ನನ್ನ ಮನಸು.....
ಬೇಲಿಯ ಹಂಗಿಲ್ಲ - ಕಾವಲುಗಾರ ಬೇಕಿಲ್ಲ – ಕಾರಣ: ಕಾಯಬೇಕಾದದ್ದೇನೂ ಉಳಿದಿಲ್ಲ – ಫಸಲೆಲ್ಲ ಒಣಗಿಹೋದ ಖಾಲಿ ಖಾಲಿ ಬಯಲು – ಅದು ನನ್ನ ಮನಸು...
ಹೊಸ ಕನಸೊಂದು ಕರೆ ಮಾಡಿ ಹಾಯ್ ಅನ್ನ ಬಂದರೆ – ಕರೆ ಸ್ವೀಕರಿಸಲು ಕಳಕೊಂಡ ಕನಸುಗಳ ನೆನಪು - ಮತ್ತೊಂದು ಕನಸನು ಆ ಸಾಲಿಗೆ ಸೇರಿಸಿ ಯಾದಿ ಬೆಳೆಸಿದಂತಾದೀತೆಂಬ ಭಯದ ಮಂಪರು – ಅದು ನನ್ನ ಮನಸು...
ನಿನ್ನೆ ಎಲ್ಲ ಇತ್ತು – ಇಂದೀಗ ಎಲ್ಲ ಶೂನ್ಯ – ನಾಳೆಗಳಲೂ ಶೂನ್ಯವೇ ಶಾಶ್ವತವಾದೀತೆಂಬ ಭಯದ; ಯಜಮಾನ ಅಳಿದ ಸಾವಿನ ಮನೆಯ ಹಗಲು – ಅದು ನನ್ನ ಮನಸು...
ನಾನೆಂಬ ನನ್ನಹಂಮ್ಮಿನ ಗುಂಗಲ್ಲಿ – ನಿನ್ನೆ ನಾಳೆಗಳ ಹಂಗಲ್ಲಿ – ಹಳಸಿದವುಗಳ, ಅಳಿದವುಗಳ - ನನ್ನೆಲ್ಲ ಒರಟುತನದಲ್ಲಿ ದಹಿಸಿಯೂ ಉಳಿಯಲು ಒದ್ದಾಡುವವುಗಳ ಲೆಕ್ಕಾಚಾರಗಳಲ್ಲಿ ನಿದ್ದೆ ಸತ್ತ ಇರುಳು – ಅದು ನನ್ನ ಮನಸು...
ಪ್ರೀತಿಯ ಉಣಿಸಲಾರದ – ಯಾರೋ ನನಗುಣಿಸಬಂದರೆ ಉಣ್ಣಲೂ ಬಾರದ ಉರುಟು ಬಂಡೆ – ಯಾರಿಗೂ ನೆರಳು ಕೂಡ ಆಗದ ಜಾಲಿ ಮರ – ಅದು ನನ್ನ ಮನಸು...
ಜೀವಂತಿಕೆ ಇಲ್ಲದ – ಒಣ ಮಾತುಗಳಲ್ಲಿ ನಗುವಿನ ಕಾರಣ ಹುಡುಕುತ್ತಾ; ಮೂಲ ಖುಷಿಯ ಭಾವವನೇ ಕೊಲ್ಲುವ – ಶವ ಪರೀಕ್ಷಕ ಅಥವಾ ಹೆಣದ ಮನೆಯ ಒಡೆಯನ ನಿರ್ಭಾವುಕತೆ – ಅದು ನನ್ನ ಮನಸು...

ನಿರ್ಭಾವುಕ ಮನಸ್ಸು ಬೆಳೆಸಿಕೊಳ್ಳುವುದು ಕೂಡಾ ಸಾಧನೆಯ ಒಂದು ಅಂಶ...
ReplyDeleteಮನಸ್ಸು ನಿರ್ಭಾವುಕವಾಯಿತು ಅಂತಾದರೆ ಅದು ಬಿಳಿ ಹಾಳೆ ಅಂತಾಯಿತು...
ಅದರಲ್ಲಿ ನಾವು ನಮಗೆ ಬೇಕಾಗಿದ್ದನ್ನ ಗೀಚಿಕೊಂಡರಾಯಿತು.....
ಸಂತಸವನ್ನೇ ಗೀಚಿಕೊಳ್ಳೊಣ ಬಿಡು...
ಚಂದದ ಬರಹ....
well said Raghav :-)
DeleteThis comment has been removed by the author.
Delete:)
ReplyDeleteನಿರ್ಭಾವುಕ ಮನಸ್ಸನ್ನು ಭಾವಗಳಲ್ಲಿ ಕೂಡಿ ಹಾಕೋ ಪ್ರಯತ್ನವಾ ???
ReplyDelete#$%&**&^%$ #$%%^*(*&^$
ReplyDeleteಈ ದ್ವಂದ್ವಗಳ ನಡುವೆಯೇ ಏನೋ ಹೀಗೊಂದಿಷ್ಟು ಖಾಲಿ ಬೆಳಗು ಈ ಮನದ ಆತ್ಮೀಯರನ್ನ ದಿನವೂ ಸ್ವಾಗತಿಸುತ್ತಿರೋದು :(
ReplyDeleteಈ ಮನ ಕಳೆದು ಅಲ್ಲೊಂದಿಷ್ಟು ಜೀವ ಸೆಲೆ ಚಿಮ್ಮಲಿ ...
ಪ್ರೀತಿಯಾದೀತು ಪ್ರೀತಿಸೋ ಮನಗಳಿಗೂ :)
ಮನ ಮುಟ್ಟಿತು ಭಾವ ಬರಹ
ಬೇಸಿಗೆಯಲ್ಲಿ ಎಲ್ಲಾ ಒಣಗಿದಂತಿದ್ದರೂ ಒಂದು ಹನಿ ಮಳೆ ಬಿದ್ದಂತೆ ಎಲ್ಲಾ ಹಸಿರೋ ಹಸಿರು... ಹಳದಿ ಹಸಿರುಗಳೆಲ್ಲಾ ಕಾಲಾಂತರದ ರೂಪಾಂತರಗಳಲ್ಲವೇ ವತ್ಸಣ್ಣ.. ಏನೂ ಇಲ್ಲವೆಂದರೂ ಅಲ್ಲಿ ಏನೋ ಇದ್ದೇ ಇರುತ್ತೆ ;-)
ReplyDeleteಒಂದು ಒಳ್ಳೆಯ ಬರಹ....
ReplyDelete