ಶೀರ್ಷಿಕೆ ಇಲ್ಲದ ಭಾವಗಳು.....
(ಇವೆಲ್ಲ ಬರಹವಾಗಿ ಅತಿ ಸಾಮಾನ್ಯ ಸಾಲುಗಳು - ಆದರೆ ಬದುಕಾಗಿ...)
* ಕನಸಲ್ಲಿ ಬರೆದ ಕವನ ನಿನ್ನ ಹೆಸರು...
:::^:::
* ಕೊಟ್ಟಾತನಿಗದು ಏನೂ ಅಲ್ಲದಿರಬಹುದು...
ಬರೀ ಒಂದು ಪಾವಲಿ (ನಾಣ್ಯ) - ಒಂದು ಮುಗುಳ್ನಗುವೇ ಇರಬಹುದು...
ಆದರೆ ಪಡೆದಾತನಿಗೆ ಅದೇ ಎಲ್ಲವೂ ಆಗಿದ್ದೀತು...
ಭಿಕ್ಷೆಯಾದರೆ ಒಪ್ಪತ್ತಿನ ಊಟ - ಪ್ರೀತಿಯಾದರೆ ಒಂದಿಡೀ ಜನ್ಮ ಉಸಿರಾಡಿಕೊಂಡಿರಲೊಂದು ಕಾರಣ...
@@@
* ಮೌನ ನನಗರ್ಥವಾಗಲ್ಲ - ನೀನು ಮಾತೇ ಆಡಲ್ಲ...
ನಾನು ಅಗತ್ಯಕಿಂತ ಹೆಚ್ಚೇ ಬಯಲು - ನೀನು ಗುಹೆಯೊಳಗಿನ ಕತ್ತಲು...
ಮೌನ ನಿನ್ನ ಗುಣವಾ ಅಥವಾ ಮಾತಾಡೋ ಮನಸಿಲ್ಲವಾ..?
ಗೊಂದಲ ನನಗೆ...
ಆದರೂ ನಿನ್ನ ಕಿವಿಗಳು ನಂದೇ ಅಂದ್ಕೊಂಡು ಸುರಿಯುತ್ತಲೇ ಇರುತ್ತೇನೆ ನನ್ನ ಮುಗಿಯದ ಹಳಸಲು ಶಬ್ದಗಳ...:(
* ನಿನ್ನನಿಷ್ಟು ನಗಿಸಿ ನಿನ್ನೊಂದಿಗಿಷ್ಟು ನಗಬೇಕೆಂದು ಮಾತಿಗೆ ಶುರುವಿಡುತ್ತೇನೆ ಪ್ರತಿ ಬಾರಿಯೂ...
ನಿನ್ನ ಕಣ್ಣೀರೊಂದಿಗೆ ಮಾತು ಮುಗಿಯುತ್ತದೆ...
ಹಾಗಾದಾಗಲೆಲ್ಲ ಜಗಳ ತಪ್ಪಿಸಲು ಒಂದಷ್ಟು ಕಾಲವಾದರೂ ಮೌನದ ಮೊರೆಹೋಗಬೇಕೆಂದುಕೊಳ್ಳುತ್ತೇನೆ. ಆದರೆ ಮಹಾ ವಾಚಾಳಿ ನಾನು. ಮೌನ ಸಾಧಿಸುವುದೆಂತು ಸಾಧ್ಯ. ಅದೂ ಎಲ್ಲವನೂ ಅರುಹಿ ಹಗುರಾಗಬಹುದಾದ ನಿನ್ನ ಸ್ನೇಹದೊಂದಿಗೆ...
ಸರಿ ಗಂಭೀರ ವಾದವನ್ನಾದರೂ ನಿಲ್ಲಿಸೋಣ ಅಂದುಕೊಳ್ತೇನೆ. ಆದರೆ ನಿನ್ನೊಡನೆ ಮಾತಿಗೆ ಮಿತಿ ಹಾಕಿಕೊಂಡರೆ ನಿನ್ನ ವಿನಾಕಾರಣದ ಪ್ರೀತಿಯೊಂದಿಗೆ ಕೊಬ್ಬು ತೋರಿ ನನ್ನ ಅಮಿತ ಖುಷಿಗಳಿಗೆ ನಾನೇ ಎರವಾದಂತಲ್ಲವಾ...
ಬೆರೆಯಲಾರದ - ತೊರೆಯಲಾಗದ ನನ್ನ ತೊಳಲಾಟಕೇನೆನ್ನಲಿ...
ಇನ್ನೀಗ ನಾನೇನ ಮಾಡಲಿ - ನಗಿಸಬೇಕೆಂದು ಹೊರಟೂ ಅಳುವಂತೆ ಮಾಡೋ ನನ್ನ ಸ್ವಭಾವದ ದೌರ್ಬಲ್ಯಕ್ಕೆ ನನ್ನ ನಾನೇ ಹಳಿದುಕೊಂಡು ನಿನ್ನೆದುರು ಮಂಡಿಯೂರಿ ಕ್ಷಮೆಯ ಕೋರುವುದರ ಹೊರತಾಗಿ...
ನೀನಾದರೋ ನೀಡಿದೆಲ್ಲ ನೋವನೂ ಮೌನದಲೇ ನುಂಗಿ ಮತ್ತೆ ನಗುತಲೇ ಮಾತು ಶುರುವಿಡೋ ಮೌನಗೌರಿ...
***^^^***
* ಕಿಸೆ ಖಾಲಿಯಿರುವಾಗ ಹೊಟ್ಟೆಗೆ ಹಸಿವಾಗಬೇಕು ಅಥವಾ ಹಂಗಿನ ಊಟದಲ್ಲಿ ಹಸಿವ ನೀಗಿಸಿಕೊಳ್ಳಬೇಕಾದ ಅಸಹಾಯಕತೆ ಕಾಡಬೇಕು...
ಹಾಗಾದಾಗ ಮಾತ್ರ ಹಸಿವಿನ ಕಷ್ಟ ಮತ್ತು ಅನ್ನದ ಬೆಲೆಯ ಅರಿವಾದೀತು...
* ಹಸಿ ಹಸಿ ಬೆಳಗಲ್ಲಿ ಬಿಸಿ ಬಿಸಿ ದೋಸೆ ತಿನ್ನಿಸಿ ನನ್ನ ಮತ್ತು ಮನೆತುಂಬ ಇರುತಿದ್ದ ನನ್ನದೇ ವಾರಗೆಯ ಮಕ್ಕಳ ಹೊಟ್ಟೆಯ ತುಂಬಿಸಿ ತಾನು ಮಾತ್ರ ತಂಗಳನ್ನಕ್ಕೆ ಉಪ್ಪು ನೆಂಜಿಕೊಂಡು ಹಸಿವ ಅಡಗಿಸಿಕೊಳ್ಳುತಿದ್ದ ನನ್ನ ಸಣ್ಣತ್ತೆ ನಂಗಿಂದಿಗೂ ದೇವತೆಯಂತೆ ಕಾಣ್ತಾಳೆ...
* ಎಲ್ಲಾ ಇದ್ದೂ ಬೇಯಿಸಿಕೊಳ್ಳೋ ತ್ರಾಣವಿಲ್ಲದೇ ಉಪವಾಸ ಮಲಗೋ ಹಿರಿಯರ ಕಂಡಾಗಲೆಲ್ಲ ಕಣ್ಣ ಹನಿಯೊಂದಿಗೆ ಅಮ್ಮನ ನೆನಪಾಗುತ್ತೆ...
* ಏನೇನೋ ಭ್ರಮೆಗಳಿಗಾಗಿ ಅಥವಾ ರುಚಿಯ ಬಾಯಿ ಚಪಲಕ್ಕಾಗಿ ಊಟದಿಂದ ದೂರ ಓಡುವ ಕಿರಿಯರ ಕಂಡಾಗಲೆಲ್ಲ ಅವರದು ಪ್ರಾಯದ ಸೊಕ್ಕಿನಂತೆ ತೋರಿ ಕೋಪ ಮಿಶ್ರಿತ ಬೇಸರವಾಗುತ್ತೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಕಿಸೆ ಖಾಲಿಯಿರುವಾಗ ಹೊಟ್ಟೆಗೆ ಹಸಿವಾಗಬೇಕು ಅಥವಾ ಹಂಗಿನ ಊಟದಲ್ಲಿ ಹಸಿವ ನೀಗಿಸಿಕೊಳ್ಳಬೇಕಾದ ಅಸಹಾಯಕತೆ ಕಾಡಬೇಕು...
ReplyDeleteಹಾಗಾದಾಗ ಮಾತ್ರ ಹಸಿವಿನ ಕಷ್ಟ ಮತ್ತು ಅನ್ನದ ಬೆಲೆಯ ಅರಿವಾದೀತು...
ವಾಹ್ ..!!! ಏನೆನ್ನಲಿ ಈ ಸಾಲುಗಳಿಗೆ..
ಇನ್ನೊಬ್ಬರ ಹಸಿವು ಈಗೊಂದು ನಾಲ್ಕು ವರ್ಷಗಳ ಹಿಂದೆ ಅನ್ನದ ಬೆಲೆಯನ್ನು ನನಗೆ ತಿಳಿಸಿತ್ತು.
ಎಲ್ಲ ಭಾವಗಳೂ ಚಂದವೇ ಶ್ರೀ ...
ನಾನೂ ಕೂಡಾ ಎಲ್ಲೆಲ್ಲೋ ಹೇಳಬೇಕೆಂದುಕೊಂಡ ಭಾವಗಳು
ReplyDeleteನಿನ್ನೀ ಸುಂದರ ಮನಮುಟ್ಟುವ ಶಬ್ಧದ ಸಾಲುಗಳು....
ಗೆಳೆಯಾ ನಗುವ ನೀಡಲೆಂದೇ ಹೊರಟು ಕಣ್ಣಿರು
ಕರುಣಿಸಿ ಬರುವ ಬೇಸರದ ನಡುವೆ ಒಂದು ಸಮಾಧಾನಕರ
ವಿಷಯವೆಂದರೆ ಎಲ್ಲರೂ ಕಣ್ಣೀರಾಗೋದು ಆಪ್ತರ ಎದುರಿಗೇನೇ... ಎಂಬುದು...
"ಕಿಸೆ ಖಾಲಿಯಿರುವಾಗ ಹೊಟ್ಟೆಗೆ ಹಸಿವಾಗಬೇಕು ಅಥವಾ ಹಂಗಿನ ಊಟದಲ್ಲಿ ಹಸಿವ ನೀಗಿಸಿಕೊಳ್ಳಬೇಕಾದ ಅಸಹಾಯಕತೆ ಕಾಡಬೇಕು...
ಹಾಗಾದಾಗ ಮಾತ್ರ ಹಸಿವಿನ ಕಷ್ಟ ಮತ್ತು ಅನ್ನದ ಬೆಲೆಯ ಅರಿವಾದೀತು..."
ತುಂಬಾ ಸತ್ಯದ ಮಾತು....
ಖಂಡಿತಾ ಯಾರಿಗೂ ಈ ಪರಿಸ್ಥಿತಿ ಬಾರದಿರಲಿ... ಆದರೆ...
ಪ್ರತಿಯೊಬ್ಬರಿಗೂ ಇದರ ಕಲ್ಪನೆಯಿರಲಿ.....
ಒಳ್ಳೆ ಮಾತ್ರ...!!
I'm Speechless Shri.. Wonderful..
ReplyDeleteನೀನಾದರೋ ನೀಡಿದೆಲ್ಲ ನೋವನೂ ಮೌನದಲೇ ನುಂಗಿ ಮತ್ತೆ ನಗುತಲೇ ಮಾತು ಶುರುವಿಡೋ ಮೌನಗೌರಿ... ವಾವ್ ತುಂಬಾ ಚೆನ್ನಾಗಿದೆ.
ReplyDeleteಭಾವ ಬರಹ ಎರಡೂ ಮನ ಮುಟ್ಟಿತು .
ReplyDeleteಮೌನಗೌರಿಯ ಬಗೆಗೆ ನೀವಿಟ್ಟ ಮಾತುಗಳು ಇಷ್ಟವಾಯ್ತು .
ಭಾವಗೊಂಚಲ ವಿಸ್ತಾರದ ಬಯಲಲ್ಲಿ ಇನ್ನಷ್ಟು ಭಾವಗಳ ಹೊಳೆ ಹರಿಯಲಿ .
ಭಾವಗಳ ಬಯಲಲ್ಲಿ ಬದುಕು ದಕ್ಕಿದಾಗ ಮಾತ್ರ ಹೀಗಿಷ್ಟು ಸೋನೆ ಸುರಿದೀತು
ReplyDeleteಚೆಂದ ಚೆಂದ, ಮಳೆ ಹನಿಯಂತೆ...