ಆಗೊಂದು ಹುಚ್ಚು ನಗು - ಅಲ್ಲೊಂದು ಕರುಳ ಹನಿ
ಸವೆಸಿದ ಈ ದಾರಿಯಲ್ಲಿ ಉಳಿದ ಹೆಜ್ಜೆ ಗುರುತು.....
(ಈ ಭಾವದಂಗಳಕೀಗ ಭರ್ತಿ ಐದು ವಸಂತಗಳು...)
ಬದುಕಿದು ಫಕ್ಕನೆ ಪಥ ಬದಲಿಸಿ ಪೂರ್ವದಿಂದ ದಕ್ಷಿಣದೆಡೆಗೆ ಹೊರಳಿದ ಸಂಧಿಕಾಲ...
ಒಮ್ಮೆಲೆ ಹತ್ತಾರು ಕಂಗಾಲುಗಳು...
ಬೆಳದಿಂಗಳಲಿ ಮಿಂದು, ಕನಸುಗಳ ಹೊದ್ದು ಬೆಚ್ಚೆಗೆ ಮಲಗಿದ್ದವನು ಬೆಚ್ಚಿಬಿದ್ದಿದ್ದೆ...
ಒಂದು ಮುಟಿಗೆ ಬೆಳದಿಂಗಳು ದಕ್ಕಬೇಕೆಂದರೂ ಸುತ್ತ ಹತ್ತು ಬೀದಿಗೆ ಕರೆಂಟ್ ಹೋಗಬೇಕಾದ ಈ ಊರನ್ನ ನೆನೆದೇ ದಂಗಾಗಿದ್ದೆ...
ಮಹಾನಗರಿಯಲ್ಲಿ ಹೊಟ್ಟೆ ತುಂಬೀತು, ಆದರೆ ಭಾವದ ಹಸಿವಿಗೇನ ಮಾಡಲಿ ಕಂಗಾಲಿನಿಂದ ಕೇಳಿದ್ದೆ ಗೆಳೆಯನ...
ಅಕ್ಷರವಾಗಿಸು ಭಾವಗಳ – ಸ್ನೇಹಗಳು ಬಳಸುತ್ತವೆ ಬದುಕನ್ನ ಅಂದಿದ್ದ ಜೀವದ ಗೆಳೆಯ... http://kanasukangalahuduga.blogspot.in/
ಇಲ್ಲಿ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಹೊತ್ತಲ್ಲೇ ನಿನ್ನ ಆಂತರ್ಯಕ್ಕೊಂದು ವಿಸ್ತಾರ ಸಿಗಲಿ, ನಗು ಸುಲಭವಾದೀತು ಅಂತಂದು ಹೀಗೊಂದು ಅಂಗಳ ಸೃಷ್ಟಿಸಿಕೊಟ್ಟ ಇನ್ನೊಬ್ಬ ಆತ್ಮದ ಗೆಳೆಯ... http://samudrateera.blogspot.in/
ಕಾದಿಟ್ಟುಕೊಂಡ ಹಾಗೂ ಆಗೀಗ ಅಲ್ಲಲ್ಲೇ ಹುಟ್ಟಿ ಅಲ್ಲೇ ಸಾಯುವ ಅಷ್ಟಿಷ್ಟು ಆಪ್ತ ಭಾವಗಳಿಗೆಲ್ಲ ಅಕ್ಷರದ ಅಂಗಿ ತೊಡಿಸುತ್ತ ಹೋದೆ...
ಕನಸಿಲ್ಲದ ದಾರಿಯನ್ನೂ ಆಪ್ತವಾಗಿಸುವ ಕಾಲನೂ ಅಳಿಸದೆ ಉಳಿಸಿದ ಮಧುರ ನೆನಪುಗಳು – ಒಡೆದ ಕನ್ನಡಿಯ ಚೂರುಗಳಲ್ಲೂ ಅರೆಬರೆಯಾಗಿಯಾದರೂ ಮೂಡುವ ಪ್ರತಿಬಿಂಬದಂತೆ ವಾಸ್ತವತೆಯ ವಿರೋಧದ ನಡುವೆಯೂ ಹುಟ್ಟೋ ಪುಟ್ಟ ಪುಟ್ಟ ಕನಸುಗಳು – ಬಯಲ ಮೌನಕ್ಕೂ, ಗವಿಯ ಮಾತಿಗೂ, ನಗೆ ಬೆಳಕಿಗೂ, ನೋವ ಕತ್ತಲ ಮೂಲೆಗೂ ಜೊತೆನಿಲ್ಲುವ ಸ್ನೇಹಭಾವಗಳು – ಒಟ್ಟಾರೆಯಾಗಿ ನನ್ನೊಳಗೆ ಆ ಆ ಕಾಲಕ್ಕೆ ರೂಪು ತಳೆದ ಕಾಮದಿಂದ ಹಿಡಿದು ಕೈವಲ್ಯದವರೆಗಿನ ಎಲ್ಲಾ ಭಾವಗಳನೂ ಯಾವುದೇ ಪೂರ್ವಗ್ರಹ ಮತ್ತು ಮಡಿವಂತಿಕೆಯನು ಮೀರಿ ಅದಿದ್ದಂತೆಯೇ ಅಕ್ಕರೆಯಿಂದ ಇಲ್ಲಿಯ ಗೊಂಚಲುಗಳನಾಗಿಸಿದೆ...
ಅಂಥ ನನ್ನ ಭಾವಲೋಕದ ಅಕ್ಷರ ರೂಪದ ಹೊರಾಂಗಣಕ್ಕೆ ನಾನಿಟ್ಟುಕೊಂಡ ಹೆಸರು:
“ಭಾವಗಳ ಗೊಂಚಲು...”
ಮಹಾನಗರಕ್ಕೆ ಬಂದು ಏನು ಕಡಿದು ಕಟ್ಟೆ ಹಾಕಿದೆ ಅಂತ ಕೇಳಿದ್ರೆ ಹೇಳೋಕಿರೋ ದೊಡ್ಡ ಸಾಧನೆ ಇದೊಂದೇ...
ನನ್ನೊಳಗಣ ನನ್ನನೂ ಖುಷಿಯಾಗಿಟ್ಟ, ಶಾಂತವಾಗಿಟ್ಟ ಏಕೈಕ ಸಾಧನೆ...
ಇನ್ನಷ್ಟು ಆತ್ಮ ಸಾಂಗತ್ಯದ ಸ್ನೇಹಗಳು ಮತ್ತು ನಿಮ್ಮೆಲ್ಲರ ಪ್ರೀತಿ ಜೊತೆಯಾದದ್ದು ಈ ಅಂಗಳದಿಂದಲೇ...
ಏನನ್ನ ಬರೆದು ತುಂಬಿದೆ ಅಂತಂದರೆ ಹೊಸದೇನೂ ಇಲ್ಲ...
ಮತ್ತೆ ಮತ್ತೆ ಕಾಡುವ ಅದದೇ ಭಾವಗಳ ಬೇರೆ ಬೇರೆ ಶಬ್ಧಾಲಂಕಾರದಿಂದ ಒಂದೊಂದೇ ಎಳೆಯಾಗಿ ಪೋಣಿಸಿದ್ದಷ್ಟೇ...
ಬೇರೆ ಬೇರೆ ಬಣ್ಣದ ಶಬ್ದಗಳ ಅಂಗಿ ತೊಟ್ಟ ಅದೇ ಹಳೆಯ ಭಾವಗಳು - ಅದೇ ಅಡಿಗೆ ಆದರೆ ಉಪ್ಪು ಖಾರದ ಮಿಶ್ರಣದಲ್ಲಷ್ಟೇ ವ್ಯತ್ಯಾಸ...
ಅಷ್ಟಾದರೂ ಓದಿ ಮೆಚ್ಚಿ ಅಭಿಮಾನವ ಸುರಿಸಿದ ನಿಮ್ಮ ಪ್ರೀತಿ ಬಲು ದೊಡ್ಡದು – ಆಗೀಗ ಇದು ನನ್ನದೂ ಭಾವ ಕಣೋ ಅಂತ ನೀವಂದದ್ದು ಈ ಜೀವ ಭಾವಕ್ಕೆ ಸಿಕ್ಕ ಬಹು ದೊಡ್ಡ ಪುರಸ್ಕಾರ...
ನಿಮ್ಮಗಳ ಆ ಪ್ರೀತಿಗೊಂದು ನಮನ...
ಹೌದು ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ; ಮತ್ತೇನಿಲ್ಲ “ಭಾವಗಳ ಗೊಂಚಲು...” ಎಂಬ ನನ್ನೀ ಅಕ್ಷರಯಾನಕ್ಕೆ ಇಂದು ಭರ್ತಿ ಐದು ವಸಂತ ತುಂಬಿತು...!!!
ಮುಂದೆಯೂ ಬರೆದೇನು ಭಾವ ಕಾಡಿದರೆ – ಜೀವ ಹಾಡಿದರೆ...
ಬರೆದುದಾದರೆ ಇರಲಿರಲಿ ಹೀಗೆಯೇ ನಿಮ್ಮ ಓದಿನ ಆರೈಕೆ...
ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

ಕಾದಿಟ್ಟುಕೊಂಡ ಹಾಗೂ ಆಗೀಗ ಅಲ್ಲಲ್ಲೇ ಹುಟ್ಟಿ ಅಲ್ಲೇ ಸಾಯುವ ಅಷ್ಟಿಷ್ಟು ಆಪ್ತ ಭಾವಗಳಿಗೆಲ್ಲ ಅಕ್ಷರದ ಅಂಗಿ ತೊಡಿಸುತ್ತ ಹೋದೆ. - ಹೀಗೆ ಬಣ್ಣ ಬಣ್ಣದ ಅಂಗಿಗಳನ್ನು ತೊಡಿಸುತ್ತಲೇ ಇರಿ... ಅಭಿನಂದನೆಗಳು
ReplyDeleteಬರೆದದ್ದನ್ನ ಓದಿ ಹರಸಿ ಹಾರೈಸಿದವರದ್ದು ಒಂದು ದಡೆಯಾದರೆ
ReplyDeleteನಮ್ಮೊಳಗಿನ ಭಾವದ ಭಾರವನ್ನು ಇಳಿಸಿ ನಾವೇ ಹಗುರಾಗಿಸಿಕೊಂಡಿದ್ದು ಒಂದು ದಡೆ.....
ಸಂತಸದ ವಸಂತ ಐದು ಐವತ್ತಾಗಲಿ ಗೆಳೆಯ.....
ಬರೆದದ್ದನ್ನ ಓದಿ ಹರಸಿ ಹಾರೈಸಿದವರದ್ದು ಒಂದು ದಡೆಯಾದರೆ
ReplyDeleteನಮ್ಮೊಳಗಿನ ಭಾವದ ಭಾರವನ್ನು ಇಳಿಸಿ ನಾವೇ ಹಗುರಾಗಿಸಿಕೊಂಡಿದ್ದು ಒಂದು ದಡೆ.....
ಸಂತಸದ ವಸಂತ ಐದು ಐವತ್ತಾಗಲಿ ಗೆಳೆಯ.....
ಅಭಿನಂದನೆಗಳು
ReplyDeleteಚಂದದ ಭಾವಗಳು.. ಪ್ರತೀ ಅಕ್ಷರಗಳಲ್ಲಿಯೂ ಭಾವನೆಗಳು ಸೇರಿ ಗೊಂಚಲೇ ಆಗಿದೆ..ಮತ್ತಷ್ಟು ಮೊಗೆದಷ್ಟು ವರುಷಗಳು ಈ ಭಾವಜೀವಿಯ ಭಾವದಕ್ಷರಕ್ಕೆ ಇರಲೆಂದು ಹಾರೈಸುತ್ತೇನೆ..
ReplyDelete:)