Thursday, January 3, 2013

ಗೊಂಚಲು - ಐವತ್ತಾರು.....

ಮನೆಯಂಗಳದ ಜಲಧಾರೆ.....

ಹಲವಾರು ಜಲಪಾತಗಳ ಜಿಲ್ಲೆ ಉತ್ತರ ಕನ್ನಡ. ಹಲವು ಪ್ರಸಿದ್ಧ ಸರ್ವಋತು ಜಲಪಾತಗಳೊಟ್ಟಿಗೆ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕಿ ಬೇಸಿಗೆ ಇಣುಕುವ ಹೊತ್ತಿಗೆ ಬತ್ತಿ ಹೋಗುವ ನೂರಾರು ಜಲಪಾತಗಳು ಈ ಜಿಲ್ಲೆಯ ವೈಶಿಷ್ಟ್ಯ. ಆ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನವನು ನಾನು. ಯಲ್ಲಾಪುರದಿಂದ 28 ಮೈಲಿ ದೂರದ 'ಕಂಚೀಮನೆ' ನನ್ನೂರು. ದಟ್ಟ ಕಾಡಿನ ನಡುವೆಯ ಪುಟ್ಟ ಹಳ್ಳಿ. ನನ್ನ ಮನೆಯಂಗಳದಿಂದ ನಾಲ್ಕು ಮೈಲಿಯಷ್ಟು ಹೆಜ್ಜೆ ಸಾಗಿದರೆ ದಟ್ಟ ಕಾನನದ ಗೌವ್ವೆನ್ನುವ ನೀರವ ಮೌನದ ಮಧ್ಯೆ ಕೇಳುತ್ತೆ ಹರಿವ ಸಣ್ಣ ಹಳ್ಳದ ನೀರು ಧಾರೆಯಾಗಿ ಧುಮ್ಮಿಕ್ಕುವ ಧೋ ಎಂಬ ಸದ್ದು. ಮೈಲಿಯಾಚೆಯಿಂದಲೆ ಕೇಳುವ ನೀರಧಾರೆಯ ಸದ್ದಿಗೆ ಕಿವಿದೆರೆದು ಸಾಗಿದರೆ ಕಣ್ಣಿಗೊಂದು ಹಬ್ಬ ದಕ್ಕುತ್ತದೆ. ಸುಮಾರು 200 ಅಡಿಗಳಷ್ಟು ಎತ್ತರದಿಂದ ಕೆಳ ಧುಮುಕುವ ಜಲಪಾತಕ್ಕೆ ಸ್ಥಳೀಯರಿಟ್ಟ ಹೆಸರು "ಎಮ್ಮೆಶೀರಲ ವಜ್ರ". ವಜ್ರ ಅಂದರೆ ಜಲಪಾತ ಎಂದರ್ಥವಂತೆ. ಎಮ್ಮೆಶೀರಲ ಅನ್ನೋ ಹೆಸರಿನೊಂದಿಗೆ ಒಂದಷ್ಟು ಎಮ್ಮೆಗಳು ಮಳೆಗಾಲದ ನೀರ ಸೆಳವಿಗೆ ಸಿಕ್ಕಿ ಈ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟವು ಹಾಗಾಗಿ ಈ ಹೆಸರು ಎಂಬ ಪ್ರತೀತಿಯಿದೆ. ಇದೆಷ್ಟು ಸತ್ಯವೋ ಗೊತ್ತಿಲ್ಲ. ಅದೇನೇ ಇರಲಿ ಹಸಿರು ಮತ್ತು ನೀರ ಧಾರೆಯ ಚೆಲುವಿನಿಂದ ಈ ಜಲಪಾತ ಕಣ್ಮನ ತಣಿಸುವುದಂತೂ ಸತ್ಯ. ಚಾರಣ ಪ್ರಿಯರಿಗೊಂದು ಚಂದದ ತಾಣ. ಆದರೆ ಈ ಜಲಪಾತ ಮಳೆಯ ದಿನಗಳಲ್ಲಿ ಮಾತ್ರ ತುಂಬಿ ಹರಿಯುತ್ತೆ ಅನ್ನೋದು ಬೇಸರದ ಸಂಗತಿ. ಇಲ್ಲಿಗೆ ಹೋಗೋಕೆ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳವರೆಗಿನ ದಿನಗಳು ಮಾತ್ರ ಸೂಕ್ತ. ಅದರಲ್ಲೂ ಅಕ್ಟೋಬರ್ ಕೊನೆಯಲ್ಲಿ ತುಂಬಾ ಚಂದವಿರುತ್ತೆ. ಆದರೆ ಅಷ್ಟೇ ಅಪಾಯ ಕೂಡ.
ಈ ಬಾರಿ ಮನೆಗೆ ಹೋದಾಗ ನನ್ನವರೊಂದಿಗೆ ಮತ್ತೊಮ್ಮೆ ಈ ಜಲಪಾತಕ್ಕೆ ಹೋಗಿದ್ದೆ. ನೀರು ಖಾಲಿಯಾಗ್ತಿರೋ ದಿನಗಳಿವು. ಆದರೂ ಖುಷಿಗೆ ಕೊರತೆ ಆಗಲಿಲ್ಲ. ನನ್ನ ತಂಡದ ಜತೆಗೆ ನನ್ನ ಅಮ್ಮನೂ ಇದ್ದಳೆಂಬುದು ನನ್ನ ಖುಷಿಗೆ ಮೆರಗು ತಂದಿತ್ತು.
ನನ್ನ ಕ್ಯಾಮರಾ ಕಣ್ಣಲ್ಲಿ ಬಂಧಿಯಾದ ಚಾರಣದ ಕೆಲ ನೆನಪಿನ ಝಲಕುಗಳು ನಿಮಗಾಗಿ ಇಲ್ಲಿವೆ. ನಿಮಗೂ ಇಷ್ಟವಾದೀತೆಂದುಕೊಂಡಿದ್ದೇನೆ.
ಹೀಗೆ ಸಾಗಿತ್ತು ಕಾಡುದಾರಿಯ ಪಯಣ...




ಆಯಿ...

ಕಾಲು ಜಾರಿದರೆ ಕೈಲಾಸವೇ ಗತಿ...



ಮುಖ್ಯ ಜಲಧಾರೆ...


ಕಲ್ಲ ಮೇಲೆ ಹಸಿರ ಹಾಸು...





ಸಾಹಸ ಪ್ರಿಯರು...:)



ಪ್ರಕೃತಿ ನಿರ್ಮಿತ ಈಜುಕೊಳ...

ಇಲ್ಲಿಂದ ಧುಮುಕುತ್ತೆ ನೀರು...

ಮೇಲಿಂದ ಕೆಳ ನೋಡಿದಾಗ...

ಜಲಪಾತದ ಮೇಲಿಂದ ಕಾಡಿನೆಡೆಗೆ ಕಣ್ಣು ಹಾಯಿಸಿದಾಗ...



ಬಂಡೆ ಗಾತ್ರದ ಕಲ್ಲುಗಳು...:)

10 comments:

  1. ಉತ್ತರ ಕನ್ನಡ ಜಿಲ್ಲೆಯ ಸೊಬಗಿಗೇನು ಸಾಟಿ. ಚೆನ್ನಾಗಿದೆ :)

    ReplyDelete
  2. ಏನೇ ಹೇಳು ಚಾರಣ ಮಸ್ತ್ ಆಗಿದ್ದಂತೂ ಹೌದು.....

    ಒಳ್ಳೆ ಜಾಗ ಮಾತ್ರ.....

    ReplyDelete
  3. ಕಂಚಿಮನೆಯ ಚಿತ್ರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  4. ಶಿರ್ಲೆ ಫಾಲ್ಸ್ ಅಲ್ವಾ ಇದು ?

    ReplyDelete
    Replies
    1. ವೀಣಾ ಜೀ -
      ಇದು ಶೀರ್ಲೆ ಫಾಲ್ಸ್ ಅಲ್ಲ. ನನ್ನ ಮನೆ ಹತ್ತಿರದ 'ಎಮ್ಮೆಶೀರಲ ವಜ್ರ' ಎಂಬ ಫಾಲ್ಸ್.

      Delete
  5. ಅದ್ಭುತವಾಗಿದೆ....:)

    ReplyDelete
  6. ವಾವ್ ಚೆನಾಗಿದೆ ಸಾರ್...
    ಅಂದದ ಚಿತ್ರಗಳು...
    ಬರ್ತೀವಿ ಒಂದ್ಸಲಾ ....

    ReplyDelete
  7. ವಿದೇಶದಲ್ಲಿ ಕುಳಿತು ಭಾರತದ ಈ ನೈಜ ಚಿತ್ರಗಳು ಮೈನವಿರೇಳಿಸಿತು. ಈ ಭಾವಚಿತ್ರಗಳನ್ನು ಸೆರೆಹಿಡಿದ ಕ್ಯಾಮರಾ ಒಳನೋಟ ಅದ್ಬುತವಾಗಿದೆ. ಇದು ನೀವೇ ತೆಗೆದಿದ್ದರೆ ಉತ್ತಮ ಛಾಯಾಗ್ರಾಹಕರು ಹೌದು.
    ಅಭಿನಂದನೆಗಳು. ಇದರಲ್ಲಿ "ಆಯಿ" ಭಾವಚಿತ್ರ , ನೀರ್ಗಲ್ಲುಗಳ ಭಾವಚಿತ್ರ ಮತ್ತು ಅದರೊಳಗಿನ ಭಾವಗಳು ಚೆನ್ನಾಗಿದೆ.

    ReplyDelete
    Replies
    1. ಧನ್ಯವಾದಗಳು ರವಿ ಜೀ -
      ನನ್ನ ಹುಟ್ಟಿದೂರಿನ ಜಲಪಾತ ಇದು...ಖಂಡಿತಾ ಈ ಎಲ್ಲಾ ಚಿತ್ರಗಳೂ ನನ್ನ ಪುಟ್ಟ ಕ್ಯಾಮರಾದಲ್ಲಿ ನಾನೇ ಸೆರೆಹಿಡಿದ ಛಾಯಾಚಿತ್ರಗಳು...

      Delete