Wednesday, November 27, 2013

ಗೊಂಚಲು - ತೊಂಬತ್ತೆಂಟು.....

ಮುಂಜಾನೆಯ ಹಾಡುಗಳು.....

ಇಬ್ಬನಿಯ ತಂಪಲ್ಲಿ ಬೆರೆತು ಸವಿ ನೆನಪುಗಳು ಮಾತಾಡುತಿವೆ...
ಈ ದಿನಕೊಂದು ಮಧುರ ಮುನ್ನುಡಿ...
****
ಈ ದಾರಿ, ಈ ಗಾಳಿ, ಪ್ರಕೃತಿಯ ಮಧುರ ಮೌನ, ಸಂತೆ ನಡುವೆಯೂ ಹಾಡುವ ಒಂಟಿ ಒಂಟಿ ಭಾವ...
ಈ ಬೆಳಗಿಗೆ ಒಂಥರಾ ಮಧುರ ಯಾತನೆ...
****
ಅದೇ ಬೆಳಗು – ಅದೇ ನಗು ಹೊಸ ಭಾವದಲಿ ಹೊರಹೊಮ್ಮಿ ಈ ಬೆಳಗಿಗೊಂದು ಹೊಸತನ...
****
ಬೆಳಕು ಕಾಯಲಿ ಬದುಕ... 
ಕಾವ ಕಾಣ್ಕೆಯ ಕನಸ ಈ ಬೆಳಗು...
****
ತುಂಬಿಕೊಳ್ಳುವ ತುಡಿತದ ಖಾಲಿ ಖಾಲಿ ಬೆಳಗು...
****
ಮತ್ತದೇ ಕಾಡುವ ಹಾಡಿನಂಥ ನಿನ್ನ ನೆನಪು ಈ ಬೆಳಗಿನ ಸೊಬಗು...
****
ನಿದಿರೆ ಮಡಿಲಿಂದೆದ್ದು ಕನಸ ಚಾದರ ಸರಿಸಿ ಮೈಮುರಿದು ಕಣ್ಬಿಟ್ಟ ನಿನ್ನಲ್ಲಿ; ಕಂಡ ಕನಸ ನನಸಾಗಿಸಿಕೊಂಡು ಹೆಮ್ಮೆಯ ನಗು ಬೀರಲು ಮುಂದಡಿಯಿಡುವ ಚೈತನ್ಯವ ತುಂಬಲಿ ಈ ಬೆಳಗು...
****
ಬೆಳಗೆಂದರೆ ನಂಗೆ - ನಿನ್ನ ನಗೆಯ ನೆನಪು - ದಿನವೆಲ್ಲ ಖುಷಿಯ ಒನಪು...
****
ಮುಂಬೆಳಗಲ್ಲಿ ನಿನ್ನ ಮುಗುಳ್ನಗೆಯ ಕನಸು – ನಚ್ಚಗಾದ ಮನಸು - ಮಂದಾರ ಅರಳಿದಂತೆ ಬಿಚ್ಚಿಕೊಂಡ ಈ ಮಧುರ ಮುಂಜಾನೆಗೊಂದು ಶುಭಾಶಯ...
****
ಬೆಳಗೆಂದರೆ ಭರವಸೆ - ಶುಭದಿನದ ಮುನ್ನುಡಿ...
ಚಂದದ ದಿನವೊಂದು ಹಸುಳೆಯ ನಗುವಂತೆ ಬಿಚ್ಚಿಕೊಳ್ಳಲಿ...

8 comments:

  1. ತುಂಬಾ ದಿನಗಳ ನಂತರ ಹೀಗೊಂದು ನಗುವ ಬೆಳಗು :)
    ಖಾಲಿ ಖಾಲಿ ಬೆಳಗೀಗ ನಗುವ ಅಲೆಗಳ ,ಹೊಸ ಕನಸುಗಳ ,ಮಧುರ ನೆನಪುಗಳ ಮಿಳಿತದ ಖುಷಿಯ ಬೆಳಗಾಗಿ ಮಾರ್ಪಟ್ಟಿದ್ದು ಖುಷಿ ಕೊಡ್ತು.
    ಇರಲಿ ಈ ಖುಷಿಯ ಬೆಳಗು,ಮುಸ್ಸಂಜೆ ಯಾವತ್ತೂ ಹೀಗೆ .
    ಖುಷಿಸೋಕೆ ನಾವೂ ಇದ್ದೀವಿ ಜೊತೆ.
    ಚಂದದ ಭಾವಗುಚ್ಚ :)
    (ಅಂದ ಹಾಗೆ ನೂರರ ಭಾವಕ್ಕೆ ಪಾರ್ಟಿ ಬೇಕು ...ನೂರರ ಹೊಸ ಭಾವದ ಕುತೂಹಲದಲ್ಲಿ)

    ReplyDelete
  2. ಬಲು ಬೇಗ ನೂರಾಗಲಿ.

    ReplyDelete
  3. ಇದಕ್ಕೆ ನಾನು ಕಾಮೆಂಟ್ ಮಾಡುವ ಅವಶ್ಯಕಥೆಯೇ ಇಲ್ಲಾ.....
    ಒಳ್ಳೆಯ ಸಾಲುಗಳು...
    ಶುಭವಾಗಲಿ..........

    ReplyDelete
  4. ಅದೇ ಬೆಳಗು – ಅದೇ ನಗು ಹೊಸ ಭಾವದಲಿ ಹೊರಹೊಮ್ಮಿ ಈ ಬೆಳಗಿಗೊ೦ದು ಹೊಸತನ
    ಬಹಳ ಚನ್ನಾಗಿದೆ ಶ್ರೀವತ್ಸ...

    ReplyDelete

  5. ಬೆಳಕಿನೆಡೆಗೆ ಭಾವಗಳ ನಡಿಗೆ ...
    ಮುಂಜಾನೆಯಷ್ಟೇ ಚಂದ ,...
    ಎಳೆ ಚಿಗುರ ತಬ್ಬಿದ ಇಬ್ಬನಿಗಳಂತೆ ...

    ReplyDelete