ಘಳಿಗೆಯೊಂದರಲ್ಲಿ ನನ್ನ ಬದುಕಿಗೆ ಹೊಸದಾಗಿ ಬಂದು ಸೇರಿ ಹಾಯ್ ಅಂದವಳು ನೀನು...
ಆ ದಿನ ನಿನ್ನ ಹೆಸರನ್ನೂ ಕೇಳಿರಲಿಲ್ಲ ನಾನು. ಇಂದಿಗೂ ನಿನ್ನ ಹೆಸರು ನಂಗೆ ನಗಣ್ಯವೇ. ನಿನ್ನೊಂದಿಗಿನ ಭಾವವಷ್ಟೇ ಮುಖ್ಯ.
ಮೊದಲ ನೋಟದಲ್ಲೇ ನೀನು ಆಕರ್ಷಿಸಿದವಳೂ ಅಲ್ಲ. ಅಂಥ ಅಪರೂಪದ ಚೆಲುವೆಯೂ ಅಲ್ಲ. ನನ್ನ ಬಾಲಿಶ ಕನಸಿನ ಹುಡುಗಿಯ ಚೆಲುವು ಖಂಡಿತಾ ನಿನ್ನಲಿರಲಿಲ್ಲ. ಸಣ್ಣ ಆಕಾರದ, ಸಾಮಾನ್ಯ ಬಿಳುಪಿನ, ಬೆರಗು ಕಣ್ಗಳ ಹುಡುಗಿ..ನನ್ನ ಸ್ನೇಹದ ಅಡ್ಡಾಕ್ಕೊಂದು ಹೊಸ ಸೇರ್ಪಡೆ ಅಷ್ಟೇ...
ಆದರೆ ಆ ಬೆಳಗು...ಅದು ಬೆಳಗಲ್ಲ...
ನನ್ನ ಬದುಕು ಪ್ರೀತಿ ಪಾರಿಜಾತದ ಗಂಧ ಹೀರಲು ಹೆಜ್ಜೆ ಎತ್ತಿಟ್ಟ ಮೊದಲ ಘಳಿಗೆ ಅಂತ ಅನ್ನಿಸುತ್ತೆ ಈಗ. ಅಂದೂ ನೀನು ಎಂದಿನಂತೆಯೇ ಬಂದಿದ್ದೆ. ಆದರೆ ಎತ್ತಿಡುವ ಹೆಜ್ಜೆಗಳಲಿ, ಘಲಿರೆನ್ನುವ ಗೆಜ್ಜೆಯಲಿ ಏನೋ ಉತ್ಸಾಹ. ನೇರ ನನ್ನೆಡೆಗೆ ನಡೆದು ಬಂದು ಹಲ್ಲೋ ನಂಗೆ ವಿಷ್ ಮಾಡಲ್ವಾ; ನನ್ನಮ್ಮ ನಂಗೆ ಜನ್ಮ ನೀಡಿದ ಚಂದದ ದಿನ ಇಂದು ಅಂತ ನೇರಾ ನೇರ ನನ್ನ ಕಣ್ಗಳಲ್ಲಿಳಿದಿದ್ದೆ. ನಾನು ಶುಭಕೋರಿದೆನಾ ಗೊತ್ತಿಲ್ಲ. ಆದರೆ ನಿನ್ನ ಕಣ್ಗಳನ್ನ ಹತ್ತಿರದಿಂದ ಕಂಡ ಆ ಕ್ಷಣ ನಾನು ಸಣ್ಣಗೆ ಕಂಪಿಸಿದ್ದೆ. ಆ ಬಟ್ಟಲು ಕಂಗಳಲ್ಲಿನ ಆರೋಗ್ಯವ ಕಂಡು. ಕಣ್ಣು ಮನಸಿನ ಕನ್ನಡಿ ಅಂತ ಪ್ರಾಮಾಣಿಕವಾಗಿ ನಂಬ್ತೇನೆ. ಕಣ್ಗಳಲ್ಲಿ ಅಷ್ಟೆಲ್ಲ ಆರೋಗ್ಯ ಇದ್ದರೆ ಮನಸಲ್ಲೂ ಇರಲೇಬೇಕಲ್ಲವಾ...ಅಷ್ಟೇ..
ಮೊದಲಬಾರಿಗೆ ನಾನಾಗಿ ನಾನು ಒಂದು ಹೆಣ್ಣು ಜೀವದ ಗೆಳೆತನಾನ ಬಯಸಿ ನಿನ್ನೆಡೆಗೆ ಕೈಚಾಚಿದ್ದೆ. ಅಲ್ಲಿಂದ ಮುಂದೆ ನಿನ್ನೊಡನೆಯ ಪ್ರತಿ ಹೆಜ್ಜೆಯಲ್ಲೂ ನಿನ್ನ ಸ್ವಚ್ಛ ಮನದ ಆರೋಗ್ಯ ನಂಗೆ ಅನುಭವಕ್ಕೆ ಬರ್ತಾ ಹೋಯ್ತು. ನನಗೇ ಅರಿವಿಲ್ಲದೇ ನಂಗೆ ಪ್ರೇಮಕಥೆಗಳು ಇಷ್ಟವಾಗುತ್ತಾ ಹೋದವು.. ನಾನು ಇಷ್ಟಿಷ್ಟೇ ಮೃದುವಾಗುತ್ತಾ ಹೋದೆ..ಮನಸ್ಸಿಂದ, ಭಾವಗಳಿಂದ...ಯಾವ ಘಳಿಗೇಲಿ ಮನಸು ಪೂರಾ ಪೂರಾ ನಿನ್ನ ಮಡಿಲ ಮಗುವಾಗಿ ಹೋಯ್ತೋ ಗೊತ್ತಿಲ್ಲ. ಅಂತೂ ನಾನು ಪೂರ್ತಿ ನೀನೇ ಆಗಿ ಹೋದೆ...
ಯಾರ ದೊಡ್ಡಸ್ತಿಕೇನೂ ಸಹಿಸದ ನಾನು ಸುಮ್ ಸುಮ್ನೇ ನಿನ್ನೆದುರು ಕಬೋಜಿಯಾಗ್ತೇನೆ. ನೀನು ಒಮ್ಮೊಮ್ಮೆ ಅಮ್ಮನಂತೆ, ಇನ್ನೊಮ್ಮೆ ರಚ್ಚೆ ಹಿಡಿವ ತಂಗಿಯಂತೆ, ಮಗದೊಮ್ಮೆ ಪ್ರೀತಿಯಿಂದ ಕಿವಿ ಹಿಂಡೋ ಕನ್ನಡಶಾಲೆಯ ಅಕ್ಕೋರಂತೆ ಕಂಡುಬಂದು ನನ್ನಲ್ಲಿ ಖುಷಿಯುಕ್ಕಿಸುತ್ತೀಯಾ.. ಹಾಗಾಗಿ ನಾನೊಬ್ಬನೇ ಇರುವಾಗ ಕೂಡ ನನ್ನಷ್ಟಕ್ಕೇ ನಗುತ್ತಿರುತ್ತೇನೆ ಹಿತವಾಗಿ.. ಸೋಲೆಂದರೆ ಸಿಟ್ಟಿಗೇಳುವ ನಾನು ನಿನ್ನೆದುರು ನಗುನಗುತ್ತ ಮಂಡಿಯೂರುತ್ತೇನೆ.
ಯಾಕೆ ಹಿಂಗೆಲ್ಲ ಆಗುತ್ತೆ ಅಂತ ಅಮ್ಮನ್ನ ಕೇಳಿದೆ. ಈ ಬದುಕಿನ ಮೊದಲ ಗೆಳತಿ ಅವಳು...ಅಯ್ಯೋ ಮರುಳಾ ಪ್ರೀತಿಯಾಗಿದೆ ಕಣೋ ಅಂತ ತಲೆ ತಟ್ಟಿದಳು.. ಇಷ್ಟು ದಿನಕ್ಕೆ ಒಂದು ಪ್ರೀತಿಯುಕ್ಕೋ ಕೆಲಸ ಮಾಡಿದೀಯಾ ಕಣೋ.. ಅಂತ ಅಪರಂಜಿಯಂಥ ಹುಡುಗಿಗೆ ಸೋತಿದೀಯಲ್ಲಾ ಅಷ್ಟು ಸಾಕು ಅಂದು ಬಿಟ್ಟಳು... ಯಾಕೋ ನಿನ್ನ ಬಗ್ಗೆ ಅಸೂಯೆ ಆಯ್ತು. ನನ್ನಮ್ಮನ ಪ್ರೀತೀನೂ ಗೆದ್ದುಬಿಟ್ಟೆಯಲ್ಲೇ ಕೂಸೇ..
ನಿನ್ನ ಜೊತೆಗಿದ್ದರೆ ನಂಗ್ಯಾಕೆ ಇಷ್ಟೊಂದು ಖುಷಿಯಾಗುತ್ತೆ.? ನಿನ್ನನ್ಯಾಕೆ ನಾನು ಇಷ್ಟೊಂದು ಹಚ್ಚಿಕೊಂಡಿದ್ದೇನೆ.?? ನಿನ್ನ ಜೊತೆಗಿರ್ತಾ ಇರ್ತಾ ನನಗೇ ನಾನು ಇನ್ನಷ್ಟು ಸ್ಪಷ್ಟವಾದಂತ ಭಾವ ನನ್ನಲ್ಯಾಕೆ.??? ನಿನ್ನ ಕಣ್ಣ ಕೊಳದಲ್ಲಿ ಮೀಯುತ್ತ ನನ್ನ ನಾನೇಕೆ ಕಳೆದುಕೊಳ್ಳುತ್ತೇನೆ.???? ಅಂತೆಲ್ಲ ಕೇಳಿದ್ದು ನೀನು.
ಯಾಕೇಂದ್ರೆ ನೀನು ನನ್ನ ಪ್ರೀತಿಸ್ತಿದೀಯಾ ಅದಿಕ್ಕೆ ಅಂದರೆ ನಾನು; ಏ ಇರ್ಲಿಕ್ಕಿಲ್ಲ ಕಣೋ ನಾನಿನ್ನೂ ಪ್ರೇಮ, ಮದುವೆ, ಸಂಸಾರಗಳ ಬಗ್ಗೆ ಯೋಚಿಸಿಲ್ಲ ಅಂದಿದ್ದೆ ನೀನು.
ಅಲ್ಲಾ ಕಣೇ ಎಲ್ಲಾರೂ ಮಾಡೋ ತಪ್ಪೇ ಇದು. ಪ್ರೀತಿಸಿದೆ ಅಂದ್ರೆ - ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು, ಒಂದಷ್ಟು ಮರ ಸುತ್ತಿ, ಮನೆಯವರನೆಲ್ಲ ಒಪ್ಪಿಸಿಯೋ - ಎದುರಿಸಿಯೋ ಮದುವೆಯಾಗಿ, ಸಂಸಾರ ಹೂಡಿ, ಮಕ್ಕಳನ್ನು ಹೆತ್ತು, ಅವರನ್ನು ಬೆಳೆಸಿ, ಅವರಿಗಾಗಿ ಗಳಿಸಿ, ಉಳಿಸಿ, ಒಂದಿನ ಎಲ್ಲರಂತೆ ಸತ್ತುಹೋಗೋದು ಅಂದ್ಕೊಂಬಿಡೋದು..ಪ್ರೀತಿ ಅದಲ್ಲ... ಪ್ರೀತಿ ಬಾವಿಯಲ್ಲ ಕಣೇ ನದಿ..ಪ್ರೀತಿಗೆ ಚೌಕಟ್ಟು ಹಾಕಿದ ಕ್ಷಣ ಅಷ್ಟರಮಟ್ಟಿಗೆ ಪ್ರೀತಿ ಸತ್ತಂತೆ. ಪ್ರೇಮಕ್ಕೆ ಚೌಕಟ್ಟು ಕಟ್ಟಿದಾಗ ಪ್ರೇಮವೂ ಸ್ವಾರ್ಥವೇ. ಪ್ರೀತಿ ಇಬ್ಬರನ್ನೂ ಬೆಳೆಸಬೇಕು. ಇಬ್ಬರ ಸುತ್ತಣ ಬದುಕುಗಳನ್ನೂ ಬೆಳಗಿಸಬೇಕು... ಅರಳಿಸಬೇಕು.. ಸಂಭ್ರಮಿಸಬೇಕು... ಮದುವೆ, ಸಂಸಾರಗಳೆಲ್ಲ ಪ್ರೀತಿಯನ್ನು ವ್ಯಕ್ತಪಡಿಸೋ, ಹಂಚಿತಿನ್ನೋ ಸಾಮಾನ್ಯ ಮಾಧ್ಯಮವಾಗಬೇಕು... ಮದುವೆ, ಸಂಸಾರಗಳೇ ಪ್ರೀತಿ ಅಲ್ಲ. ಪ್ರೀತಿ ಅದಿಲ್ಲದೆಯೂ ಉಳಿಯಬೇಕು...ನಲಿಯಬೇಕು...ನದಿ ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತೆ.. ಅದರ ಇಕ್ಕೆಲಗಳಲ್ಲಿ ನಾಗರೀಕತೆ ತಂತಾನೇ ಚಿಗುರುತ್ತಿರುತ್ತೆ. ಅವುಗಳ ಜತೆಗಿದ್ದೂ ಅವುಗಳ ಹಂಗಿಲ್ಲದೇ ನದಿ ಹರಿಯುತ್ತಲೇ ಇರುತ್ತೆ. ಅದಕ್ಕೇ ಪ್ರೀತಿ ಜೀವ ಉಳಿಸೋ ಗಂಗೆ...ಪ್ರೀತಿ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಕೈಹಿಡಿದ ಗೆಳೆತನ ಅಂದದ್ದು ನಾನು...ನಾ ಅಂದಂತೆ ಬದುಕಿ ತೋರುತ್ತಿರುವುದು ನೀನು...
ಹೀಗೆಲ್ಲ ಯೋಚಿಸುತ್ತಲೇ, ಮಾತಾಡುತ್ತಲೇ ನನ್ನನ್ನು ನಾನು ಮತ್ತು ನನ್ನ ಬದುಕನ್ನು ನಾನು ಇನ್ನಷ್ಟು ಪ್ರೀತಿಸಿಕೊಳ್ಳುವಂತೆ, ಜೀವದ್ರವ್ಯ ಬತ್ತಿದ ಮೇಲೂ ಹಾರು ಹಕ್ಕಿಯ ವಿಶ್ರಾಂತಿಗೆ - ತಬ್ಬಿ ಬೆಳೆವ ಲತೆಯ ಬದುಕಿಗೆ ಆಸರೆಯನೀವ ಒಣಮರದ ನಿಸ್ವಾರ್ಥ ಒಲವ ಒರತೆ ನನ್ನಲ್ಲೂ ಒಂದಿಷ್ಟು ಒಸರಿದ್ದರೆ ಅಂತ ಬಯಸುವಂತೆ ಮಾಡಿದ್ದು ನಿನ್ನ ಗೆಳೆತನ.
ನಾನೂ ನಿನ್ನನ್ನು ತುಂಬಾನೇ ಪ್ರೀತಿಸಿದೆ. ಹಾಗಾಗಿ ಬದುಕಿಂದು ಸಂಭ್ರಮಿಸುತ್ತಿದೆ. ಅಮ್ಮ ಇನ್ನಷ್ಟು ಹತ್ತಿರವಾಗ್ತಿದಾಳೆ. ಬೀದಿಯ ಮಕ್ಕಳೆಲ್ಲ ಅದ್ಭುತ ಗೆಳೆಯರು.. ಪ್ರೀತಿಯ ಚಂದಿರ ಇನ್ನಷ್ಟು ಬೆಳಗುತ್ತಿದ್ದಾನೆ..ಮನೆ ಮುಂದಿನ ಕೈತೋಟದಲ್ಲಿ ಹೂಗಳ ಬಣ್ಣದೋಕುಳಿ..
ನಾನೆಷ್ಟೇ ನೂಕಿದರೂ ನನ್ನೆಡೆಗೆ ನುಗ್ಗಿ ಬರುವ ನಿನ್ನೊಲವ ಅಲೆಗಳ ತೊನೆತಕ್ಕೆ ಸಿಕ್ಕಿ ನಾ ಕಟ್ಟಿಕೊಂಡ ನನ್ನಹಂಕಾರವೆಂಬ ಮರಳ ಮಹಲು ಕರಗಿ ಹೋಗಿ ಈಗಿಲ್ಲಿ, ಎನ್ನೆದೆಯ ದಂಡೆಯಲಿ ಪ್ರೀತಿ ಕಪ್ಪೆಚಿಪ್ಪು ಗರ್ಭಧರಿಸಿದೆ...
ಸಾಗರನ ಮರಳ ದಂಡೆಯ ಮೇಲೆ ನಿನ್ನೆದೆಯ ಬಿಸುಪು ನನ್ನೆದೆಯ ರೋಮವ ತಾಕಿ, ಕಣ್ಣು ಕಣ್ಣು ಸೇರಿ ಪ್ರೀತಿ ಆಳ ಹುಡುಕುತಿರಲು, ಜೇನಿನಾಸೆಗೆ ತುಟಿಗಳು ಹಂಬಲಿಸಿ ಸನಿಹ ಸರಿಯುತಿರೆ, ಬಾನ ಭಾಸ್ಕರ ನಮ್ಮ ಏಕಾಂತದ ಹಿತವಾದ ಉನ್ಮಾದಕೆ ತಾನಡ್ಡಿಯಾಗದಿರಲೆಂದು ವಸುಧೆಯ ಸೆರಗ ಮರೆಯ ಹುಡುಕುತಿದ್ದಂತೆ ಮತ್ತೆ ಮತ್ತೆ ಕನಸಾಗುತ್ತಿದೆ ಈಗೀಗ...
ಯಾವುದೋ ದಾರಿಯಲಿ, ನೀರವ ಮೌನದಲಿ ಒಬ್ಬಂಟಿ ನಡೆಯುತಿದ್ದೆ...ಆಗಸದ ಚಂದಿರನೂ ನನ್ನೊಡನೆ ಹೆಜ್ಜೆ ಹಾಕುವವನಂತೆ ನನ್ನ ಮೇಲುಗಡೇಲೇ ನಡೀತಿದ್ದ ಬಾನ ದಾರಿಯಲ್ಲಿ. ಮನಸಿಗೇನೋ ಪುಳಕ. ಚಂದಿರನೆಂದರೆ ನನಗ್ಯಾಕಿಷ್ಟೊಂದು ಇಷ್ಟವಾಗುತಿದ್ದಾನೆ ಈಗೀಗ..? ಆತ ನಿನ್ನನೇ ಹೋಲುತ್ತಾನೆಂದಾ...
ಹೀಗೆ ನಮ್ಮಿಬ್ಬರ ಬದುಕಲ್ಲೂ ಒಂದು ಪ್ರೀತಿ ಅರಳಿ ನಿಂತಿದೆ ಮತ್ತು ನಾವಿಬ್ಬರೂ ಅರಳಿ ನಿಂತ ಪ್ರೀತಿಯ ತೋಟದಲ್ಲಿ ಸಂಭ್ರಮಿಸುತ್ತಿದ್ದೇವೆ. ಒಟ್ಟಿಗೆ ಬಾಳುವ ಮಾತಾಡದೇ, ಮನಸಲ್ಲೇ ಮನೆ ಕಟ್ಟಿಕೊಂಡು, ಅದನ್ನು ಚಂದಗೆ ಶೃಂಗರಿಸಿಕೊಂಡು ಅಲ್ಲಿ ಒಟ್ಟಿಗೇ ಬದುಕುತ್ತಿದ್ದೇವೆ.
ಕನಸುಗಳಿಗೆ ಹೊಸ ಬಣ್ಣ ತುಂಬಿದ ಗೆಳತೀ - ಎಂಥ ಸೊಗಸಿದೆಯಲ್ಲವಾ ಈ ಪ್ರೀತಿಯಿಂದ ಬದುಕಿಗೆ..
ಇಂತಿ -
ಪ್ರೀತಿ ಲೋಕದ ಬಡ ಜೋಗಿ...
ಚಿತ್ರ ಕೃಪೆ : ಅಂತರ್ಜಾಲ...

ಪ್ರೀತಿ ಎಷ್ಟು ಮಧುರ ಅಲ್ಲವಾ?
ReplyDeleteಇರೋದು ಎರಡೇ ಅಕ್ಷರ....
ಎಷ್ಟು ಸಾವಿರ ಸಾವಿರ ಬರಹಗಳು....
ಸಾವಿರದ ಭಾವನೆಗಳು ಉಕ್ಕಿಸಿಬಿಡುತ್ತದೆ.
ಪ್ರೀತಿಯ ಲೋಕದ ಬಡ ಜೋಗಿ ಎಂತಹ ಅದ್ಭುತ
ಸಾಲುಗಳನ್ನು ಹೆಕ್ಕಿದ್ದಿದ್ದಾನೆ ನೋಡಿ...
ಒಡಲಲ್ಲಿ ಗರ್ಭ ಧರಿಸಿದ ಪ್ರೀತಿ ಮತ್ತೆ ಮತ್ತೆ
ಮಧುರತೆ ಮೂಡಿಸಲಿ......
ಶರಣು ಶರಣು,,,
ತುಂಬಾ ಚಂದದ ಆಪ್ತವೆನಿಸುವ ಅಷ್ಟೇ ಪ್ರೌಢ ಭಾವಗಳ ಗೊಂಚಲು. ಪ್ರೀತಿಗೆ ಚೌಕಟ್ಟಿರಬಾರದು ನಿಜ, ಆದರೆ ಅದು ಸಾಧ್ಯವಾಗುವ ಮಾತಾ? ಅದನ್ನ ಸಾಕಾರಗೊಳಿಸಿಕೊಂಡದ್ದೇ ಹೌದಾದರೆ, ನಾವಿನ್ನೂ ತಲುಪಿರದ ಎತ್ತರದಲ್ಲೆಲ್ಲೋ ಆದರ್ಶದೆಡೆಗೆ ಸುಮಾರು ಹೆಜ್ಜೆ ಆ(ಕೆ) ಮುಂದಿದ್ದಾನೆ(ಳೆ )ಅಂತ ಅರ್ಥ... ಅಭಿನಂದನೆಗಳು
ReplyDeleteಪ್ರೀತಿಯ ಬಗ್ಗೆ ಬಹಳ ಚನ್ನಾಗಿ ಬರೆದಿದ್ದೀರಿ ಶ್ರೀವತ್ಸ..."ಮದುವೆ, ಸಂಸಾರಗಳೆಲ್ಲ ಪ್ರೀತಿಯನ್ನು ವ್ಯಕ್ತಪಡಿಸೋ, ಹಂಚಿತಿನ್ನೋ ಸಾಮಾನ್ಯ ಮಾಧ್ಯಮವಾಗಬೇಕು... ಮದುವೆ, ಸಂಸಾರಗಳೇ ಪ್ರೀತಿ ಅಲ್ಲ. ಪ್ರೀತಿ ಅದಿಲ್ಲದೆಯೂ ಉಳಿಯಬೇಕು...ನಲಿಯಬೇಕು...ನದಿ ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತೆ.. ಅದರ ಇಕ್ಕೆಲಗಳಲ್ಲಿ ನಾಗರೀಕತೆ ತಂತಾನೇ ಚಿಗುರುತ್ತಿರುತ್ತೆ. ಅವುಗಳ ಜತೆಗಿದ್ದೂ ಅವುಗಳ ಹಂಗಿಲ್ಲದೇ ನದಿ ಹರಿಯುತ್ತಲೇ ಇರುತ್ತೆ. ಅದಕ್ಕೇ ಪ್ರೀತಿ ಜೀವ ಉಳಿಸೋ ಗಂಗೆ" ಈ ಸಾಲುಗಳೂ ನಿಜಕ್ಕೂ ಬಹಳ ಅರ್ಥಪೂರ್ಣವಾಗಿದೆ.... ಬರೆಯುತ್ತಿರಿ..
ReplyDeleteನಾನೆಷ್ಟೇ ನೂಕಿದರೂ ನನ್ನೆಡೆಗೆ ನುಗ್ಗಿ ಬರುವ ನಿನ್ನೊಲವ ಅಲೆಗಳ ತೊನೆತಕ್ಕೆ ಸಿಕ್ಕಿ ನಾ ಕಟ್ಟಿಕೊಂಡ ನನ್ನಹಂಕಾರವೆಂಬ ಮರಳ ಮಹಲು ಕರಗಿ ಹೋಗಿ ಈಗಿಲ್ಲಿ, ಎನ್ನೆದೆಯ ದಂಡೆಯಲಿ ಪ್ರೀತಿ ಕಪ್ಪೆಚಿಪ್ಪು ಗರ್ಭಧರಿಸಿದೆ...
ReplyDeleteಈ ಸಾಲುಗಳು ತುಂಬಾ ಇಷ್ಟ ಆಯ್ತು ಶ್ರೀವತ್ಸ... :)
ಉಸಿರಲ್ಲಿ ಬೆರೆತ ಹೆಸರಿಲ್ಲದ ಹುಡುಗೀ -
ReplyDeleteಈ ಬಡ ಜೋಗಿಯ ಎದೆ ಜೋಪಡಿಯಲೀಗ
ನಿನ್ನೊಲವ ಕನಸುಗಳ ಗೆಜ್ಜೆಯ ಶ್ರೀಮಂತ ಘಲಿರು...
ಆರಂಭವೇ ಝೇಂಕರಿಸಿದೆ... ನಂತರದ ಸಾಲುಗಳೆಲ್ಲ ಇಬ್ಬನಿಯಲ್ಲಿ ತೋಯಿಸಿ ಹರಡಿಟ್ಟಂತೆ ಭಾಸವಾಗುತ್ತಿದೆ...
ಸೊಗಸಾಗಿದೆ.
ಉತ್ಕಟ ಭಾವ ಲಹರಿ.. ಪ್ರೀತಿಗೆ ಹೊಸ ಅರ್ಥ ವ್ಯಾಖ್ಯಾನ.. ಪ್ರೇಮಕ್ಕೆ ಚೌಕಟ್ಟು ಕಟ್ಟಿದಾಗ ಪ್ರೇಮವೂ ಸ್ವಾರ್ಥವೇ. ನಿಜವಾದ ಮಾತು..
ReplyDeleteಪ್ರೀತಿ ಲೋಕದ ಬಡ ಜೋಗಿಯ ಪ್ರೇಮ ಪತ್ರ ಚಂದವೋ ಚಂದ...
ReplyDeleteನಡು ನಡುವೆ ಬರುವ ಮುದ್ದಾದ ಉಪಮೆಗಳು ಪತ್ರದ ತೂಕ ಹೆಚ್ಚಿಸಿದೆ...
"ಮತ್ತೆ ಮತ್ತೆ ಕನಸಾಗುತ್ತಿದೆ.." ಇಂತಹದೇ ಸುಂದರ ಸಾಲುಗಳು ಮನ ತಾಕುತ್ತದೆ ಶ್ರೀ...
ತುಂಬಾ ಅಲ್ಲಾ..
ತುಂಬಾ ತುಂಬಾ ಚೆನ್ನಾಗಿದೆ..
ಹಮ್ಮ್ ಬರೆಯಿತ್ತಿರಿ :)..
ReplyDeleteಹೊಸತನದ ಬರಹ ಓದಿದ ಅನುಭವ...
ಆ ಆತ್ಮೀಯತೆಯನ್ನು ಬರಹದಲ್ಲಿ ಹೇಗೆ ತರುವುದೋ ಕಾಣೆ...
ಹಾಂ ಒಂದು ಪುಕ್ಕಟೆ ಸಲಹೆ...ಸಾಧ್ಯವಾದ ಬ್ಲಾಗಿನ ಅಕ್ಷರದ ಬಣ್ಣವನ್ನು ದಯವಿಟ್ಟು ಬದಲಾಯಿಸಿ..ಓದಲು ಸುಲಭವಾದೀತು .....
ನಮಸ್ತೆ :)
ಚೆನ್ನಾಗಿದೆ ಪ್ರೀತಿ ಲೋಕದ ಬಡ ಜೋಗಿಯ ಪ್ರೇಮ ಪತ್ರ . ಪ್ರೀತಿಯ ಪಯಣಕೆ ಶುಭ ಹಾರೈಕೆಗಳು..
ReplyDeleteSuperb..."ಕಬೋಜಿ" ಯಂತಹ ಪದಗಳು ಎಲ್ಲಿಂದ ಸಿಗುತ್ತೋ ನಿಮಗೆ ಪ್ರೇಮ ಸಾಹಿತಿಗಳೇ ? :-)
ReplyDeleteನಿಮ್ಮ ಪ್ರೀತಿಗೆ, ಅದರ ರೀತಿಗೆ .. ಪದಗಳಲ್ಲಿ ತಂದಂತ ಸುಂದರ ಶೈಲಿಗೆ ಶರಣು.. ನಿಮ್ಮೀ ಲೇಖನದ ಮುಂದೆ ಇನ್ಯಾವ ಪದಗಳೂ, ಪ್ರತಿಕ್ರಿಯೆಗಳೂ ಹೊರಡದೇ ಮನಸ್ಸು ಕೊಂಚ ಹೊತ್ತು ಮೂಕವಾಗುವಷ್ಟು ಚೆನ್ನಾಗಿದೆ..
ಸುಂದರ ಭಾವ :-)
ReplyDeleteಪ್ರೇಮದ ಹೊಸ ಲೋಕಕ್ಕೆ ಕರೆದೊಯ್ದಿತು ನಿನ್ನ ಬರಹ ಗೆಳೆಯ :) ತುಂಬಾ ಸೊಗಸಾದ ಬರಹ ... ಪ್ರೀತಿ ಎಷ್ಟು ಮಧುರ ಅಲ್ವೇ ??
ReplyDeleteಒಂದು ದಿನ ನಿಮ್ಮ ಪ್ರೀತಿ ಬಗ್ಗೆ ಮಾತಾಡೋಣ ,,,ಹ ಹ್ಹಾ ಹ್ಹ :)
ತುಂಬಾ ಚನ್ನಾಗಿದೆ
ReplyDelete